ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿ ಡೊಂಬಿವಲಿ ಇದರ ಶ್ರೀದೇವಿಯ ಆಗಮನ ಮೆರವಣಿಗೆ, ನವರಾತ್ರಿ ಉತ್ಸವ ಆರಂಭ


ಚಿತ್ರ : ಸತೀಶ್ ಶೆಟ್ಟಿ,

ಪಶ್ಚಿಮ ವಿಭಾಗ ಸಾರ್ವಜನಿಕ  ನವರಾತ್ರೋತ್ಸವ ಮಂಡಳಿ ಡೊಂಬಿವಲಿ ಪಶ್ಚಿಮ. ಇದರ  ಶ್ರೀದೇವಿಯ ಆಗಮನ ಮೆರವಣಿಗೆಯು ಅಕ್ಟೋಬರ್ 14 ರ ಶನಿವಾರ  ಸಾಯಂಕಾಲ 6:30 ಗಂಟೆಗೆ ಡೊಂಬಿವಲಿ ಪೂರ್ವದ ಬ್ರಾಹ್ಮಣ ಸಭಾ ದಿಂದ ತುಳುನಾಡಿನ ಆಚರಣೆ, ಪದ್ಧತಿ ಹಾಗೂ ಮಹಾರಾಷ್ಟ್ರ ನೆಲದ ಸಂಸ್ಕೃತಿ ಯಂತೆ ನಾಸಿಕ್ ಡೋಲ್, ಕೇರಳದ ಚಂಡೆ, ತುಳುನಾಡಿನ ವಾದ್ಯ , ತುಳುನಾಡಿನ ಜೀಟಿಗೆ, ಸಾಲು ಸಾಲು ದೀಪಗಳು, ಮಂಡಳಿಯ ಬಾಲ ಕಲಾವಿದರಿಂದ ಕುಣಿತ ಭಜನೆ, ತಟ್ಟಿರಾಯ, ಗೊಂಬೆ ಪ್ರದರ್ಶನ, ಮಂಡಳಿಯ ಕಲಾವಿದರಿಂದ ಯಕ್ಷಗಾನ ಪ್ರಾತ್ಯಕ್ಷಿಕೆ, ಹಾಗೂ ಮಹಿಳಾ ವಿಭಾಗದವರಿಂದ ಬಣ್ಣ ಬಣ್ಣ ಕೊಡೆಗಳ ಚಿತ್ತಾರ, ಕಳಶ ಸೇವೆ ಯೊಂದಿಗೆ ಶ್ರೀದೇವಿಯ ಆಗಮನ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.


ಮೆರವಣಿಗೆಯ ರಸ್ತೆಯ ಉದ್ದಕ್ಕೆ ಡೊಂಬಿವಲಿಯ ತುಳು, ಕನ್ನಡ ಉದ್ಯಮಿಗಳು ದೇವಿಗೆ ಹಣ್ಣುಕಾಯಿ, ಪೂಜೆ ನೆರೆವೇರಿಸುವುದರೊಂದಿಗೆ, ಭಕ್ತರಿಗೆ  ತಂಪು ಪಾನೀಯ ಸೇವೆ ನೀಡಿ ಸಹಕರಿಸಿದರು. ರಸ್ತೆ ಯ ಉದ್ದಕ್ಕೋ ಸಹಸ್ರಾರು ಜನ ಭಕ್ತರು ದೇವಿಯ ದರ್ಶನ ಪಡೆದು  ಕೃತಾರ್ಥರಾದರು.


ಮಂಡಳಿಯಲ್ಲಿ ಶ್ರೀದೇವಿಯ ಆಗಮನವಾದ ನಂತರ ಪಾಲ್ಗೊಂಡ ಎಲ್ಲರಿಗೂ ಮಹಾಪ್ರಸದದ  ವ್ಯವಸ್ಥೆಯನ್ನು ಮಾಡಲಾಯಿತು.


ಅಕ್ಟೋಬರ್ 15 ರ ರವಿವಾರ ಬೆಳಿಗ್ಗೆ 8.00 ಗಂಟೆ ಯಿಂದ ಗಣ ಹೋಮ, ಉಗ್ರಾಣ ಪೂಜೆ, ಪ್ರಾಣ ಪ್ರತಿಷ್ಠೆ ಹಾಗೂ ದೇವಿ ಪಾರಾಯಣ, ಭಜನೆ ನಡೆದು ಮಹಾಪೂಜೆ ನೆರವೇರಿತು. 


ಮಹಾನಗರ ದ ಎಲ್ಲಾ ಭಕ್ತಾಭಿಮಾನಿಗಳು ನವರಾತ್ರಿಯ ಹಾಗೂ ವಿಜಯ ದಶಮಿಯ ಎಲ್ಲಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ತೀರ್ಥ ಪ್ರಸಾದ ಸ್ವೀಕರಿಸಿ, ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಧರ್ಮದರ್ಶಿಗಳಾದ ಅಶೋಕ್ ದಾಸು ಶೆಟ್ಟಿ, ಅಧ್ಯಕ್ಷರಾದ ಗೋಪಾಲ್ ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆಯಾದ ವಿಲಾಸಿನಿ ಶೆಟ್ಟಿ ಹಾಗೂ ಎಲ್ಲಾ ಸದಸ್ಯರು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.




No comments

Powered by Blogger.