ನೈನ್ ಹ್ಯಾಂಡ್ಸ್ ಫೌಂಡೇಶನ್ ನ 6 ನೇ ವಾರ್ಷಿಕ ಮಹಾಸಭೆ.
ಸಂಸ್ಥೆಯ ಸದಸ್ಯರಾಗಿ ಸಹಕಾರ ನೀಡಿ - ದಯಾನಂದ ಬಂಗೇರ.
ಆರ್ಥಿಕವಾಗಿ ಹಿಂದುಳಿದ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡುವ ಒಂದು ಮಹತ್ತರ ಉದ್ದೇಶವಿಟ್ಟುಕೊಂಡು 2015ರಲ್ಲಿ ಸ್ಥಾಪನೆಯಾಗಿ ಕಾರ್ಯವೆಸಗುತ್ತಿರುವ ಸಂಸ್ಥೆ 9 ಹ್ಯಾಂಡ್ಸ್ ಫೌಂಡೇಶನ್ , ಇದರ 6ನೇ ವಾರ್ಷಿಕ ಮಹಾಸಭೆ ಆಕ್ಟೊಬರ್ 8 ರಂದು ಮಲಾಡ್ ಪಶ್ಚಿಮ ,ಮಡ್ ಐಲ್ಯಾಂಡ್ ನ ಸಮರ ರೆಸಾರ್ಟ್ ನಲ್ಲಿ ಜರಗಿತು .
ಅಧ್ಯಕ್ಷರಾದ ದಯಾನಂದ ಬಂಗೇರ ಸದಸ್ಯರನ್ನು ಸ್ವಾಗತಿಸಿದರು.
ಕಾರ್ಯದರ್ಶಿ ದೇವರಾಜ್ ಅಮೀನ್ ಗತ ವರ್ಷದ ವರದಿ ವಾಚಿಸಿದರು.
ವಾರ್ಷಿಕ ಲೆಕ್ಕಪತ್ರ ಸಭೆಯಲ್ಲಿ ಮಂಜೂರು ಮಾಡಲಾಯ್ತು.
ಸಂಸ್ಥೆಗೆ ಹೊಸದಾಗಿ ಸೇರ್ಪಡೆಯಾದ ಸದಸ್ಯರನ್ನು ಸಭೆಗೆ ಪರಿಚಯ ಮಾಡಿಸಲಾಯಿತು.
ಉಪಾಧ್ಯಕ್ಷರೂ, ಸ್ಕಾಲರ್ಶಿಪ್ (scholarship) ಕಮಿಟಿಯ ಕಾರ್ಯದ್ಯಕ್ಷರಾದ ತುಕರಾಮ ಸಾಲ್ಯಾನ್ ಕಳೆದ ವರ್ಷದ ಕಾರ್ಯ ಚಟುವಟಿಕೆಯನ್ನು ಸಭೆಯ ಮುಂದಿಟ್ಟರು.
ಬಳಿಕ ಸದಸ್ಯರು ಮಾತನಾಡಿ ಸಲಹೆ-ಸೂಚನೆ ನೀಡಿದರು.
ಅಧ್ಯಕ್ಷೀಯ ಭಾಷಣ ಮಾಡುತ್ತಾ "2015 ರಲ್ಲಿ 9 ಜನರಿಂದ ಆರಂಭವಾದ ನಮ್ಮ ಸಂಸ್ಥೆಯಲ್ಲಿ ಈಗ 150 ಸದಸ್ಯರು ನಮ್ಮೊಂದಿಗೆ ಇರುವುದು ಸಂತಸವಾಗಿದೆ.
ನಮ್ಮ ಫೌಂಡೇಶನ್ ನ ಮುಖ್ಯ ಉದ್ದೇಶ ಎಂದರೆ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಹಾಯ ಮಾಡುವುದು.ಇಷ್ಟರ ತನಕ 50 ಮಕ್ಕಳಿಗೆ ಸಹಾಯ ಮಾಡಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ವಿದ್ಯಾರ್ಥಿಗಳಿಗೆ ನೆರವು ನೀಡುವ ಯೋಜನೆ ಇದೆ. ಮುಖೇಶ್ ಬಂಗೇರ ಹಾಗೂ ಸುಧಾಕರ ಕರ್ಕೇರ ಹೆಚ್ಚಿನ ಮುತುವರ್ಜಿಯಿಂದ ಕೆಲಸ ಮಾಡಿದ್ದಾರೆ.
ನಮ್ಮ ಸಂಸ್ಥೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತನ ನೋಂದಾಯಿಸುವ ಮೂಲಕ ಸಹಕಾರ ನೀಡಿ" ಎಂದು ನುಡಿದರು.
ಅಧ್ಯಕ್ಷ ದಯಾನಂದ ಬಂಗೇರ, ಉಪಾಧ್ಯಕ್ಷ ತುಕರಾಮ ಸಾಲ್ಯಾನ್, ಹಿರಿಯ ಟ್ರಸ್ಟಿ ಸುಧಾಕರ ಕರ್ಕೇರ, ಕಾರ್ಯದರ್ಶಿ ದೇವರಾಜ್ ಅಮೀನ್, ಜತೆ ಕೋಶಾಧಿಕಾರಿ ಸಂತೋಷ ಕರ್ಕೇರ, ಟ್ರಸ್ಟಿಗಳಾದ ಪರೇಶ್ ಅಮೀನ್, ಮುಖೇಶ್ ಬಂಗೇರ, ಕುಮಾರ್ ಮೆಂಡನ್, ಹೇಮರಾಜ್ ಕಾಂಚನ್, ತಾರಾನಾಥ ಮೆಂಡನ್ ಉಪಸ್ಥಿತರಿದ್ದರು.
ದೇವರಾಜ್ ಅಮೀನ್ ವಂದನಾರ್ಪಣೆ ಗೈಯುವ ಮೂಲಕ ಮಹಾಸಭೆ ಮುಕ್ತಾಯಗೊಂಡಿತು.
ಸಂಸ್ಥೆಯು 1 ರಿಂದ 10ನೇ ತರಗತಿಯ ಬಡ ಮಕ್ಕಳ ಶಿಕ್ಷಣದ ವೆಚ್ಚವನ್ನು ನೀಡುತ್ತಾ ಮಕ್ಕಳು ವಿದ್ಯಾರ್ಜನೆ
ಯಿಂದ ವಂಚಿಸಿರಾಗದಂತ್ತೆ ಕಾಳಜಿ ವಹಿಸುತ್ತಿದೆ.
8 ವರ್ಷಗಳಲ್ಲಿ ಸುಮಾರು 11 ಲಕ್ಷ ರೂಪಾಯಿಯನ್ನು ಇಷ್ಟರತನಕ ಸಂಸ್ಥೆ ವಿದ್ಯಾರ್ಥಿಗಳಿಗೆ ನೀಡಿದೆ.
ಸದಸ್ಯರು ಪ್ರತಿ ತಿಂಗಳು ನೀಡುವ 500
ರೂಪಾಯಿ ದೇಣಿಗೆಯನ್ನು ಒಟ್ಟು ಸೇರಿಸಿ ಮಕ್ಕಳಿಗೆ ನೀಡಿ ,ಸಂಸ್ಥೆ ಅವರ ಬಾಳಿಗೆ ಬೆಳಕಾಗಿದೆ.9 ಜನರಿಂದ ಆರಂಭವಾದ
ಸಂಸ್ಥೆಯಲ್ಲಿ ಇದೀಗ 150 ಸದಸ್ಯರು , ಸೇರ್ಪಡೇಯಾಗಿದ್ದಾರೆ. ಮಾನವೀಯ ನೆಲೆಯಲ್ಲಿ 9 ಹ್ಯಾಂಡ್ಸ್ ಮಾಡುವ ಸಾಮಾಜಿಕ ಕಳಕಳಿ ಯ ಈ ಸೇವೆಯಲ್ಲಿ ಮತಷ್ಟು ಕೈಗಳು ಜೊತೆಗೂಡಿ
ಸಂಸ್ಥೆಯನ್ನು ಬಲ ಪಡಿಸುವಂತ್ತಾಗಲಿ.
Post a Comment