ಡೊಂಬಿವಲಿಯಲ್ಲಿ ಯಶಸ್ವಿ ಭಜನಾ ಮಂಡಳಿ ಉದ್ಘಾಟನೆ.
ನಗರದ ಉತ್ತಮ ಭಜನಾ ತಂಡ ವಾಗುವುದರಲ್ಲಿ ಸಂದೇಹವಿಲ್ಲ - ಹರೀಶ್ ಶೆಟ್ಟಿ
ಚಿತ್ರ ವರದಿ : ರವಿ. ಬಿ. ಅಂಚನ್ ಪಡುಬಿದ್ರಿ
ಡೊಂಬಿವಲಿ ಅ.16: ಭೂಮಿ ಪುತ್ರರಾದ ಮರಾಠಿಗರೊಂದಿಗೆ ತುಳು- ಕನ್ನಡಿಗರು ಸೌಹಾರ್ದತೆಯಿಂದ ಬಾಳನ್ನು ಮಾಡುತ್ತಿರುವ ಡೊಂಬಿವಲಿ ನಗರವಾಸಿಗಳು ತುಳು- ಕನ್ನಡಿಗರಿಗೆ ಅತೀ ಹೆಚ್ಚು ಪ್ರೀತಿ ನೀಡಿದ್ದಾರೆ. ಡೊಂಬಿವಲಿಯಲ್ಲಿ ಸುಮಾರು ಮೂವತ್ತಕ್ಕೂ ಹೆಚ್ಚಿನ ಕನ್ನಡಿಗರ ಸಂಘ- ಸಂಸ್ಥೆಗಳಿದ್ದು ಈ ಸಂಸ್ಥೆಗಳ ಸಾಲಿನಲ್ಲಿ ಯಶಸ್ವಿ ಭಜನಾ ಮಂಡಳಿಯು ಇಂದು ಸೇರ್ಪಡೆ ಯಾಗಿದೆ, ಯಶಸ್ವಿ ಭಜನಾ ತಂಡದಲ್ಲಿ ಹಿರಿಯ ಭಜನಾ ಗಾಯಕರಿದ್ದು ಉತ್ತಮ ಭಜನೆ ಯನ್ನು ಹಾಡುತ್ತಿದ್ದಾರೆ ಹಿರಿಯರು ಸಣ್ಣ ಮಕ್ಕಳಿಗೆ, ಪುಟಾಣಿಗಳಿಗೆ ಭಜನೆಯನ್ನು ಕಲಿಸಿ ಅವರನ್ನು ಭಜನಾ ಗಾಯಕರನ್ನಾಗಿಸಿದಾಗ ಸಂಸ್ಥೆ ಮತ್ತಷ್ಟು ಎತ್ತರಕ್ಕೆ ಬೆಳೆದು ಯಶಸ್ವಿ ಭಜನಾ ಮಂಡಳಿ ಡೊಂಬಿವಲಿ ನಗರದ ಉತ್ತಮ ಭಜನಾ ತಂಡ ವಾಗುವುದರಲ್ಲಿ ಸಂದೇಹವಿಲ್ಲ ಭಜನೆ ಹಾಡಿದಾಗ, ಭಜನೆಯನ್ನು ಕೇಳಿದಾಗ ಮನಸ್ಸಿಗೆ ಸಿಗುವಷ್ಟು ಸಂತೋಷ ಬೇರೆ ಯಾವುದೇ ಕೆಲಸ ಮಾಡಿದಾಗ ಸಿಗುವುದಿಲ್ಲ ಭಜನೆ ಇದ್ದಲ್ಲಿ ವಿಭಜನೆಯಿಲ್ಲ ಭಜನೆ ಕೇಳುತ್ತಾ ಇದ್ದರೆ ಶ್ರವಣ ಶಕ್ತಿಯಿಂದ ಅರೋಗ್ಯ ವೃದ್ದಿಸುತ್ತದೆ. ಎಂದು ಜಗದಂಬಾ ಮಂದಿರದ ಗೌರವ ಅಧ್ಯಕ್ಷ ಹರೀಶ್ ಶೆಟ್ಟಿ ನುಡಿದರು.
ಅವರು ಅಕ್ಟೋಬರ್ 15 ರಂದು ಡೊಂಬಿವಲಿ ಪಶ್ಚಿಮದ ಗಿರಿಜಾಮಾತ ಮಂದಿರದ ಸಮೀಪದಲ್ಲಿರುವ ರಘುನಾಥ್ ಸೊಸೈಟಿ ಶಾಸ್ರಿ ನಗರ ಇಲ್ಕಿ ಪ್ರಮೋದ್ ಪೂಜಾರಿಯವರ ಮನೆಯಲ್ಲಿ ದಸರಾ ಪೂಜೆಯ ಸಂದರ್ಭದಲ್ಲಿ ನೂತನ ಯಶಸ್ವಿ ಭಜನಾ ಮಂಡಳಿಯನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ಸುರೇಶ್ ಶೆಟ್ಟಿ ಶೃಂಗೇರಿ, ಮಾಧವ ಪೂಜಾರಿ, ಗೋಪಾಲ ಪೂಜಾರಿ, ಅಜಕಾರು ಜಯ ಶೆಟ್ಟಿ, ರತ್ನಾಕರ್ ಸುವರ್ಣ, ರುಕ್ಮಾಯ ಸುವರ್ಣ, ಪ್ರೇಮ ಎನ್. ಬೆಳಂಕೆ, ರಾಜು ಮೋಗವೀರ, ಸಂಜೀವ ಶೆಟ್ಟಿ, ಜಗದೀಶ್ ನಿಟ್ಟೆ, ಗಂಗಾಧರ ಕಾಂಚನ್, ಶರತ್ ಮೆಂಡನ್, ಈಶ್ವರ ಕೋಟ್ಯಾನ್, ಉದಯ ಶೆಟ್ಟಿ, ನವೀನ್ ಸುವರ್ಣ, ನಾರಾಯಣ ಪೂಜಾರಿ, ಭಾರತಿ ದೇವಾಡಿಗ, ವಸಂತಿ ಪೂಜಾರಿ, ಜಯಂತಿ ಅಮೀನ್, ಕವಿತಾ ಕರ್ಕೇರ, ನಿವೇದಿತ ಎಮ್, ಹರೀಣಾಕ್ಷ ಶೆಟ್ಟಿ ಶೀಲಾ ಪೂಜಾರಿ, ರಜನಿ ಶೆಟ್ಟಿ, ವಿಜಯ ಎಮ್. ಪೂಜಾರಿ, ಶಶಿ ಜಿ. ಶೆಟ್ಟಿ, ನಂದಿನಿ ಎನ್. ಸುವರ್ಣ, ಮೊದಲಾದವರು ಉಪಸ್ಥಿತರಿದ್ದರು.
ವಸಂತ ಸುವರ್ಣ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
Post a Comment