ಕಾಮೊಟೆ : ಶ್ರೀ ದುರ್ಗಾಪರಮೇಶ್ವರಿ ಮಂದಿರದಲ್ಲಿ ನವರಾತ್ರಿ ಉತ್ಸವ
ನವಿ ಮುಂಬಯಿ ಅ 19 .ತುಳು ಕನ್ನಡ ವೆಲ್ಫೇರ್ ಅಸೋಸಿಯೇಷನ್ (ರಿ) ಕಾಮೊಟೆ ಇದರ ಶ್ರೀ ದುರ್ಗಾಪರಮೇಶ್ವರಿ ಮಂದಿರದ ಜೀರ್ಣೋದ್ಧಾರ ಪುನರ್ ಪ್ರತಿಷ್ಠೆ ಹಾಗೂ ನವರಾತ್ರಿ ಉತ್ಸವದ ಕಾರ್ಯಕ್ರಮ ತಾರೀಕು 14/10/2023ನೇ ಶನಿವಾರ ವಾರದಿಂದ ಪ್ರಾರಂಭವಾಗಿದ್ದು, ಪ್ರತಿ ದಿನ 23 /10 /2023ನೇ ಸೋಮವಾರದವರೆಗೆ ವಿಜ್ರಮಣಿಯಿಂದ ಜರುಗಲಿದೆ
14/10/2023ರ ಶನಿವಾರ ಸಾಯಂಕಾಲ ವಾಸ್ತು ಪೂಜೆ ಸುದರ್ಶನ ಹೋಮ ಇನ್ನಿತರ ಕಾರ್ಯಕ್ರಮಗಳೊಂದಿಗೆ 15-10.2023 ರಂದು ರವಿವಾರ ಬೆಳಿಗ್ಗೆ ಗಣ ಹೋಮ ಬಿಂಬ ಪ್ರತಿಷ್ಠೆ ನಡೆದು, ಭಜನೆ, ಮಹಾ ಮಂಗಳಾರತಿ ನೆರವೇರಿತು.
ಭಜನಾ ಕಾರ್ಯಕ್ರಮ ಪ್ರತಿದಿನ ಸಂಜೆ ನಡೆಯಲಿದ್ದು ತದನಂತರ ಶ್ರೀದೇವಿಗೆ ಮಹಾಮಂಗಳಾರತಿ ತೀರ್ಥ ಪ್ರಸಾದ ಅನ್ನಪ್ರಸಾದ ಜರುಗಲಿದ್ದು ನವರಾತ್ರಿ ದಿನದಂದು 23 ತಾರೀಕಿಗೆ ಮಹಾ ಅನ್ನಪ್ರಸಾದ ಸೇವೆ ವಿಜೃಂಭಣೆಯಿಂದ ಜರುಗಲಿದೆ, ಆ ಪ್ರಯುಕ್ತ ಭಕ್ತಾದಿಗಳಾದ ತಾವೆಲ್ಲರೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀ ದುರ್ಗಾಪರಮೇಶ್ವರಿ ದೇವಿಯ ಕೃಪೆಗೆ ಪಾತ್ರರಾಗಿ ತೀರ್ಥ ಪ್ರಸಾದವನ್ನು ಸ್ವೀಕರಿಸಿ ಕೃತಾರ್ಥರಾಗಬೇಕಾಗಿ ಸಂಸ್ಥೆಯ ಗೌರವ ಅಧ್ಯಕ್ಷರು ಎಸ್ ಡಿ ಕೋಟ್ಯಾನ್, ಅಧ್ಯಕ್ಷರು ಸುಜಿತ್ (ಲಕ್ಷ್ಮೀಶ) ಪೂಜಾರಿ, ಕಾರ್ಯದರ್ಶಿ ಸುಧಾಕರ ಪೂಜಾರಿ ಕೆಮ್ತತುರ್ ಮತ್ತು ಪದಾಧಿಕಾರಿಗಳು ಮಹಿಳಾ ವಿಭಾಗ ಯುವ ವಿಭಾಗ ಸಮಿತಿಯ ಸದಸ್ಯರು ಹಾಗೂ ಸಂಸ್ಥೆಯ ಸರ್ವ ಸದಸ್ಯರು ವಿನಂತಿಸಿದ್ದಾರೆ.
Post a Comment