ಬಿಲ್ಲವರ ಎಸೋಸಿಯೇಶನ್ ಮುಂಬಯಿ ಕಾಂದಿವಲಿ, ಸ್ಥಳೀಯ ಕಚೇರಿ, ನೂತನ ನಿರ್ದೇಶಕರ ತಂಡಕ್ಕೆ ಗೌರವ:
ಬಿಲ್ಲವರ ಎಸೋಸಿಯೇಶನ್ ಮುಂಬಯಿ ಕಾಂದಿವಲಿ, ಸ್ಥಳೀಯ ಕಚೇರಿ, ನೂತನ ನಿರ್ದೇಶಕರ ತಂಡಕ್ಕೆ ಗೌರವ:
ನೂತನ ನಿರ್ದೇಶಕರ ಮಂಡಳಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೊಸ ಶಕೆಗೆ ನಾಂದಿಯಾಗಲಿ: ಯೊಗೇಶ್ ಕೆ. ಹೆಜ್ಮಾಡಿ
ಚಿತ್ರ , ವರದಿ : ರಮೇಶ್ ಉದ್ಯಾವರ.
ಕಾಂದಿವಲಿ : ಬಿಲ್ಲವರ ಎಸೋಸಿಯೇಷನ್ ಮುಂಬೈ ಕಾಂದಿವಿಲಿ ಸ್ಥಳೀಯ ಕಚೇರಿಯ ವತಿಯಿಂದ ಇತ್ತೀಚೆಗೆ ನಗರದ ಪ್ರತಿಷ್ಠಿತ ಭಾರತ್ ಕೋಅಪರೇಟಿವ್ ಬ್ಯಾಂಕಿನ ನಿರ್ದೇಶಕರ ಮಂಡಳಿಗೆ ಜರಗಿದ ಚುನಾವಣೆಯಲ್ಲಿ ಜಯಗಳಿಸಿದ ಸೂರ್ಯಕಾಂತ್ ಜಯ ಸುವರ್ಣ ಮತ್ತು ತಂಡದ ನಿರ್ದೇಶಕರುಗಳನ್ನು ಅಕ್ಟೋಬರ್ 12ರಂದು ವಾರದ ಗುರು ಪೂಜೆಯ ವಿಶೇಷ ಕಾರ್ಯಕ್ರಮದಲ್ಲಿ ಕಾಂದಿವಲಿ ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷ ಯೋಗೇಶ್ ಕೆ ಹೆಜ್ಮಾಡಿ ಮತ್ತು ಕಚೇರಿಯ ಪಧಾಧಿಕಾರಿಗಳು ಸನ್ಮಾನಿಸಿ ಶುಭ ಹಾರೈಸಿದರು.
ಬಳಿಕ ಸನ್ಮಾನ ಕಾರ್ಯಕ್ರಮದಲ್ಲಿ ನೂತನ ನಿರ್ದೇಶಕರುಗಳನ್ನು ಉದ್ದೇಶಿಸಿ ಮಾತನಾಡಿದ ಅವರು ದಿ. ಜಯ ಸುವರ್ಣರ ಆದರ್ಶ ದೂರದೃಷ್ಟಿ ಭಾರತ್ ಕೋ ಆಪರೇಟಿವ್ ಬ್ಯಾಂಕ್ ಮಹಾನಗರದಲ್ಲಿ ಹಾಗೂ ದೇಶದಲ್ಲಿ ಅಗ್ರಮಾನ್ಯ ಹಣಕಾಸು ಸಂಸ್ಥೆ ಎಂಬ ಕೀರ್ತಿಗೆ ಪಾತ್ರವಾಗಿದೆ. ಇದೀಗ ನೂತನ ಆಯ್ಕೆಯಾದ ಕಾರ್ಯಾಧ್ಯಕ್ಷ ಸೂರ್ಯಕಾಂತ್ ಜೆ ಸುವರ್ಣರ ಸಾರಥ್ಯ ಬ್ಯಾಂಕ್ ನ್ನು ಸಂಪೂರ್ಣ ಸರ್ವಾಂಗೀಣ ಬೆಳವಣಿಗೆಯತ್ತ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸುವ ಮೂಲಕ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲಿನ ಶಕೆಯೊಂದು ಪ್ರಾರಂಭವಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ ಕಾರ್ಯಾಧ್ಯಕ್ಷ ಸೂರ್ಯ ಕಾಂತ್ ಜೆ ಸುವರ್ಣ ಉಪ ಕಾರ್ಯಾಧ್ಯಕ್ಷ ನ್ಯಾI ಸೋಮನಾಥ್ ಬಿ ಅಮೀನ್ ರವರನ್ನು ಕಚೇರಿಯ ವತಿಯಿಂದ ಶಾಲು ಹೊದಿಸಿ ಪೇಟ ತೊಡಿಸಿ ಫಲಪುಷ್ಪ ಗುರುಪ್ರಸಾದ ನೀಡಿ ಸನ್ಮಾನಿಸಲಾಯಿತು. ಬಳಿಕ ನಿರ್ದೇಶಕರುಗಳಾದ ಮೋಹನ್ ದಾಸ್ ಜಿ ಪೂಜಾರಿ ಸಂತೋಷ್ ಕೆ ಪೂಜಾರಿ ಮಲಾಡ್ ಮತ್ತು ಸ್ಥಳೀಯ ಕಚೇರಿಯ ಮಾಜಿ ಕಾರ್ಯಾಧ್ಯಕ್ಷ ಹಾಗೂ ನಿರಂತರವಾಗಿ ಮೂರನೇ ಬಾರಿಗೆ ನಿರ್ದೇಶಕ ಮಂಡಳಿಗೆ ಆಯ್ಕೆಯಾದ ತಂಡದ ಯುವ ಉತ್ಸಾಹಿ ಸಮಾಜ ಸೇವಕ ಗಂಗಾಧರ ಜೆ ಪೂಜಾರಿ ದಂಪತಿಯವರನ್ನು ಈ ಸಂದರ್ಭದಲ್ಲಿ ಸಮಿತಿಯ ವತಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಪ್ರಾರಂಭದಲ್ಲಿ ಸ್ಥಳೀಯ ಕಚೇರಿಯ ಮಹಿಳಾ ಸದಸ್ಯರಿಂದ ಭಜನಾ ಕಾರ್ಯಕ್ರಮ ಜರಗಿತು. ಬಳಿಕ ಕಾರ್ಯಾಧ್ಯಕ್ಷ ಯೊಗೇಶ್ ಕೆ ಹೆಜ್ಮಾಡಿ ಅವರ ನೇತೃತ್ವದಲ್ಲಿ ಶ್ರೀ ನಾರಾಯಣ ಗುರುಗಳಿಗೆ ವಿಶೇಷ ಪೂಜೆ ಮಹಾ ಆರತಿ ಜರಗಿತು ಪ್ರಸಾದ ವಿತರಣೆ ನೆರವೇರಿತು .
ಕಾರ್ಯಕ್ರಮದಲ್ಲಿ ಓಂ ಶ್ರೀ ಜಗದೀಶ್ವರಿ ಸೇವಾ ಬ್ರಹ್ಮ ಬೆದರ್ಕಳ ಗರಡಿ ಮಗಥಾಣೆ ಮಾಜಿ ಅಧ್ಯಕ್ಷ ರಾದ ಶೇಖರ್ ಇಂದು ಸಾಲ್ಯಾನ್, ವಿಶ್ವನಾಥ ಬಂಗೇರ ಕರ್ನಾಟಕ ಸಂಸ್ಥೆ ನಾಲಾಸೋಪಾರ ವಿರಾರ್ ಅಧ್ಯಕ್ಷರಾದ ಸದಾಶಿವ ಸಿ ಕರ್ಕೇರ ಸೇವಾದಳದ ಜಿಓಸಿ ಗಣೇಶ್ ಪೂಜಾರಿ ಅಶೋಕ್ ಕುಕ್ಯಾನ್, ಬ್ಯಾಂಕ್ ನ ಉನ್ನತ ಅಧಿಕಾರಿ ಜನಾರ್ಧನ ಪೂಜಾರಿ ಭಾಗವಹಿಸಿದ್ದರು. ಸ್ಥಳೀಯ ಕಚೇರಿಯ ಗೌ. ಕಾರ್ಯಾಧ್ಯಕ್ಷ ಎನ್ ಜಿ ಪೂಜಾರಿ, ಉಪ ಕಾರ್ಯಾಧ್ಯಕ್ಷ ಜಗನ್ನಾಥ್ ಡಿ ಕುಕ್ಯಾನ್, ರಮೇಶ್ ಬಂಗೇರ, ಜತೆ ಕಾರ್ಯದರ್ಶಿ ವಾರಿಜಾ ಎಸ್ ಕರ್ಕೇರ ಕೇಂದ್ರ ಕಚೇರಿಯ ಮಹಿಳಾ ವಿಭಾಗದ ಕಾರ್ಯದರ್ಶಿ ಸಬಿತಾ ಜಿ ಪೂಜಾರಿ ಸುಂದರ್ ಪೂಜಾರಿ ಬೆಳುವಾಯಿ ಜಯರಾಮ ಪೂಜಾರಿ ಪ್ರತ್ವಿಕ್ ಪೂಜಾರಿ ನಾರಾಯಣ ಸುವರ್ಣ ಸುರೇಶ್ ಜಿ ಕೋಟ್ಯಾನ್ ಶುಭ ಸುವರ್ಣ ಸುಜಾತ ಪೂಜಾರಿ ಸುರೇಖ ಪೂಜಾರಿ ಮತ್ತು ಭಕ್ತರು ಸದಸ್ಯರು ಉಪಸ್ಥಿತರಿದ್ದು, ಕಾರ್ಯ ಕ್ರಮದ ಯಶಸ್ವಿಗೆ ಸಹಕರಿಸಿದರು. ಕೋಶಾಧಿಕಾರಿ ಯಮುನಾ ಬಿ ಸಾಲ್ಯಾನ್ ಕುಟುಂಬಸ್ಥರರಿಂದ ಇಂದಿನ ವಿಶೇಷ ಪೂಜೆಯನ್ನು ನೀಡಿದರು. ಕಾರ್ಯಕ್ರಮ ದ ಕೊನೆಯಲ್ಲಿ ಕಚೇರಿಯ ಕಾರ್ಯದರ್ಶಿ ಉಮೇಶ್ ಸುರತ್ಕಲ್, ವಂದನೆ ಅರ್ಪಿಸಿದರು.
Post a Comment