ವಿದ್ಯಾದಾಯಿನಿ ಸಭಾ ಮುಂಬಯಿ - ಆಕ್ಟೊಬರ್ 29 ರಂದು ಶತಮಾನೋತ್ಸವ ಸಂಭ್ರಮ.
ಮುಂಬಯಿಯ ಹಿರಿಯ ಧಾರ್ಮಿಕ ಸಂಸ್ಥೆ ವಿದ್ಯಾದಾಯಿನಿ ಸಭಾ ದ ಶತಮಾನೋತ್ಸವ ಸಂಭ್ರಮವು ಆಕ್ಟೊಬರ್ 29 ರಂದು ಬೆಳ್ಳಿಗ್ಗೆ 9 ಗಂಟೆಯಿಂದ ರಾತ್ರಿ 8 ಗಂಟೆಯ ತನಕ, ಸಾಂತಕ್ರೂಜ್ ಪೂರ್ವದ ಬಿಲ್ಲವ ಭವನದ ಸಭಾಗ್ರಹದ ಸೂರು ಸಿ. ಕರ್ಕೇರ ಸ್ಮರಣಾರ್ಥ ವೇದಿಕೆಯಲ್ಲಿ ಜರಗಲಿದೆ.
ಬೆಳ್ಳಿಗ್ಗೆ 9 ಗಂಟೆಗೆ ಗಣ್ಯರ ಉಪಸ್ಥಿತಿಯಲ್ಲಿ ಶತಮಾನೋತ್ಸವ ಸಮಾರಂಭ ಉದ್ಘಾಟನೆಗೊಳ್ಳಲಿದೆ.
ಆ ಬಳಿಕ ಡೆನ್ನ ಡೆನ್ನಾನ 2023 -ಜಾನಪದ ನ್ರತ್ಯ ಸ್ಪರ್ಧೆ ನಡೆಯಲಿದ್ದು, ಮಧ್ಯಾಹ್ನ ಭೋಜನದ ಬಳಿಕ ವಿಠಲ್ ನಾಯ್ಕ ಕಲ್ಲಡ್ಕ ಅವರಿಂದ ಗೀತಾ ಸಾಹಿತ್ಯ ಸಂಭ್ರಮ-ವಿನೂತನ ಶೈಲಿಯ ಕಾರ್ಯಕ್ರಮ ಜರಗಲಿದೆ.
ಸಂಜೆ 4 ರಿಂದ 5.30 ರ ತನಕ ಜೈ ತುಳುನಾಡ ಸ್ವರ ಮಾಧುರ್ಯ ಪುಣೆ ಇದರ ಕಲಾವಿದರು "ತಾದಿ ತಟ್ಟಾಂಡ" ತುಳು ನಾಟಕ ಪ್ರದರ್ಶನಗೊಳ್ಳಲಿದೆ.
ಸಂಜೆ 5.30 ರಿಂದ ಸಮಾರೋಪ ಸಮಾರಂಭ ಜರಗಲಿದ್ದು, ಗಣ್ಯತಿಗಣ್ಯರ ಸಮ್ಮುಖದಲ್ಲಿ ಬಿಲ್ಲವರ ಎಸೋಸಿಯೇಷನ್ ನ ಅಧ್ಯಕ್ಷ ಹರೀಶ್ ಜಿ. ಅಮೀನ್ ಅವರಿಗೆ ಶತಮಾನದ ಶೇಷ್ಠ ಸಮಾಜ ಸೇವಕ , ಬಿಸಿಸಿಐ ಯ ಅಧ್ಯಕ್ಷ ಎನ್. ಟಿ. ಪೂಜಾರಿ ಅವರಿಗೆ ಶತಮಾನದ ಶ್ರೇಷ್ಠ ಉದ್ಯಮಿ ಬಿರುದು ನೀಡಿ ಸನ್ಮಾನಿಸಲಾಗುವುದು.ಹಾಗೂ ಭಾರತ್ ಬ್ಯಾಂಕ್ ನ ನೂತನ ಕಾರ್ಯಧ್ಯಕ್ಷರಾದ ಸೂರ್ಯಕಾಂತ ಜೆ. ಸುವರ್ಣ ಅವರನ್ನು ಸನ್ಮಾನಿಸಲಾಗುವುದು.
ರಾತ್ರಿ ಪ್ರೀತಿ ಭೋಜನದೊಂದಿಗೆ ಶತಮಾನೋತ್ಸವ ಸಮಾಪನಗೊಳ್ಳಲಿದೆ.
ದಿನವಿಡೀ ನಡೆಯುವ ಶತ ಸಂಭ್ರಮದಲ್ಲಿ ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತ್ತೆ , ವಿದ್ಯಾದಾಯಿನಿ ಸಭಾದ ಗೌರವ ಅಧ್ಯಕ್ಷ ಜೆ. ಎಂ. ಕೋಟ್ಯಾನ್, ಅಧ್ಯಕ್ಷ ಪುರುಷೋತ್ತಮ ಎಸ್. ಕೋಟ್ಯಾನ್, ಉಪಾಧ್ಯಕ್ಷ ಆರ್.ಕೆ . ಕೋಟ್ಯಾನ್, ಗೌರವ ಪ್ರಧಾನ ಕಾರ್ಯದರ್ಶಿ ಚಿತ್ರಾಪು ಕೆ. ಎಂ. ಕೋಟ್ಯಾನ್, ಗೌರವ ಕೋಶಾಧಿಕಾರಿ ಪದ್ಮನಾಭ ಎಸ್. ಪೂಜಾರಿ, ಜತೆ ಕಾರ್ಯದರ್ಶಿ ಉಮೇಶ್ ಕೆ. ಅಂಚನ್, ಹರೀಶ್ ಶಾಂತಿ, ಜತೆ ಕೋಶಾಧಿಕಾರಿ ಶರತ್ ಜಿ. ಪೂಜಾರಿ, ಶಾಲಾ ಕಾರ್ಯಧ್ಯಕ್ಷ ಪ್ರಕಾಶ್ ಮೂಡಬಿದ್ರಿ, ಮಹಿಳಾ ವಿಭಾಗದ ಕಾರ್ಯಧ್ಯಕ್ಷೇ ವಸಂತಿ ಆರ್. ಕೋಟ್ಯಾನ್ , ಸೇವಾ ದಳದ ಜೆ. ಓ. ಸಿ ಸುರೇಶ್ ಎಂ. ಪೂಜಾರಿ ಮತ್ತು ಸದಸ್ಯರು , ಹಾಗೂ ಶತಮಾನೋತ್ಸವ ಸಂಭ್ರಮ ಸಮಿತಿಯ ಪದಾಧಿಕಾರಿಗಳು ವಿನಂತಿಸಿದ್ದಾರೆ.
Post a Comment