ಕಾರ್ಕಳ ಪರಶುರಾಮ ಥೀಮ್ ಪಾರ್ಕ್ ನಲ್ಲಿ ಏನು ನಡೆಯುತ್ತಿದೆ
ಕಾರ್ಕಳದ ಪರಶುರಾಮ ಥೀಮ್ ಪಾರ್ಕ್ ದೋಖಾ ಕಹಾನಿಗೆ ಸಂಬಂಧಪಟ್ಟ ಹಾಗೆ ಹೋರಾಟಗಳು ಪ್ರತಿಭಟನೆಗಳು ನಡೆಯುತ್ತಿದೆ. ಇದೀಗ ಪರಶುರಾಮ ಥೀಮ್ ಪಾರ್ಕ್ ದೋಖಾ ಕಹಾನಿಗೆ ಮೆಗಾ ಟ್ವಿಸ್ಟ್ ಸಿಕ್ಕಿದ್ದು, ಯಾರಿಗೂ ತಿಳಿಯದಂತೆ ಅಸಲಿ ಮೂರ್ತಿ ಪ್ರತಿಷ್ಠಾಪಿಸಲು ಹುನ್ನಾರ ನಡೆದಿದೆ ಎನ್ನುವ ಆರೋಪ ಕೇಳಿ ಬಂದಿದೆ.
ರಹಸ್ಯವಾಗಿ ಪರಶುರಾಮನ ನಕಲಿ ಮೂರ್ತಿ ತೆರವುಗೊಳಿಸಲು ಸ್ಕೆಚ್ ನಡೆದಿದ್ದು ಯಾರಿಗೂ ತಿಳಿಯದಂತೆ ಅಸಲಿ ಮೂರ್ತಿಯ ಭಾಗಗಳು ಬೈಲೂರು ಉಮ್ಮಿಕಲ್ ಬೆಟ್ಟ ತಲುಪಿತೇ ಎಂದು ಹೇಳಲಾಗುತ್ತಿದೆ.
ಕಂಟೈನರ್ ನಲ್ಲಿ ಪರಶುರಾಮನ ಕಂಚಿನ ಪ್ರತಿಮೆ ಬರುತ್ತಿದ್ದು ಅಸಲಿ ಪ್ರತಿಮೆ ಸ್ಥಾಪನೆಗೆ ಪೊಲೀಸ್ ಪಹರೆಯಲ್ಲಿ ಕಾಮಗಾರಿ ನಡೆಯುತ್ತಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಥೀಮ್ ಪಾರ್ಕ್ ಗೆ ನೋ ಎಂಟ್ರಿ ಗೇಟ್ ಹಾಕಿದ್ದು ಸುತ್ತ ಮುತ್ತ ಬಿಗಿ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿದೆ.
ಪರಶುರಾಮನ ಮೂರ್ತಿಯನ್ನು ನಿರ್ಮಿತಿ ಕೇಂದ್ರವು ಟರ್ಪಲ್ ನಿಂದ ಮುಚ್ಚಿದ್ದು, ಇದೀಗ ಭಯದಿಂದ ಕಾಮಗಾರಿ ನಡೆಯುತ್ತಿದೆ. ಸ್ಥಳಕ್ಕೆ ಹೋರಾಟಗಾರರು ದೌಡಾಯಿಸಿದ್ದು, ರಹಸ್ಯ ಪ್ರತಿಷ್ಠಾಪನೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
Post a Comment