ವಿದ್ಯಾದಾಯಿನಿ ಸಭಾದ 104ನೇ ಸಂಸ್ಥಾಪಕರ ದಿನಾಚರಣೆ.
ವಿದ್ಯಾದಾಯಿನಿ ಸಭಾದ 104ನೇ ಸಂಸ್ಥಾಪಕರ ದಿನಾಚರಣೆ.
ಹಿರಿಯರ ಮಾರ್ಗದರ್ಶನದೊಂದಿಗೆ ಸಂಸ್ಥೆಯ ಉನ್ನತಿಗೆ ಶ್ರಮಿಸೋಣ - ಪುರುಷೋತ್ತಮ ಎಸ್. ಕೋಟ್ಯಾನ್.
ಚಿತ್ರ, ವರದಿ - ಉಮೇಶ್ ಕೆ.ಅಂಚನ್
ಮುಂಬಯಿ, ಅ.13. ಹೊಟ್ಟೆ ಪಾಡಿಗಾಗಿ ಉದ್ಯೋಗ ಅರಸಿ ಬಂದ ನಮ್ಮ ಹಿರಿಯರು ತಮ್ಮ ಮುಂದಿನ ಪೀಳಿಗೆಯ ಸುಸಂಸ್ಕೃತ ಜೀವನ ನಡೆಸುವ ಸಲುವಾಗಿ ಕೆಲವೊಂದು ಧ್ಯೇಯಗಳೊಂದಿಗೆ ಈ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ. ಇದರ ಮುಖೇನ ಹಗಲು ಕೆಲಸ ಮಾಡಿ ವಿದ್ಯೆಯಿಂದ ವಂಚಿತರಾದ ಮಕ್ಕಳಿಗೆ ಕೆನರಾ ವಿದ್ಯಾದಾಯಿನಿ ಉಚಿತ ರಾತ್ರಿ ಶಾಲೆಯನ್ನು ಸ್ಥಾಪಿಸಿ ನೂರಾರು ಮಕ್ಕಳ ಪಾಲಿಕೆ ದಾರಿದೀಪವಾಗಿದ್ದಾರೆ. ಹಿರಿಯರು ಮಾಡಿರುವ ತ್ಯಾಗವನ್ನು ಸ್ಮರಿಸಿ ಅವರ ಆದರ್ಶ, ಮಾರ್ಗದರ್ಶನದೊಂದಿಗೆ ಮುನ್ನಡೆಯುವುದು ನಮ್ಮೆಲ್ಲರ ಕರ್ತವ್ಯ. ನಾವಿಂದು 103 ವರ್ಷ ದಾಟಿದ ಸಂಸ್ಥೆಯ ಶತಮಾನೋತ್ಸವ ಆಚರಣೆಯ ತಯಾರಿಯಲ್ಲಿದ್ದೇವೆ. ಕಾರ್ಯಕ್ರಮವು ಅ.29ರಂದು ಸಾಂತಾಕ್ರೂಸ್ ಬಿಲ್ಲವರ ಭವನದ ಸಭಾಂಗಣದಲ್ಲಿ ಸಮಾಜ ಸೇವಕ ಹಾಗೂ ಸಭಾದ ಹಿತಚಿಂತಕ ದಿ.ಸೂರು ಸಿ.ಕರ್ಕೇರ ವೇದಿಕೆಯಲ್ಲಿ ದಿನಪೂರ್ತಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜ್ರಂಭಣೆಯಿಂದ ಜರಗಲಿದೆ. ಕಾರ್ಯಕ್ರಮಕ್ಕೆ ಸರ್ವರ ಪ್ರೋತ್ಸಾಹ ಅಗತ್ಯ ಎಂದು ಸಭಾದ ಅದ್ಯಕ್ಷ ಪುರುಷೋತ್ತಮ ಎಸ್. ಕೋಟ್ಯಾನ್ ಹೇಳಿದರು. ಅವರು ಅ.10ರಂದು ವಿದ್ಯಾದಾಯಿನಿ ಸಭಾದ ಫೋರ್ಟ್ ಕಚೇರಿಯ ವಠಾರದಲ್ಲಿ ನಡೆದ ಸಭಾದ 104ನೇ ಸಂಸ್ಥಾಪನಾ ದಿನಾಚರಣೆಯ ಪ್ರಯುಕ್ತ ನಾರಾಯಣ ಗುರುಗಳ ಭಾವಚಿತ್ರಕ್ಕೆ ಪೂಜೆಸಲ್ಲಿಸಿ ಸಭಾದ ಸ್ಥಾಪಕರಲ್ಲೋರ್ವರಾದ ಎಸ್. ಮೈಂದರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ವಿಶ್ವಕರ್ಮ ಅಸೋಸಿಯೇಶನಿನ ಮಾಜಿ ಅದ್ಯಕ್ಷ ಜಿ.ಟಿ.ಆಚಾರ್ಯ, "ಬದಲಾಗದವರು" ಕನ್ನಡ ಚಲನಚಿತ್ರದ ನಿರ್ಮಾಪಕ ಡಾ.ಸತೀಶ್ ಬಂಗೇರ ಹಾಗೂ ಸಭಾದ ಸೇವಾದಳದ ಜಿಓಸಿ ಸುರೇಶ್ ಪೂಜಾರಿ, ಗೌರವಾಧ್ಯಕ್ಷ ಜೆ.ಎಮ್. ಕೋಟ್ಯಾನ್, ಉಪಾಧ್ಯಕ್ಷ ಆರ್. ಕೆ.ಕೋಟ್ಯಾನ್, ಜತೆ ಕಾರ್ಯದರ್ಶಿ ಹರೀಶ್ ಶಾಂತಿ, ಶಾಲಾ ಮೇಲ್ವಿಚಾರಕ ಡಾ.ಪ್ರಕಾಶ್ ಮೂಡಬಿದ್ರೆ, ಮಹಿಳಾ ವಿಭಾಗದ ಕಾರ್ಯಾದ್ಯಕ್ಷೆ ವಸಂತಿ ಆರ್. ಕೋಟ್ಯಾನ್, ಮಾಜಿ ಅದ್ಯಕ್ಷ ಜಿ.ಸಿ.ಸಾಲ್ಯಾನ್ ,ಕಾರ್ಯಕಾರಿ ಸಮಿತಿಯ ಸದಸ್ಯರಾದ ಜೆ.ಜೆ.ಕೋಟ್ಯಾನ್, ಗೋಪಾಲ್ ಪೂಜಾರಿ ಹಾಗೂ ಸದಸ್ಯರು ಉಪಸ್ಥಿತರಿದ್ದು ಸಂಧರ್ಬೋಚಿತವಾಗಿ ಮಾತನಾಡಿದರು. ಸಭಾದ ಗೌರವ ಕಾರ್ಯದರ್ಶಿ ಚಿತ್ರಾಪು ಕೆ.ಎಮ್. ಕೋಟ್ಯಾನ್ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು.
Post a Comment