ಅ.21: ಪೇಜಾವರ ಮಠದಲ್ಲಿಶ್ರೀ ಪುತ್ತೂರು ನರಸಿಂಹ ನಾಯಕ್ ಅವರಿಂದ ಭಕ್ತಿ ಸಂಗೀತ ಉಚಿತ ಕಾರ್ಯಕ್ರಮ

ಮುಂಬಯಿ, ಅ.18 - ಭಕ್ತಿ ಸಂಗೀತ ಕ್ಷೇತ್ರದಲ್ಲಿ ಪ್ರಖ್ಯಾತ ಗಾಯಕರಾದ ಶ್ರೀ ಪುತ್ತೂರು ನರಸಿಂಹ ನಾಯಕ್ ಅವರಿಂದ ದಾಸರ ಪದಗಳ ಭಕ್ತಿ ಸಂಗೀತ ಕಾರ್ಯಕ್ರಮವು ಅ.21 ರಂದು ಶನಿವಾರ ಸಂಜೆ 6.00 ಗಂಟೆಗೆ ಸಾಂತಾಕ್ರೂಜ್ ಪೂರ್ವದ ಪ್ರಭಾತ್ ಕಾಲನಿಯಲ್ಲಿರುವ ಶ್ರೀ ಪೇಜಾವರ ಮಠದಲ್ಲಿ ಜರಗಲಿದೆ.
ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮಿಜಿಯವರ ಶುಭಾಶೀರ್ವಾದಗಳೊಂದಿಗೆ ಪೇಜಾವರ ಮಠ ಮುಂಬಯಿ ಇವರ ಸಹಕಾರದೊಂದಿಗೆ ಧಾರ್ಮಿಕ ಪ್ರಿಯರಾದ ಶ್ರೀಮತಿ ಪ್ರಫುಲ್ಲಾ ಎಸ್. ಕೆ.ಉರ್ವಲ್ ಕುಟುಂಬ ( ಐಐಟಿಸಿ) ಮತ್ತು ಶ್ರೀ ಬಿ. ಆರ್ ಶೆಟ್ಟಿ ಕುಟುಂಬ (ಬಿ. ಆರ್ ರೆಸ್ಟೊರೆಂಟ್ಸ್ ಪ್ರೈ. ಲಿ.) ಸಂಯುಕ್ತ ರೂಪದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಮುಂಬಯಿಗೆ ಕಳೆದ ಅನೇಕ ವರ್ಷಗಳಿಂದ  ಪುತ್ತೂರು ನರಸಿಂಹ ನಾಯಕ್ ಅವರನ್ನು  ಬರಮಾಡಿಸಿ ಭಕ್ತಿ ಸಂಗೀತ ಉಚಿತ ರಸದೌತಣ ನೀಡುತ್ತಾ ಬಂದಿರುವ ಪ್ರಫುಲ್ಲಾ ಎಸ್ ಕೆ  ಉರ್ವಲ್ ಕುಟುಂಬ ಮತ್ತು ಬಿ ಆರ್ ಶೆಟ್ಟಿ ಕುಟುಂಬ ಈ ವರ್ಷವೂ  ಮುಂಬಯಿಯ ಭಕ್ತಿಸಂಗೀತ ಪ್ರೇಮಿಗಳಿಗೆ ಶನಿವಾರ  ಪೇಜಾವರ ಮಠದಲ್ಲಿ ಉಚಿತವಾಗಿ ಕಾರ್ಯಕ್ರಮ ಹಮ್ಮಿಕೊಂಡಿರುವರು. ಭಕ್ತಿ ಸಂಗೀತ ಪ್ರೇಮಿಗಳಿಗೆ ಹಾರ್ದಿಕ ಸ್ವಾಗತವನ್ನು 
ಕೋರಲಾಗಿದೆ. ಕಾರ್ಯಕ್ರಮದ ನಂತರ ಲಘು ಉಪಹಾರದ ವ್ಯವಸ್ಥೆ ಮಾಡಲಾಗಿದೆ.
-------------

 
 .

No comments

Powered by Blogger.