ಸಯನ್ ನ ಶ್ರೀ ನಿತ್ಯಾನಂದ ಸಭಾಂಗಣದಲ್ಲಿ ಮಿಯ್ಯಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ದಾರದ ಸಮಾಲೋಚನಾ ಸಭೆ

ಸಯನ್ ನ ಶ್ರೀ ನಿತ್ಯಾನಂದ ಸಭಾಂಗಣದಲ್ಲಿ  
 ಮಿಯ್ಯಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ದಾರದ ಸಮಾಲೋಚನಾ ಸಭೆ


 ದೇವಸ್ಥಾನದ ಜೀರ್ಣದ್ದಾರಗೊಂಡಾಗ  ಗ್ರಾಮದ ಅಭಿವೃದ್ಧಿ: 
ರಘುವೀರ್ ಎ ಶೆಟ್ಟಿ, ನಲ್ಲೂರು.

ಚಿತ್ರ ವರದಿ : ದಿನೇಶ್ ಕುಲಾಲ್ 

ಮುಂಬಯಿ  ಅ 8.ಉಡುಪಿ ಜಿಲ್ಲಾ ಕಾರ್ಕಳ ತಾಲೂಕು ಮಿಯ್ಯಾರು,ಮುಡಾರು,ನಲ್ಲೂರು,ರೆಂಜಾಳ,ಇರ್ವತ್ತೂರು ಐದೂರು ಮಾಗಣೆಯ ಮಿಯ್ಯಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ದಾರ ಪ್ರಯುಕ್ತ  ಅ 7 ನೇ ಶನಿವಾರ  ಮುಂಬೈಯ ಸಯನ್ ನ ಶ್ರೀ ನಿತ್ಯಾನಂದ ಸಭಾಂಗಣದಲ್ಲಿ ಭಕ್ತರ ಸಮಾಲೋಚನಾ  ಸಭೆಯುಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ಬಿ. ಗಣಪತಿ ಹೆಗ್ಡೆ, ದೇವಸ್ಥಾನದ ಅಧ್ಯಕ್ಷರಾದ ಸತ್ಯೇಂದ್ರ ನಾಯಕ್ ಉಪಸ್ಥಿತಿಯಲ್ಲಿ ಹಿರಿಯ ಹೋಟೆಲ್ ಧಾರ್ಮಿಕ ಮುಂದಾಳು  ರಘುವೀರ್ ಎ ಶೆಟ್ಟಿ, ನಲ್ಲೂರು.  ಅಧ್ಯಕ್ಷತೆಯಲ್ಲಿ ನಡೆಯಿತು.


ಸಭೆಯ ಅಧ್ಯಕ್ಷತೆಯನ್ನು ವಹಿಸಿದ  ರಘುವೀರ್ ಎ ಶೆಟ್ಟಿ, ನಲ್ಲೂರು.  ಮಾತನಾಡುತ್ತಾ ನಮ್ಮ ಊರಿನ ದೇವಸ್ಥಾನಗಳು ಗ್ರಾಮಗಳು ಅಭಿವೃದ್ಧಿ ಆಗಬೇಕಿದ್ದರೆ ಮುಂಬೈಯ ಭಕ್ತರ ಏನಿದೆ ಅಗತ್ಯವಿದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಂಪೂರ್ಣ ಶಿಲಾಮಯವಾಗಿ ಬ್ರಹ್ಮಕಲಸ ಆದಾಗ ಪೂರ್ತಿ ಗ್ರಾಮ ಅಭಿವೃದ್ಧಿಯಾಗುತ್ತದೆ ಎಂದು ದು ನುಡಿದರು


ಮುಖ್ಯ ಅತಿಥಿಗಳಾದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ಬಿ. ಗಣಪತಿ ಹೆಗ್ಡೆ,ದೇಗುಲದ ಅಧ್ಯಕ್ಷರಾದ ಸತ್ಯೇಂದ್ರ ನಾಯಕ್ ಅವರು ಮಾತನಾಡಿ ದೇವಸ್ಥಾನದ ಅಭಿವೃದ್ಧಿಯಾಗುತ್ತಿರುವ ಬಗ್ಗೆ ಮತ್ತು ದಾನಿಗಳು  ಜೀರ್ಣಾರಕ್ಕೆ ನೀಡುವ ಬೆಂಬಲದ ಬಗ್ಗೆ ಸಂಪೂರ್ಣವಾಗಿ ವಿಹಾರವಾಗಿ ಸಭೆಗೆ ತಿಳಿಸಿದರು.


   ವೇದಿಕೆಯಲ್ಲಿಮುಂಬೈ  ಸಮಿತಿಯ ಅಧ್ಯಕ್ಷರಾದ ಅಶೋಕ್ ಶೆಟ್ಟಿ,ಗೌರವ ಸಂಚಾಲಕರಾದ ಘನ್ಸೋಲಿ ಶ್ರೀ ಮೂಕಾಂಬಿಕಾ ದೇವಸ್ಥಾನದ ಧರ್ಮದರ್ಶಿಅಣ್ಣಿ ಸಿ ಶೆಟ್ಟಿ, ಹಿರಿಯ  ಹೊಟೇಲ್ ಉದ್ಯಮಿಕರಿಯಣ್ಣ ಎಸ್ ಶೆಟ್ಟಿ. ಹೋಟೆಲ್ ಉದ್ಯಮಿ  ಅಪ್ಪಣ್ಣ ಶೆಟ್ಟಿ,ರಮೇಶ್ ಶೆಟ್ಟಿ,ಸುಭಾಷ್ ಮಹಾಬಲ ಪೂಜಾರಿ,ಜಾಗತಿಕ ಬಂಟರ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ, ಉಪಾಧ್ಯಕ್ಷಕರ್ನಿರೆ ವಿಶ್ವನಾಥ ಶೆಟ್ಟಿ, ಬಂಟರ ಸಂಘದ ಕ್ರೀಡಾ ವಿಭಾಗದ ಕಾರ್ಯ ಧ್ಯಕ್ಷ ಗಿರೀಶ್ ಶೆಟ್ಟಿ ,ಹರಿಶ್ ಸಾಲಿಯಾನ್  ಬಜಗೋಳಿ,ಪುಣೆ ಸಮಿತಿ ಅಧ್ಕಕ್ಷರಾದ ಆನಂದ ಎಮ್ ಶೆಟ್ಟಿ,ಬಾಸ್ಕರ್ ಶೆಟ್ಟಿ, ಪ್ರಕಾಶ್ ಶೆಟ್ಟಿ  ಉಪಸ್ಥಿತರಿದ್ದರು.


 ವೇದಮೂರ್ತಿ ನಾರಾಯಣ ಭಟ್ಟರ ಪ್ರಾರ್ಥನೆಯೊಂದಿಗೆ ಚಾಲನೆ ನೀಡಲಾಯಿತು. ಸಮಿತಿಯ ಸದಸ್ಯರಾದ  ಶ್ಯಾಮ ಎನ್ ಶೆಟ್ಟಿ ಸ್ವಾಗತಿಸಿದರು, ಪ್ರಸ್ತಾವಿಕವಾಗಿ ಹಿರಿಯರಾದ ಮಾಧವ ಕಾಮತ್ ಮಾತನಾಡಿದರು.ಸಮಿತಿಯ ಕಾರ್ಯದರ್ಶಿಯಾದ ಕಿಶೋರ್ ಶೆಟ್ಟಿ  ಕಾರ್ಯಕ್ರಮ ನಿರೂಪಿಸಿದರು. ಹಾಗೂ ಜೀರ್ಣೋದ್ದಾರ ಸಮಿತಿಯ ಸದಸ್ಯರಾದ  ರೋಹಿತ್ ಶೆಟ್ಟಿ ಮತ್ತು ಸುಕೀರ್ತಿ ಶೆಟ್ಟಿಯ ಜೊತೆಗೆ ದಿಲೀಪ್ ಹೆಗ್ಡೆ,ಕಿಶೋರ್ ಶೆಟ್ಟಿ,ರಘುನಾಥ ಶೆಟ್ಟಿ ಮುಂಬೈ ಸಮಿತಿಯ ಕಾರ್ಯದರ್ಶಿ ಅಶೋಕ್ ಶೆಟ್ಟಿ ಹುರ್ಲಾಡಿ,ಉಪಸ್ಥಿತಿ ಇದ್ದರು. ದೇಗುಲದ ನೂರಾರು ಭಕ್ತರು ಹಾಜರಿದ್ದರು.



No comments

Powered by Blogger.