ಪುತ್ತೂರು ಅಡಗಿಸಿಟ್ಟ ಸೈಲೆಂಟ್ ಮೊಬೈಲ್ ಗೂ ಬಂದ ಫ್ಲ್ಯಾಶ್ ಮೆಸೇಜ್ ನಿಂದ ಸಿಕ್ಕಿ ಬಿದ್ದ ವಿದ್ಯಾರ್ಥಿಗಳು ಕಾಲೇಜೊಂದರ ಹಲವು ವಿದ್ಯಾರ್ಥಿಗಳ ಮೊಬೈಲ್ ಸೀಝ್…
ನ್ಯೂಸ್ ಆ್ಯರೋ : ಪ್ರತಿಯೊಬ್ಬರ ಮೊಬೈಲ್ ಗೂ ಗುರುವಾರ ಬೀಪ್ ಶಬ್ದದೊಂದಿಗೆ ಎಚ್ಚರಿಕೆ ಸಂದೇಶ ಬಂದಿದ್ದು ಕೆಲವರು ಇದರಿಂದ ಕ್ಷಣ ಕಾಲ ಆತಂಕಗೊಂಡಿದ್ದು, ಬಳಿಕ ಇದು ಮುನ್ನೆಚ್ಚರಿಕೆ ಸೂಚನೆಯ ಪರೀಕ್ಷಾರ್ಥ ಬಂದಿರುವುದು ಎಂದು ತಿಳಿದು ನಿರಾಳರಾದರು. ಕೆಲವರು ಇದರಿಂದ ಪೇಚಿಗೀಡಾದ ಪ್ರಸಂಗವು ನಡೆದಿದೆ.
ಮುಂಬರುವ ದಿನಗಳಲ್ಲಿ ಸಂಭವಿಸುವ ವಿಕೋಪಗಳ ಕುರಿತು ಮುನ್ಸೂಚನೆ ನೀಡುವ ನಿಟ್ಟಿನಲ್ಲಿ ಪ್ರತಿಯೊಬ್ಬರ ಮೊಬೈಲ್‍ಗೆ ಎಚ್ಚರಿಕೆ ಫ್ಲ್ಯಾಶ್ ಸಂದೇಶ ಬೀಪ್ ಶಬ್ಧದೊಂದಿಗೆ ಬಂದಿದೆ.
ಸ್ಮಾರ್ಟ್‍ಫೋನ್ ಬಳಕೆದಾರರಿಗೆ ಕಳೆದ ಎರಡು ದಿನಗಳಿಂದ ರಾಜ್ಯದ ದೂರಸಂಪರ್ಕ ಇಲಾಖೆ (ಸಿ-ಡಾಟ್) ಸೆಲ್ ಬ್ರಾಡ್ ಕಾಸ್ಟಿಂಗ್ ಮೂಲಕ ತುರ್ತು ಎಚ್ಚರಿಕೆ ವ್ಯವಸ್ಥೆಯ ಕುರಿತು ಸಂದೇಶಗಳನ್ನು ಕಳುಹಿಸುತ್ತಿದೆ. ಅಂತೆಯೇ ಗುರುವಾರ ಹೆಚ್ಚಿನವರು ಈ ಸಂದೇಶವನ್ನು
ಸಾರ್ವಜನಿಕರ ಸುರಕ್ಷತೆಗಾಗಿ ತುರ್ತು ಸಂದರ್ಭಗಳಲ್ಲಿ ಎಚ್ಚರಿಕೆ ನೀಡಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಜಾರಿಗೊಳಿಸುತ್ತಿರುವ ಪ್ಯಾನ್-ಇಂಡಿಯಾ ತುರ್ತು ಎಚ್ಚರಿಕೆ ವ್ಯವಸ್ಥೆಯನ್ನು ಪರೀಕ್ಷಿಸಲು ಈ ಸಂದೇಶವನ್ನು ಕಳುಹಿಸಲಾಗಿದೆ.ಪದೇ ಪದೇ ಬರುತ್ತಿದ್ದ ಈ ಸಂದೇಶವನ್ನು ನಿಲ್ಲಿಸುವ ಆಯ್ಕೆಯನ್ನು ಗ್ರಾಹಕರಿಗೆ ನೀಡಲಾಗಿದೆ. ಮೊಬೈಲ್ ಸ್ವಿಚ್ ಆಫ್ ಆಗಿದ್ದರೂ, ನೆಟ್ವರ್ಕ್ ವಲಯದಲ್ಲಿ ಇಲ್ಲದೇ ಇದ್ದರೂ, ಏರೋಪ್ಲೇನ್ ಮೋಡ್ ನಲ್ಲಿ ಇದ್ದರೂ ಈ ಸಂದೇಶ ಬರುತ್ತಿದೆ ಎಂದು ಗ್ರಾಹಕರು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಸುತ್ತಿದ್ದರು.
ಸ್ಮಾರ್ಟ್ ಫೋನ್ ಬಳಕೆದಾರರು ಈ ಸಂದೇಶವನ್ನು ಓದಿರುವುದನ್ನು ಖಚಿತಪಡಿಸಿದ ಬಳಿಕವಷ್ಟೇ ಬೀಪ್ ಶಬ್ದ ನಿಲ್ಲುವಂತೆ ಮಾಡುವ ಆಯ್ಕೆ ಇತ್ತು. ಇದು ಕೇವಲ ಎಚ್ಚರಿಕೆ ಪರೀಕ್ಷೆ. ಎಲ್ಲರೂ ಇದನ್ನು ಓದಿದ್ದಾರೆ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದಷ್ಟೇ ಇದರ ಉದ್ದೇಶವಾಗಿದೆ.ಇನ್ನು ಕಚೇರಿ, ಶಾಲೆ, ಕಾಲೇಜುಗಳಲ್ಲಿ ಇದ್ದ ಸಿಬ್ಬಂದಿ, ವಿದ್ಯಾರ್ಥಿಗಳ ಮೊಬೈಲ್ ಗಳು ಏಕಕಾಲದಲ್ಲಿ ರಿಂಗಣಿಸಿದ್ದು, ಒಂದು ಕ್ಷಣ ಎಲ್ಲರನ್ನೂ ಬೆಚ್ಚಿ ಬೀಳುವಂತೆ ಮಾಡಿದೆ, ಮಾತ್ರವಲ್ಲ ವಿದ್ಯಾರ್ಥಿಗಳಿಗೆ ಸಂಕಷ್ಟ ತಂದೊಡ್ಡಿದೆ.
ಶಾಲೆ, ಕಾಲೇಜುಗಳಲ್ಲಿ ಮೊಬೈಲ್ ಗೆ ನಿರ್ಬಂಧವಿದ್ದರೂ ಹಲವು ವಿದ್ಯಾರ್ಥಿಗಳು ಬೀಪ್ ಶಬ್ದದಿಂದ ಸಿಕ್ಕಿಬಿದ್ದಿದ್ದಾರೆ. ಪುತ್ತೂರಿನ ಕಾಲೇಜೊಂದರಲ್ಲಿ ಶಿಕ್ಷಕರು ಹಲವು ವಿದ್ಯಾರ್ಥಿಗಳ ಮೊಬೈಲ್ ಅನ್ನು ತಾತ್ಕಾಲಿಕವಾಗಿ ವಶಕ್ಕೆ ಪಡೆದಿದ್ದಾರೆ
Post a Comment