ಅ.15 ರಿಂದ 24ರ ತನಕ ಶ್ರೀ ಕ್ಷೇತ್ರ ಉಮಾಮಹೇಶ್ವರೀ ದೇವಸ್ಥಾನ, ಜರಿಮೆರಿ ಯಲ್ಲಿ ನವರಾತ್ರಿ, ದಸರಾ ಮಹೋತ್ಸವ
ಕುರ್ಲಾ ಪಶ್ಚಿಮದ ಜರಿಮೆರಿಯ ಶ್ರೀ ಕ್ಷೇತ್ರ ಉಮಾಮಹೇಶ್ವರೀ ದೇವಸ್ಥಾನದಲ್ಲಿ 15 -10 - 2023 ರಿಂದ 24 - 10 - 2023 ರ ತನಕ ನವರಾತ್ರಿ ಮಹೋತ್ಸವವು ವಿಜೃಂಭಣೆಯಿಂದ ಜರಗಲಿದೆ.
15 - 10 2023 ರಂದು ಬೆಳಿಗ್ಗೆ 9:00 ರಿಂದ ಪ್ರಾರ್ಥನೆ, ಪುಣ್ಯಾಹ, ಗಣಯಾಗ, ಕಲಶಾಭಿಷೇಕದೊಂದಿಗೆ ನವರಾತ್ರಿ ಉತ್ಸವವು ಪ್ರಾರಂಭಗೊಳ್ಳಲಿದೆ .
19 - 10 -2023 ಗುರುವಾರದಂದು ಲಲಿತಾ ಪಂಚಮಿ ಪ್ರಯುಕ್ತ ರಾತ್ರಿ 8:30 ಕ್ಕೆ ದುರ್ಗಾ ನಮಸ್ಕಾರ ಪೂಜೆ ಜರಗಲಿದೆ.
22 - 10 - 2023 ರವಿವಾರದಂದು ದುರ್ಗಾಷ್ಟಮಿ ಪ್ರಯುಕ್ತ ಬೆಳಿಗ್ಗೆ 10.00 ಗಂಟೆಯಿಂದ 12.00 ರ ತನಕ ದುರ್ಗಾಹೋಮ ನಡೆಯಲಿದೆ .
23 - 10 -2023 ಸೋಮವಾರ ದಂದು ಮಹಾನವಮಿ ಆಚರಣೆ,
24 - 10 - 2023 ರಂದು ಮಂಗಳವಾರ ವಿಜಯದಶಮಿ ಪ್ರಯುಕ್ತ ಬೆಳಿಗ್ಗೆ 10.00 ಗಂಟೆಗೆ ಸರಸ್ವತಿ ಪೂಜೆ, ಮಧ್ಯಾಹ್ನ 12:30ಕ್ಕೆ ಮಹಾಪೂಜೆ ಅನಂತರ ಗಂಟೆ 1.00 ರಿಂದ ಅನ್ನ ಸಂತರ್ಪಣೆ ಜರಗಲಿದೆ .
ಅಂದು ರಾತ್ರಿ 9.00 ಕ್ಕೆ ರಂಗಪೂಜೆ ,ನಂತರ ತೀರ್ಥ ಪ್ರಸಾದ ವಿತರಣೆ ನಡೆಯಲಿದೆ.
ನವರಾತ್ರಿಯ 10 ದಿನಗಳಲ್ಲೂ ಪ್ರತೀದಿನ ಮಧ್ಯಾಹ್ನ 12:30ಕ್ಕೆ ಮಹಾಪೂಜೆ, ರಾತ್ರಿ 7.00 ಗಂಟೆಯಿಂದ 9.00 ರ ತನಕ ಭಜನೆ, ನಂತರ 9.00 ಗಂಟೆಗೆ ಮಹಾಪೂಜೆ, ನಂತರ ತೀರ್ಥ ಪ್ರಸಾದ ವಿತರಣೆ ಜರಗಲಿದೆ.
ಸರ್ವ ಭಕ್ತರು ಈ ನವರಾತ್ರಿ ಮಹೋತ್ಸವಕ್ಕೆ ಆಗಮಿಸಿ ತೀರ್ಥ ಪ್ರಸಾದ ಸ್ವೀಕರಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗ ಬೇಕಾಗಿ ಅರ್ಚಕರು, ಭಜನಾ ಮಂಡಳಿ ಹಾಗೂ ಭಕ್ತ ಮಂಡಳಿ ಮತ್ತು ಆಡಳಿತ ಮುಕ್ತಸರರಾದ ಶ್ರೀಮತಿ ಲಲಿತಾ ಬಿ.ಕೆ ಶೀನ ವಿನಂತಿಸಿದ್ದಾರೆ.
Post a Comment