ಶ್ರೀ ಜಗದಂಬ ಮಂದಿರ ಡೊಂಬಿವಲಿಯಲ್ಲಿ ಒಂಬತ್ತನೇ ವರ್ಷದ ಶರನ್ನವರಾತ್ರಿ ಮಹೋತ್ಸವ ಆರಂಭ.
ಚಿತ್ರ : ಶಂಕರ್ ಸುವರ್ಣ.
ಡೊಂಬಿವಲಿ ಪಶ್ಚಿಮದ ಗೋಪಿನಾಥ್ ಚೌಕ್ ಬಲಿ ಇರುವ ಯಕ್ಷಕಲಾ ಸಂಸ್ಥೆ ಸಂಚಾಲಿತ ಶ್ರೀ ಜಗದಂಬ ಮಂದಿರದಲ್ಲಿ ಅಕ್ಟೋಬರ್15 ರ ರವಿವಾರದಿಂದ ನವರಾತ್ರಿ ಹಾಗೂ ವಿಜಯದಶಮಿ ಮಹೋತ್ಸವವು ಆರಂಭವಾಗಿದ್ದು . ಶ್ರೀ ಕ್ಷೇತ್ರದ ತಂತ್ರಿಯವರ ಶುಭ ಆಶೀರ್ವಾದದೊಂದಿಗೆ ಹಾಗೂ ಪ್ರಧಾನ ಅರ್ಚಕರಾದ ರಘುಪತಿ ಭಟ್ ರವರ ನೇತೃತ್ವದಲ್ಲಿ ಚಂಡಿಕಾ ಹೋಮ, ದುರ್ಗ ನಮಸ್ಕಾರ ಪೂಜೆ ಮತ್ತು ರಂಗ ಪೂಜೆ ಸಹಿತ ಶರನ್ನವರಾತ್ರಿ ಮಹೋತ್ಸವವೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗುತ್ತಿದೆ.
ಪ್ರತಿನಿತ್ಯ ಆಮಂತ್ರಿತ ಭಜನಾ ಮಂಡಳಿಗಳಿಂದ ಭಜನಾಮೃತ ಸೇವೆ ನಡೆದು, ಮಧ್ಯಾಹ್ನ ಹಾಗೂ ರಾತ್ರಿ ಮಹಾಮಂಗಳಾರತಿ ಯ ನಂತರ ಅನ್ನಸಂತರ್ಪಣೆ ನಡೆಯುತ್ತಿದೆ.
ನವರಾತ್ರಿಯ ಪ್ರಥಮ ದಿನ ಅಕ್ಟೋಬರ್15 ರ ರವಿವಾರ ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ, ಪಂಚಾಮೃತ ಅಭಿಷೇಕ, ತೋರಣ ಮುಹೂರ್ತ ನಡೆದು , ಸಂಜೆ ದುರ್ಗಾ ನಮಸ್ಕಾರ ಪೂಜೆ, ರಾತ್ರಿ ಶ್ರೀ ರಾಧಾಕೃಷ್ಣ ಶನೀಶ್ವರ ಮಂದಿರದ ಮಹಿಳಾ ವಿಭಾಗದ ವತಿಯಿಂದ ಕುಣಿತ ಭಜನೆ ನಡೆಯಿತು. ದ್ವಿತೀಯ ದಿನವಾದ ಅಕ್ಟೋಬರ್16 ರ ಸೋಮವಾರ ಮುಂಜಾನೆ ತುಲಾಭಾರ ಸೇವೆ, ಸಂಜೆ ದುರ್ಗಾ ನಮಸ್ಕಾರ ಪೂಜೆ ನಡೆಯಿತು. ತ್ರಿತಿಯ ದಿನವಾದ 17 ರ ಮಂಗಳವಾರ ಸಂಜೆ ರಂಗ ಪೂಜೆ. ಹಾಗೂ 18 ರ ಬುಧವಾರ ಸಂಜೆ ದುರ್ಗಾ ನಮಸ್ಕಾರ ಪೂಜೆ, ರಾತ್ರಿ ಪಲ್ಲಕ್ಕಿ ಉತ್ಸವ ನಡೆಯಿತು.
ದುರ್ಗಾ ನಮಸ್ಕಾರ ಸೇವೆಯನ್ನು ಅನಿಲ್ ಶೆಟ್ಟಿ ಮತ್ತು ಪರಿವಾರ ನವಿ ಮುಂಬಯಿ, ನಾಗೇಶ್ ಶೆಟ್ಟಿ ಮತ್ತು ಪರಿವಾರ ನವಿ ಮುಂಬಯಿ,ಸುಬ್ಬಯ್ಯ ಶೆಟ್ಟಿ ಮತ್ತು ಪರಿವಾರ ಕಲ್ಯಾಣ್
ನೀಡಿದರು,
ಈ ಸಂದರ್ಭದಲ್ಲಿ ದೇವಾಡಿಗ ಸಂಘ ಡೊಂಬಿವಲಿ ವಲಯ, ಸಾಯಿನಾಥ್ ಮಿತ್ರ ಮಂಡಳಿ ಹಾಗೂ ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿಯ ವತಿಯಿಂದ ದೇವಿಗೆ ಹೊರೆ ಕಾಣಿಕೆ ರೂಪದಲ್ಲಿ ಅನ್ನಸಂತರ್ಪಣೆ ಗೆ ಬೇಕಾಗುವ ಆಹಾರ ಸಾಮಗ್ರಿಗಳನ್ನು ಸಮರ್ಪಿಸಲಾಯಿತು.
ನಗರದ ಪ್ರತಿಷ್ಠಿತ ಉದ್ಯಮಿಗಳು, ರಾಜಕೀಯ ನೇತಾರರು, ಧಾರ್ಮಿಕ, ಸಾಮಾಜಿಕ ಸಂಸ್ಥೆಗಳ ಮುಖ್ಯಸ್ಥರು, ಹಾಗೂ ಸಾವಿರಾರು ಭಕ್ತರು ದೇವಿಯ ದರ್ಶನ ಪಡೆದು ತೀರ್ಥ ಪ್ರಸಾದ ಸ್ವೀಕರಿಸಿ, ಅನ್ನಸಂತರ್ಪಣೆ ಯಲ್ಲಿ ಪಾಲ್ಗೊಂಡರು.
Post a Comment