ಕರ್ನಾಟಕ ಸಂಘ ಸಯನ್, ನೂತನ ಸಂಘದ ಉದ್ಘಾಟನಾ ಸಮಾರಂಭ

 ಇಂದು 15.10 2023 ರಂದು ಬೆಳಿಗ್ಗೆ  ಕರ್ನಾಟಕ ಸಂಘ ಸಯನ್ ಇದರ ಉದ್ಘಾಟನಾ ಸಮಾರಂಭವು ನಿತ್ಯಾನಂದ ಸಭಾಗೃಹದಲ್ಲಿ ಅರ್ಥಪೂರ್ಣವಾಗಿ ಅದ್ದೂರಿಯಾಗಿ ನಡೆಯಿತು.
 ಮುಖ್ಯ ಅತಿಥಿ ಯಾಗಿ ಆಗಮಿಸಿದ  ಸಯನ್ ಪರಿಸರದ ರಾಮ್ ದೇವ್  ಹೋಟೇಲ್ ನ ಮಾಲಕ , ಮಹಾದಾನಿ, ಹೃದಯವಂತ , ಸುಂದರ  ಶೆಟ್ಟಿ ಹಾಗೂ  ಗೌರವ  ಅತಿಥಿಯಾಗಿ ಆಗಮಿಸಿದ್ದ  ಅಂತರಾಷ್ಟ್ರೀಯ 
ಖ್ಯಾತಿಯ ಹೃದಯ  ತಜ್ಞ  ಡಾ. ಸದಾನಂದ ಶೆಟ್ಟಿ,ಕರ್ನಾಟಕ ಸಂಘ ಸಾಯನ್ ನ ಅಧ್ಯಕ್ಷ ಪ್ರವೀಣ್ ಭಟ್ ಅವರು ಸಂಘದ ಬ್ಯಾನರನ್ನು  ಅನಾವರಣಗೊಳಿಸಿ. ರಿಬ್ಬನ್ ಕತ್ತರಿಸಿ ಸಂಘವನ್ನು ಉದ್ಘಾಟಿಸಿದರು.

 ಗೌರವ ಅತಿಥಿಗಳಾದ ರಾಜಕೀಯ ನೇತಾರ ಅಮಿತ್ ಜೆ.ಶೆಟ್ಟಿ, ಖ್ಯಾತ ನಾಟಕ ನಿರ್ದೇಶಕ ವಿಜಯ ಕುಮಾರ್ ಶೆಟ್ಟಿ ಕೊಡಿಯಲ್ ಬೈಲ್, ಸಂಘದ ಗೌರವಾಧ್ಯಕ್ಷ,  ಅಜಂತ ಕ್ಯಾಟರರ್ಸಸ್ ನ ಮಾಲಕ ಶ್ರೀ ಜಯರಾಮ್ ಶೆಟ್ಟಿ , ಸಲಹೆಗಾರ ,ರಾಜಕೀಯ ಮುಂದಾಳು ಭಾಸ್ಕರ್ ಶೆಟ್ಟಿ, ಗಿರೀಶ್ ಬಿ.ಸಾಲ್ಯಾನ್,  ಪ್ರದೀಪ್ ಶೆಟ್ಟಿ, ಸುಂದರ್ ಶೆಟ್ಟಿ, ಉಪಾಧ್ಯಕ್ಷರುಗಳಾದ ಸತೀಶ್ ಆರ್.ಶೆಟ್ಟಿ, ದಿನೇಶ್ ಶೆಟ್ಟಿ, ಸದಾಶಿವ ಬಿಎನ್ ಶೆಟ್ಟಿ, ಸದಾನಂದ ಶೆಟ್ಟಿ, ಸಂಘದ ಸಂಸ್ಥಾಪಕ ಸದಸ್ಯ ಹ್ಯಾರಿ ಸೀಕ್ವೆರಾ ,ಗೌರವ ಕಾರ್ಯದರ್ಶಿ ಡಾ.ಜಿ.ಪಿ.ಕುಸುಮ, ಜತೆ ಕಾರ್ಯದರ್ಶಿಗಳಾದ ಜಯಶೀಲ ಬಿ.ಮೂಲ್ಯ, ಉಮೇಶ್ ಶೆಟ್ಟಿ ಕುಕ್ಕುಂದೂರು, ದಯಾನಂದ ಆರ್.ಮೂಲ್ಯ, ನವೀನ್ ಪೂಜಾರಿ, ಗೌರವ ಕೋಶಾಧಿಕಾರಿ ಸುರೇಶ್ ಶೆಟ್ಟಿ, ಜತೆ ಕೋಶಾಧಿಕಾರಿ ಚಂದ್ರಿಕಾ ಶೆಟ್ಟಿ, ಚೈತನ್ಯ ಕೆ.ಆಚಾರ್ಯ, ಸಾಂಸ್ಕೃತಿಕ ಸಮಿತಿಯ ತೇಜಾಕ್ಷಿ.ಎಸ್.ಶೆಟ್ಟಿ, ಪ್ರಭಾ ಎನ್.ಸುವರ್ಣ ,ಉಪಸ್ಥಿತರಿದ್ದರು.

No comments

Powered by Blogger.