ಆ 15 ರಿಂದ 24 ರ ವರಗೆ ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿ ಡೊಂಬಿವಲಿ ಯಲ್ಲಿ 59 ನೇ ಸಾರ್ವಜನಿಕ ಶರನ್ನವರಾತ್ರೋತ್ಸವ.


ಆ 15 ರಿಂದ 24 ರ ವರಗೆ ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿ ಡೊಂಬಿವಲಿ ಯಲ್ಲಿ
59 ನೇ ಸಾರ್ವಜನಿಕ ಶರನ್ನವರಾತ್ರೋತ್ಸವ.

ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿಯು ಈ ವರಗೆ ನವರಾತ್ರೋತ್ಸವವು ಸರ್ವರ ಮನದಂತರಾಳದಲ್ಲಿ ಉಳಿಯುವಂತೆ ವಿಜೃಂಭಣೆಯಿಂದ ಆಚರಿಸಿ ಮಂಡಳಿಯು ತನ್ನ 59ನೇ ವರ್ಷದ ಸಾರ್ವಜನಿಕ ನವರಾತ್ರೋತ್ಸವವನ್ನು ಇದೇ ಬರುವ ದಿನಾಂಕ 15-10-2023 ನೇ ರವಿವಾರದಿಂದ 24-10-2013ನೇ ಮಂಗಳವಾರದ ತನಕ ಆಚರಿಸಲಿರುವುದು. 

ಪ್ರತಿದಿನ ಮಧ್ಯಾಹ್ನ 12:30 ಕ್ಕೆ ಹಾಗೂ ರಾತ್ರಿ 8.30 ಕ್ಕೆ ಶ್ರೀದೇವಿಯ ಪೂಜಾ ವಿಧಿ-ವಿಧಾನಗಳು ಜರುಗಿ ಮಂಗಳಾರತಿಯ ನಂತರ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. 

 ( ಪೂಜೆ ಕೊಡಲಿಚ್ಚಿಸುವ ಭಕ್ತರು ಪೂಜಾ-ರಶೀದಿ ಪಡೆದು ಪೂಜೆಯನಂತರ ರಶೀದಿ ತೋರಿಸಿ ಪ್ರಸಾದವನ್ನು ಪಡೆಯತಕ್ಕದ್ದು. ಹೂವಿನ ಪೂಜೆ ಕೊಟ್ಟ ಭಕ್ತರು ಬೆಳಿಗ್ಗೆ 8.30 ರಿಂದ ರಾತ್ರಿ ಗಂಟೆ 11.30ರ ಈ ಕಾಲಾವಧಿಯಲ್ಲಿ ರಶೀದಿಯನ್ನು ತೋರಿಸಿ ಪ್ರಸಾದವನ್ನು ಸ್ವೀಕರಿಸಬಹುದು.) 


 14-10-2023 ನೇ ಶನಿವಾರ ಸಾಯಂಕಾಲ ಗಂಟೆ 6:00 ಕ್ಕೆ ಬ್ರಾಹ್ಮಣ ಸಭಾ ಡೊಂಬಿವಲಿ (ಪೂರ್ವ) ಇಲ್ಲಿoದ ಶ್ರೀದೇವಿಯ ಮೂರ್ತಿಯ ಆಗಮನ ಮೆರವಣಿಗೆ ಹಾಗೂ 24-10-2023ನೇ ಮಂಗಳವಾರ ಸಾಯಂಕಾಲ 4.30 ಗಂಟೆಗೆ ಶ್ರೀದೇವಿಯ ವಿಸರ್ಜನಾ ಮೆರವಣಿಗೆಯು ನಡೆಯಲಿದೆ. ಈ ವರ್ಷದ ಮೂರ್ತಿ ಸೇವೆಯನ್ನು ಶ್ರೀಮತಿ ಮತ್ತು ಶ್ರೀ ಅಂಕುಶ್ ಶೆಟ್ಟಿ ಭಾಂಡುಪ್ ಇವರು ನೀಡಲಿರುವರು. 

15 - 10- 2013 ರವಿವಾರ ಬೆಳಿಗ್ಗೆ 8.00 ಗಂಟೆ ಯಿಂದ ಗಣ ಹೋಮ, ಉಗ್ರಾಣ ಪೂಜೆ, ಪ್ರಾಣ ಪ್ರತಿಷ್ಠೆ ಹಾಗೂ ದೇವಿ ಪಾರಾಯಣ ನಡೆಯಲಿದೆ. 


20-10-2023 ನೇ ಶುಕ್ರವಾರದಂದು ಸಾಯಂಕಾಲ 3.00 ಗಂಟೆಗೆ ಹಳದಿ-ಕುಂಕುಮ ಕಾರ್ಯಕ್ರಮವು ಜರುಗಲಿದೆ.

19-10-2023 ರ ಗುರುವಾರ ಹಾಗೂ 22-10-2023 ರ ರವಿವಾರ ಸಾಯಂಕಾಲ 7.30 ಕ್ಕೆ ರಂಗ ಪೂಜೆ ನಡೆಯಲಿದೆ.

ದಿನಾ ಬೆಳಿಗ್ಗೆ ತುಲಾಭಾರ ಸೇವೆ ಹಾಗೂ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸೇವೆಯು ನಡೆಯಲಿದೆ.

16/10/2023 ನೇ ಸೋಮವಾರ ಸಾಯಂಕಾಲ 5:30 ಕ್ಕೆ ಶ್ರೀ ಪುತ್ತೂರು ಚಂದ್ರಹಾಸ ಹಾಗೂ ಬಳಗ, ಶ್ರೀ ಅಯ್ಯಪ್ಪ ಭಜನಾ ಮಂಡಳಿ ಅಜ್ಜೆಪಾಡ, ಡೊಂಬಿವಲಿ (ಪೂ), 
17/10/2023 ನೇ ಮಂಗಳವಾರ ಸಾಯಂ. 6:30 ಕ್ಕೆ ಶ್ರೀ ಸುರೇಶ್ ಶೆಟ್ಟಿ, ಪನ್ವೆಲ್, 
18/10/2023 ನೇ ಬುಧವಾರ ಸಾಯಂ 5:30 ಕ್ಕೆ ಮೂಡುಬೆಳ್ಳೆ ಶ್ರೀ ವಿಜಯ್ ಕುಮಾರ್ ಶೆಟ್ಟಿ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.

23-10-2023 ರ ಸೋಮವಾರ ಸಾಯಂಕಾಲ 4.30 ರಿಂದ ಮಂಡಳಿಯ ಬಾಲ ಕಲಾವಿದರಿಂದ ನೃತ್ಯ ವೈಭವ, ನಂತರ ಶ್ರೀ ಮಹಾ ಗಣಪತಿ ಯಕ್ಷಗಾನ ಮಂಡಳಿ ಪುಣೆ ಹಾಗೂ ಊರಿನ ಅತಿಥಿ ಕಲಾವಿದರಿಂದ " ಶ್ರೀ ದೇವಿ ಮಹಾತ್ಮೆ" ಯಕ್ಷಗಾನ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ ಸುಪ್ರಸಿದ್ಧ ಯಕ್ಷಗಾನ ಕಲಾವಿದರು ಹಾಗೂ ಲೇಖಕರು ಆದ ಶ್ರೀ ಕೊಲ್ಯಾರು ರಾಜು ಶೆಟ್ಟಿ ಅವರನ್ನು ಇನ್ನ ಕುರ್ಕಿಲ ಬೆಟ್ಟು ಬಾಳಿಕೆ ದಿವಂಗತ ದಾಸು ಬಾಬು ಶೆಟ್ಟಿ ಅವರ ಸಂಸ್ಮರಣಾರ್ಥ ಸನ್ಮಾನಿಸಲಾಗುವುದು. 

24-10-2023ನೇ ಮಂಗಳವಾರ ಸಾಯಂಕಾಲ 4.30 ಗಂಟೆಗೆ ಶ್ರೀದೇವಿಯ ವಿಸರ್ಜನಾ ಮೆರವಣಿಗೆಯು ವಿವಿಧ ವೇಷ ಭೂಷಣ ಗಳೊಂದಿಗೆ ವೈಭವ ವಾಗಿ ನಡೆಯಲಿದ್ದು, ಎಲ್ಲಾ ಸದ್ಭಕ್ತರು, ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಉತ್ಸವವು ವ್ಯವಸ್ಥಿತವಾಗಿ ನೆರವೇರಿಸಲು ತನು-ಮನ-ಧನಗಳಿಂದ ಸಹಕರಿಸಬೇಕಾಗಿ ಮಂಡಳಿಯ ಧರ್ಮದರ್ಶಿಗಳಾದ ಅಶೋಕ್ ದಾಸು ಶೆಟ್ಟಿ, ಅಧ್ಯಕ್ಷರಾದ ಗೋಪಾಲ್ ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆಯಾದ ವಿಲಾಸಿನಿ ಶೆಟ್ಟಿ ಹಾಗೂ ಎಲ್ಲಾ ಸದಸ್ಯರು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
 

No comments

Powered by Blogger.