ಆ 15 ರಿಂದ 25 ರ ವರಗೆ ಶಹಾಡ್ ಶ್ರೀ ಮೂಕಾಂಬಿಕಾ ದೇವೀ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವ



ಆ 15 ರಿಂದ 25 ರ ವರಗೆ  ಶಹಾಡ್ ಶ್ರೀ ಮೂಕಾಂಬಿಕಾ ದೇವೀ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವ

ಕಲ್ಯಾಣ್, ಶಹಾಡ್ ಬಿರ್ಲಾ ಗೇಟ್ ನ ಶ್ರೀ ಮೂಕಾಂಬಿಕಾ ದೇವೀ ದೇವಸ್ಥಾನ (ವ್ಯವಸ್ಥಾಪಕರು :- ಶ್ರೀ ನಿತ್ಯಾನಂದ ಮಿತ್ರ ಭಜನಾ ಮಂಡಳಿ(ರಿ) ) ಇಲ್ಲಿ ಸ್ವಸ್ತಿ ಶ್ರೀ ಶುಭಕತ್ ನಾಮ ಸಂ / ದ ಕನ್ಯಾ, ಮಾಸ ದಿನ 9 ಸಲುವ ಅಶ್ವಯುಜ ಶು /ಪ್ರತಿಪತ್ ದಿನಾಂಕ 15/10/2023 ರವಿವಾರ ಮೊದಲ್ಗೊಂಡು 24/10/2023 ನೇ ಮಂಗಳವಾರ ದವರೆಗೆ ಶಹಾಡ್ ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನ ದಲ್ಲಿ ಶರನ್ನವರಾತ್ರಿ ಮಹೋತ್ಸವ ವು ಹಾಗೂ ಧಾರ್ಮಿಕ ಪೂಜೆ ಗಳು, ಡೊಂಬಿವಲಿ ಯ ಶ್ರೀ ಶಂಕರನಾರಾಯಣ ತಂತ್ರಿ ಮತ್ತು ಶ್ರೀ ಶ್ರೀಕಾಂತ್ ತಂತ್ರಿ ಇವರ ನೇತೃತ್ವ ದಲ್ಲಿ ಜರಗಲಿದೆ, ಅಲ್ಲದೆ ವಿವಿಧ ಭಜನಾ ಮಂಡಳಿ ಗಳಿಂದ ಭಜನಾ ಸೇವಾ, ಅನ್ನ ಸಂತರ್ಪಣೆ, ಜರಗಲಿದೆ, 


ಪೂಜಾ ಕಾರ್ಯಕ್ರಮ.

ದಿನ ನಿತ್ಯ ಪೂಜೆಗಳು : ಅಷ್ಟೋತ್ತರ ಪೂಜೆ, ಕುಂಕುಮ ಅರ್ಚನೆ, ದುರ್ಗಾ, ಮಂತ್ರ ಅರ್ಚನೆ, ಮಹಾಪೂಜೆ, ಲಲಿತಾ ಸಹಸ್ರ ನಾಮ ಅರ್ಚನಾ.

15/10/2023 ರವಿವಾರ ಸಂಜೆ- ಶ್ರೀ ಮೂಲ ದುರ್ಗಾ ಕಲ್ಪೋಕ್ತ ಪೂಜಾ, 5.00 pm ರಿಂದ ಗಾನ ಪ್ರೀಯ ಸಂಗೀತ ತಂಡ ದಿಂದ ಸಂಗೀತ,
  6.30 p.m. to 8.30 p.m. ಶ್ರೀ ವರದ ಸಿದ್ಧಿವಿನಾಯಕ ಸೇವಾ ಮಂಡಳಿ ಡೊಂಬಿವಲಿ,, ಇವರಿಂದ ಭಜನಾ ಕಾರ್ಯಕ್ರಮ.

16/10/2023 ಸೋಮವಾರ ಸಂಜೆ- ಶ್ರೀ ಆರ್ಯ ದುರ್ಗಾ ಕಲ್ಪೋಕ್ತ ಪೂಜಾ, 
 6.30 p.m. to 8.30 p.m. ಶ್ರೀ ಸ್ವರ ಕಲಾ ವೇದಿಕೆ ಕರ್ನಾಟಕ ಸಂಘ ಕಲ್ಯಾಣ್,, ಇವರಿಂದ ಭಜನಾ ಕಾರ್ಯಕ್ರಮ.

17/10/2023 ಮಂಗಳವಾರ ಸಂಜೆ- ಶ್ರೀ ಭಗವತಿ ದುರ್ಗಾ ಕಲ್ಪೋಕ್ತ ಪೂಜಾ,
 6.30 pm to 8.30 pm. ಶ್ರೀ ಗುರು ನಾರಾಯಣ ಭಜನಾ ಮಂಡಳಿ ಬಿಲ್ಲವರ ಅಸೊ. ಲೋಕಲ್ ಆಫೀಸ್ ಕಲ್ಯಾಣ್, ಇವರಿಂದ ಭಜನಾ ಕಾರ್ಯಕ್ರಮ.

18/10/2023 ಬುಧವಾರ ಸಂಜೆ- ಶ್ರೀ ಕುಮಾರಿ ದುರ್ಗಾ ಕಲ್ಪೋಕ್ತ ಪೂಜಾ,
 6.30 p.m. to 8.30 p.m. ಓಂ ಶಕ್ತಿ ಮಹಿಳಾ ಸಂಸ್ಥಾ, ಕಲ್ಯಾಣ್, ಇವರಿಂದ ಭಜನಾ ಕಾರ್ಯಕ್ರಮ.

19/10/2023 ಗುರುವಾರ ಸಂಜೆ- ಶ್ರೀ ಅಂಬಿಕಾ ದುರ್ಗಾ ಕಲ್ಪೋಕ್ತ ಪೂಜಾ,
 6.30 p.m. to 8.30 p.m. ವೆಂಕಟ ರಮಣ ಭಜನಾ ಮಂಡಳಿ ಡೊಂಬಿವಲಿ ಇವರಿಂದ ಭಜನಾ ಕಾರ್ಯಕ್ರಮ.

20/10/2023 ಶುಕ್ರವಾರ ಸಂಜೆ- ಶ್ರೀ ಮಹಿಷಮರ್ದಿನಿ ದುರ್ಗಾ ಕಲ್ಪೋಕ್ತ ಪೂಜಾ,
8.30 A.M. TO 8.30 PM. ಬಂಟರ ಸಂಘ ಪ್ರಾದೇಶಿಕ ಸಮಿತಿ ಭಿವಂಡಿ . ಕಲ್ಯಾಣ್ ಉಲ್ಲಾಸ್ ನಗರ್.ಅಂಬರನಾಥ್ ಬದ್ಲಾಪು‌ರ್, ಇವರಿಂದ ಭಜನಾ ಕಾರ್ಯಕ್ರಮ.

21/10/2023 ಶನಿವಾರ 2.30 PM. TO 6.00 PM. "ಸುದರ್ಶನ ವಿಜಯ" ಯಕ್ಷಗಾನ ಶ್ರೀ ದುರ್ಗಾಪರಮೇಶ್ವರಿ ಕೃಪಾ ಪೋಷಿತ ಯಕ್ಷಗಾನ ಮಂಡಳಿ ಸಾಕಿನಾಕ ಇವರಿಂದ. ಪ್ರಾಯೋಜಕರು - ಪ್ರಸನ್ನ ಶೆಟ್ಟಿ ಬೆಳಂಪಳ್ಳಿ ಕುಕ್ಕಿಕಟ್ಟೆ, ಅನಿಲ್ ಶೆಟ್ಟಿ, ವಕ್ಕೇರಿ, ಪ್ರಶಾಂತ್ ಶೆಟ್ಟಿ ಬೆಳ್ಳಂಪಳ್ಳಿ ಕುಕ್ಕಿಕಟ್ಟೆ, ಹೋಟೆಲ್ ಸಂದೀಪ್ ಕಲ್ಯಾಣ್. 
ಸಂಜೆ- ಶ್ರೀ ಚಂಡಿಕಾ ದುರ್ಗಾ ಕಲ್ಪೋಕ್ತ ಪೂಜಾ, ಪುಸ್ತಕ ಪೂಜಾ ಪ್ರಾರಂಭ.
 6.30 pm to 8.30 p.m. ಕುಲಾಲ ಸಂಘ ಶ್ರೀ ಗುರು ವಂದನಾ ಭಜನಾ ಮಂಡಳಿ ಪ್ರಾದೇಶಿಕ ಸಮಿತಿ ಥಾಣಿ, ಕಸಾರ, ಕರ್ಜತ, ಇವರಿಂದ ಭಜನಾ ಕಾರ್ಯಕ್ರಮ.

22/10/2023 ರವಿವಾರ ಬೆಳಿಗ್ಗೆ - ಶ್ರೀ ದುರ್ಗಾ ಹೋಮ ಪೂರ್ಣಾಹುತಿ. 9.00 a.m. to 12.00 ಮಧ್ಯಾಹ್ನ ದುರ್ಗಾ ಅಷ್ಟಮಿ, ಸಂಜೆ ಶ್ರೀ ಸರಸ್ವತಿ, ದುರ್ಗಾ ಕಲ್ಪೋಕ್ತ ಪೂಜಾ,
3.00 PM. ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ. 
 6.30 p.m. to 8.30 p.m. ಶ್ರೀ ದೇವಾನಂದ ಕೋಟ್ಯಾನ್ ಬಳಗ (ಶ್ರೀ ನಿತ್ಯಾನಂದ ಭಜನಾ ಮಂಡಳಿ ಕಲ್ಯಾಣ್), ಇವರಿಂದ ಭಜನಾ ಕಾರ್ಯಕ್ರಮ.

23/10/2023 ಸೋಮವಾರ ಸಂಜೆ -ಶ್ರೀ ವಾಗೀಶ್ವರಿ ದುರ್ಗಾ ಕಲ್ಪೋಕ್ತ ಪೂಜಾ,, ಸಾಮೂಹಿಕ ರಂಗ ಪೂಜೆ
 6.30 p.m. to 8.30 p.m. - ಶ್ರೀ ಸಾಯಿ ನಿತ್ಯಾನಂದ ಭಜನಾ ಮಂಡಳಿ ಭಿವಂಡಿ, ಇವರಿಂದ ಭಜನಾ ಕಾರ್ಯಕ್ರಮ. 

24/10/2023 ಮಂಗಳವಾರ ಬೆಳಿಗ್ಗೆ 10 ರಿಂದ ಬತ್ತ ದ ತೆನೆ ಕಟ್ಟುವಿಕೆಯ ಪೂಜೆ, ಹಾಗೂ ವಿದ್ಯಾರಂಭ ಪೂಜೆ (ವಿದ್ಯಾರಂಭ ಪೂಜೆ ಕೊಡಲು ಇಚೆ ಇರುವ ಭಕ್ತಾದಿಗಳು 5 ದಿನ ಮುಂಚಿತವಾಗಿ ತಂತ್ರಿ ಅವರಲ್ಲಿ ತಿಳಿಸಬೇಕಾಗಿ ವಿನಂತಿ), ಸಂಜೆ 4 ರಿಂದ ವಿಶೇಷ ದಾಂಡಿಯಾ ಗರ್ಭ ನೃತ್ಯ, ಬಹುಮಾನ ವಿತರಣೆ,
(ಬಹುಮಾನದ ಪ್ರಾಯೋಜಕರು ಶ್ರೀ ರಾಜೇಶ್ ಜೆ ಶೆಟ್ಟಿ, ಉಪಾಧ್ಯಕ್ಷರು .ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನ)

ಈ ಎಲ್ಲಾ ದೇವತಾ ಕಾರ್ಯಗಳಲ್ಲಿ ತಾವೆಲ್ಲರೂ ಬಂಧು ಮಿತ್ರರೊಡನೆ ಆಗಮಿಸಿ ಶ್ರೀ ಮುಡಿ - ಗಂಧ ಪ್ರಸಾದ ವನ್ನು ಸ್ವೀಕರಿಸಿ ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ಮಂದಿರದ ಪರವಾಗಿ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

No comments

Powered by Blogger.