ಶ್ರೀ ಸಾಯಿನಾಥ ಮಿತ್ರ ಮಂಡಳಿ ಡೊಂಬಿವಲಿಯ ವತಿಯಿಂದ ಪಶ್ಚಿಮ ವಿಭಾಗ ನವರಾತ್ರಿ ಉತ್ಸವ ಮಂಡಳಿ ಹಾಗೂ ಶ್ರೀ ಜಗದಾಂಬ ಮಂದಿರಕ್ಕೆ ಹಸಿರುಹೊರೆ ಕಾಣಿಕೆ.
ಚಿತ್ರ, ವರದಿ : ಧನಂಜಯ್ ಪೂಜಾರಿ.
ಡೊಂಬಿವಲಿ ಪಶ್ಚಿಮದ ಕೈಲಾಸ ನಗರದಲ್ಲಿರುವ ಪ್ರತಿಷ್ಠಿತ ಸಂಸ್ಥೆಯಲ್ಲಿ ಒಂದಾದ ಶ್ರೀ ಸಾಯಿನಾಥ ಮಿತ್ರ ಮಂಡಳಿ ಇದರ ವತಿಯಿಂದ 59 ನೇ ನವರಾತ್ರಿ ಉತ್ಸವ ಆಚರಣೆಯಲ್ಲಿರುವ ಪಶ್ಚಿಮ ವಿಭಾಗ ನವರಾತ್ರಿ ಉತ್ಸವ ಮಂಡಳಿಗೆ ಮತ್ತು ಜಗದಾಂಬ ಮಂದಿರಕ್ಕೆ ಅಕ್ಟೋಬರ್ 15 ರ ರವಿವಾರ ಸಂಜೆ 14 ನೇ ವರ್ಷದ ಹಸಿರು ಹೊರೆ ಕಾಣಿಕೆಯನ್ನು ಭವ್ಯ ಮೆರವಣಿಗೆಯೊಂದಿಗೆ ಸಮರ್ಪಿಸಲಾಯಿತು.
ಮುಂಬಯಿ ಉಪನಗರದ ಡೊಂಬಿವಲಿಯಲ್ಲಿ ಪ್ರಪ್ರಥಮ ವಾಗಿ ಪಶ್ಚಿಮ ವಿಭಾಗ ನವರಾತ್ರಿ ಉತ್ಸವ ಮಂಡಳಿಗೆ ಹಸಿರು ಹೊರೆ ಕಾಣಿಕೆ ಆರಂಭಿಸಿ ವರ್ಷ ಪ್ರತಿ ಅದನ್ನು ಮುಂದುವರಿಸಿ ಇದೀಗ 14ನೇ ವರ್ಷದ ಹೊರೆ ಕಾಣಿಕೆಯನ್ನು ಗಿರಿಜಾ ಮಾತ ಮಂದಿರದಿಂದ ವಾದ್ಯ ಘೋಷ ಮತ್ತು ವಿವಿಧ ಬಿರುದಾವಳಿಯೊಂದಿಗೆ ಮೆರವಣಿಗೆಯು ದೇವಿ ಚೌಕ್ ಮಾರ್ಗವಾಗಿ ಪಶ್ಚಿಮ ವಿಭಾಗ ನವರಾತ್ರೋತ್ಸವ ಮಂಡಳಿ ತಲುಪಿತು. ಧರ್ಮದರ್ಶಿ ಅಶೋಕ್ ಡಿ ಶೆಟ್ಟಿ, ಅಧ್ಯಕ್ಷರಾದ ಗೋಪಾಲ್ ಶೆಟ್ಟಿ, ಕಾರ್ಯದರ್ಶಿ ಕಿಶೋರ್ ಡಿ ಶೆಟ್ಟಿ ಹಾಗೂ ಎಲ್ಲ ಪದಾಧಿಕಾರಿಗಳು ಸ್ವಾಗತಿಸಿದರು.
ನಂತರ ಗೋಪಿನಾಥ್ ಚೌಕ್ ಮಾರ್ಗವಾಗಿ ಸಾಗಿ ಜಗದಾಂಬ ಮಂದಿರಕ್ಕೆ ಸಮರ್ಪಿಸಲಾಯಿತು. ಕ್ಷೇತ್ರದಲ್ಲಿ ಅನ್ನದಾನ ಸೇವೆಗೆ ಉಪಯೋಗವಾಗುವಂತಹ ತರಕಾರಿ ಅಕ್ಕಿ ಇನ್ನಿತರ ಸಾಮಾನುಗಳನ್ನು ಭಕ್ತಾದಿಗಳು ಸಂಸ್ಥೆಗೆ ಒಪ್ಪಿಸಿದರು.
ಈ ಕಾರ್ಯಕ್ರಮದಲ್ಲಿ, ಮಂಡಳಿಯ ಅಧ್ಯಕ್ಷ ಮೋಹನ್ ಸಾಲ್ಯಾನ್, ಕಾರ್ಯದರ್ಶಿ ಸುರೇಶ್ ಮೊಗವೀರ, ಚಿನ್ಮಯ್ ಸಾಲ್ಯಾನ್, ಸೋಮನಾಥ್ ಪೂಜಾರಿ, ಅರುಣ್ ಶೆಟ್ಟಿ, ಮೋಹನ್ ಪೂಜಾರಿ, ವಾಸು ಮೊಗವೀರ ಮತ್ತು ಎಲ್ಲಾ ಪದಾಧಿಕಾರಿಗಳು, ಹೆಚ್ಚಿನ ಸಂಖ್ಯೆಯಲ್ಲಿ ತುಳು ಕನ್ನಡಿಗರು ಹಾಗೂ ಭಕ್ತಾಭಿಮಾನಿಗಳು ಉಪಸ್ಥಿತರಿದ್ದು ಮೆರವಣಿಗೆಯನ್ನು ಯಶಸ್ವಿಗೊಳಿಸುವಲ್ಲಿ ಸಹಕರಿಸಿದರು.
Post a Comment