ಚಿಣ್ಣರ ಬಿಂಬ ಪಲಾವ ಮಕ್ಕಳ ಸಾಂಸ್ಕೃತಿಕ ಸ್ಪರ್ಧೆ.
ಪಲಾವ: ಸೆ. 17, ಚಿಣ್ಮರ ಬಿಂಬ ಪಲಾವ ಶಿಬಿರ ಡೊಂಬಿವಿಲಿ(ಪೂ) ಯ ಮಕ್ಕಳ ಪ್ರತಿಭಾನ್ವೇಷಣೆಯ ಸ್ಪರ್ಧೆಯು ಸೆ.17 ಭಾನುವಾರದಂದು ಹೋಟೆಲ್ ಕುಶಲ ಗ್ರೀನ್ಸ್ ನಲ್ಲಿ ನಡೆಯಿತು.
ವಿಘ್ನ ವಿನಾಯಕನನ್ನು ಸ್ಮರಿಸುತ್ತ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ಮಕ್ಕಳ ಛದ್ಮವೇಷ, ಚರ್ಚೆ, ಭಾಷಣ, ಭಾವಗೀತೆ, ಜನಪದ ಗೀತೆ, ಏಕ ಪಾತ್ರಾಭಿನಯ ಸ್ಪರ್ಧೆಗಳ ಜೊತೆಗೆ, ದೇಶದ ಬಗೆಗಿನ ಪ್ರೀತಿ ಮತ್ತು ಗೌರವವನ್ನು ತೋರುವ ದೇಶಭಕ್ತಿ ಗೀತೆಯನ್ನು ಹಾಡುವ ಮೂಲಕ ಪಾಲಕರ ದೇಶಭಕ್ತಿ ಗೀತ ಸ್ಪರ್ಧೆಯು ನಡೆಯಿತ್ತು.
ಅಮಿತ್ ಎಜುಕೇಶನ್ ಟ್ರಸ್ಟ್ ಮತ್ತು ಆದರ್ಶ ವಿದ್ಯಾಲಯ ನೀಳ, ಲೋಧಾ ದ ಪ್ರಾಂಶುಪಾಲರಾದ ರಾಜೇಶ್ ಮಿಶ್ರ ಅವರ ಮಗ ಚಿಣ್ಮರ ಬಿಂಬದ ಕಾರಣ ಮತ್ತು ಕೆಲಸವನ್ನು ತಿಳಿದುಕೊಂಡು ಶಿಬಿರವನ್ನು ಮುಕ್ತವಾಗಿ ನಡೆಸಲು ಅವಕಾಶ ಮಾಡಿಕೊಟ್ಟಿರುವ ಅಮಿತ್ ಮಿಶ್ರಾ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಅಧ್ಯಕ್ಷತೆ ವಹಿಸಿದ ಭಂಟರ ಸಂಘ ಡೊಂಬಿವಿಲಿ ಪ್ರಾದೇಶಿಕ ಸಮಿತಿಯ ಜೊತೆ ಕಾರ್ಯಾಧ್ಯಕ್ಷರಾಗಿರುವ ಮತ್ತು ಕುಶಲ ಗ್ರೀನ್ಸ್ ನ ಮಾಲಕರಾದ ಯಶಸ್ವಿ ಹೋಟೆಲ್ ಉದ್ಯಮಿಯಾದ ಅರುಣ್ ಶೆಟ್ಟಿಯವರು ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮದ ಬಗ್ಗೆ ಹೃದಯ ತುಂಬಿ ಮಾತಾಡಿದರು. ಕಾರ್ಯಕ್ರಮವನ್ನು ನಡೆಸಲು ಸ್ಥಳದ ಅವಕಾಶವನ್ನು ಕೊಟ್ಟು ಮುಂದೆಯು ತನ್ನ ಕೈಲಾದ ಸಹಾಯವನ್ನು ಮಾಡುವ ಎಂಬ ಭರವಸೆ ನೀಡಿದರು. ಹೀಗೆ ನಮ್ಮ ಭಾಷೆ ಮತ್ತು ಸಂಸ್ಕೃತಿ ಬೆಳೆಯಬೇಕು ಎಂಬ ಆಶಯ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಗುರುದತ್ತ ಪ್ರಭು ಅವರು ಆಕ್ಸಿಸ್ ಬ್ಯಾಂಕ್ ನಲ್ಲಿ ಹಿರಿಯ ಪ್ರಬಂಧಕರಾಗಿ ಸೇವೆ ಸಲ್ಲಿಸುತ್ತಿದ್ದು, ಇವರು ಪ್ರಕಾಶ್ ಭಂಡಾರಿ ಮತ್ತು ಸುರೇಂದ್ರ ಕುಮಾರ್ ಹೆಗ್ಡೆ ಅವರ ನೇತೃತ್ವದಲ್ಲಿ ಪ್ರಾರಂಭವಾದ ಈ ಸಂಸ್ಥೆಯು ಹಮ್ಮರವಾಗಿ ಬೆಳೆದಿದೆ ಮತ್ತು ಇನ್ನೂ ವರುಷವನ್ನೇ ಪೂರೈಸದ ಪಲಾವ ಶಿಬಿರದ ಮಕ್ಕಳ ಪ್ರತಿಭೆಯನ್ನು ನೋಡಿ ಸಂತೋಷವಾಯಿತು ಎಂದರು.
ಗೌರವ ಅತಿಥಿಯಾಗಿ ಆಗಮಿಸಿರುವ ಯೋಗೇಶ್ ಪಾಟೀಲ್ ಅವರು ನಮ್ಮ ತಾಯಿನಲ ಮತ್ತು ನಮ್ಮ ಸಂಸ್ಕೃತಿಯ ಬಗ್ಗೆ ಒಂದು ಒಳ್ಳೆ ಬಾಂಧವ್ಯವನ್ನು ಇಟ್ಟುಕೊಳ್ಳಬೇಕು ಮತ್ತು ಆ ದಿಕ್ಕಿನಲ್ಲಿ ಸಾಗುತ್ತಿರುವ ಪಲಾವ ಶಿಬಿರದ ಮಕ್ಕಳಿಗೆ ಅಭಿನಂದನೆಯನ್ನು ಸಲ್ಲಿಸಿದರು.
ಉದ್ಯಮಿ ಹಾಗು ಸಮಾಜ ಸೇವಕರಾಗಿರುವ ಭವಾನಿ ಶಂಕರ್ ಅವರು ತಮ್ಮ ಅನುಪಸ್ಥಿತಿಯಲ್ಲಿಯೂ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಭೋಜನದ ವ್ಯವಸ್ಥೆಯನ್ನು ನೀಡಿದರು.
ಚಿಣ್ಮರ ಬಿಂಬದ ರೂವಾರಿಯಾದಂತಹ ಸುರೇಂದ್ರ ಕುಮಾರ್ ಹೆಗ್ಡೆಯವರು ಚಿಣರನ್ನು ಮತ್ತು ಪಾಲಕರನ್ನು ಉದ್ದೇಶಿಸಿ ಅವರಿಗೆ ಪ್ರೇರಣೆ ನೀಡುವಂತಹ ಮಾತುಗಳನ್ನಾಡಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಕೇಂದ್ರೀಯ ಸಮಿತಿಯ ಸದಸ್ಯೆ ಮಂಜುಳ ಶೆಟ್ಟಿ ಮತ್ತು ಚಿಣ್ಣರ ಬಿಂಬದ ಸಂಚಾಲಕಿ ಗೀತಾ ಹೇರಳ ಅವರು ಮಕ್ಕಳ ಮತ್ತು ಪಾಲಕರ ಶ್ರಮವನ್ನು ಹೊಗಳಿ ಶುಭ ಹಾರೈಸಿದರು.
ತೀರ್ಪುಗಾರರಾಗಿ ಆಗಮಿಸಿದ ಶ್ರೀಮತಿ ಅನುರಾಧಾ ಕುಲಕರ್ಣಿ ಮತ್ತು ಸೀತಾ ದೇವಾಡಿಗ ಅವರನ್ನು ಸನ್ಮಾನಿಸಲಾಯಿತು. ಅವರು ಮಕ್ಕಳ ಪ್ರತಿಭೆಯನ್ನು ಕುರಿತು ತಮ್ಮ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಶಿಬಿರದ ಮುಖ್ಯಸ್ಮ ಶರ್ಮಿಳಾ ಪ್ರಭು ಎಲ್ಲರನ್ನು ಸ್ವಾಗತಿಸಿ,
ಪಲಾವ ಶಿಬಿರದ ಸ್ಥಾಪಕಿ ಡಾ.ಸುಮಾ ದ್ವಾರಕಾನಾಥ್ ಅವರು ಪ್ರಾಸ್ತಾವಿಕ ಭಾಷಣವನ್ನು ಮಾಡಿದರು.
ಬಹುಮಾನ ಪ್ರಾಯೋಜಕರಾದ ಶ್ರೀಮತಿ ಅನಸೂಯ ಯಾಳಗಿ, ಶಿಬಿರದ ಮುಖ್ಯಸ್ಮ ಶರ್ಮಿಳಾ ಪ್ರಭು, ಸಾಂಸ್ಕೃತಿಕ ಮುಖ್ಯಸ್ಮ ಸುಜಯ ನಿತ್ಯಾನಂದ ಸನಿಲ್, ಭಜನೆ ಶಿಕ್ಷಕಿ ಜಯಶ್ರೀ ಶೆಟ್ಟಿ ಮತ್ತು ಕನ್ನಡ ಅಧ್ಯಾಪಕರಾದ ಮಹದೇವಯ್ಯ ಸ್ವಾಮಿ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ನಿರೂಪಣೆಯನ್ನು ಕು. ವಿಶಿಕಾ ಶೆಟ್ಟಿ, ಪದ್ಮನಾಭ ಶೆಟ್ಟಿ ಮತ್ತು ಸ್ಪರ್ಧೆಯ ಫಲಿತಾಂಶವನ್ನು ಮೈನಾ ಶೆಟ್ಟಿ ಡೊಂಬಿವಿಲಿ ಶಿಬಿರ ಇವರು ನಡೆಸಿಕೊಟ್ಟರು. ಸಾಂಸ್ಕೃತಿಕ ಮುಖ್ಯಸ್ಥ ಸುಜಯ ನಿತ್ಯಾನಂದ ಸನಿಲ್ ಅವರು ಧನ್ಯವಾದ ಸಮರ್ಪಿಸಿ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯ ಗೊಳಿಸಲಾಯ್ತು.
Post a Comment