ಹಮಾಸ್ ಉಗ್ರರಿಗೆ ಜಯ ಸಿಗಲಿ ಎಂದ ಮಂಗಳೂರಿನ ಝಾಕಿರ್.

ಮಂಗಳೂರು ಅ.14: ಇಸ್ರೇಲ್​ ಮತ್ತು ಪ್ಯಾಲೆಸ್ತೀನ್​ನ ಹಮಾಸ್  ​ಉಗ್ರರ ನಡುವೆ ಯುದ್ಧ ಆರಂಭವಾಗಿ ಏಳು ದಿನಗಳು ಕಳೆದಿವೆ. ಈ ಯುದ್ಧದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಇಸ್ರೇಲ್​ನಲ್ಲಿ‌ ನರಮೇಧ ನಡೆಸಿದ ಹಮಾಸ್ ಉಗ್ರರನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಮಂಗಳೂರಿನ  ವ್ಯಕ್ತಿಯೊಬ್ಬ ವಿಡಿಯೋ ಹರಿಬಿಟ್ಟಿದ್ದಾನೆ. ಮಂಗಳೂರಿನ ಬಂದರು ಪ್ರದೇಶದಲ್ಲಿ ತಾಲಿಬನ್‌ ಎಂಬ ಹೆಸರಿನಲ್ಲಿ ಗುರುತಿಸಿಕೊಳ್ಳುವ ಝಾಕಿರ್ “ಹಮಾಸ್ ಉಗ್ರರರನ್ನು ದೇಶ ಪ್ರೇಮಿಗಳು” ಎಂದು ಕರೆದಿದ್ದಾನೆ.

ಪ್ಯಾಲೆಸ್ತೀನ್​, ಗಾಝಾ ಹಾಗೂ ಹಮಾಸ್ ದೇಶಪ್ರೇಮಿ ಯೋಧರಿಗೆ ಜಯ ಸಿಗಲಿ. ಹಮಾಸಿಗರು​​ ದೇಶ ಪ್ರೇಮಿ ಯೋಧರು. ವಿಶ್ವ ಕಬರಸ್ಥಾನ್ ಸಂಘದ ಸದಸ್ಯರು ಪ್ರತ್ಯೇಕ ಪ್ರಾರ್ಥನೆ‌ ಸಲ್ಲಿಸಬೇಕು ಎಂದು ಝಾಕಿರ್ ಹೇಳಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಝಾಕಿರ್ ವಿಡಿಯೋ ವೈರಲ್ ಆಗಿದ್ದು, ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಹಿಂದೂ‌ ಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದು, ಝಾಕಿರ್​ನನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದ್ದಾರೆ.

 ಗಾಜಾಪಟ್ಟಿ ಮೇಲೆ ಇಸ್ರೇಲ್ ಸೇನೆಯಿಂದ ವೈಮಾನಿಕ ದಾಳಿ
ಗಾಜಾಪಟ್ಟಿ ಮೇಲೆ ಇಸ್ರೇಲ್ ಸೇನೆಯಿಂದ ವೈಮಾನಿಕ ದಾಳಿ ಮಾಡಿದ್ದು, 70 ಜನ ಮೃತಪಟ್ಟಿದ್ದಾರೆ. ಇಸ್ರೇಲ್​ 24 ಗಂಟೆಯಲ್ಲಿ ಗಾಜಾಪಟ್ಟಿ ತೊರೆಯಲು ಜನರಿಗೆ ಗಡುವು ನೀಡಿತ್ತು. ಗಡುವು ಮುಕ್ತಾಯ ಹಿನ್ನೆಲೆ ಗಾಜಾಪಟ್ಟಿ ಮೇಲೆ ಇಸ್ರೇಲ್ ದಾಳಿ ನಡೆಸಿದೆ. ಇದರಿಂದ ಗಾಜಾಪಟ್ಟಿ ತೊರೆಯುತ್ತಿದ್ದ 70 ಜನ ಸಾವೀಗಿಡಾಗಿದ್ದಾರೆ.

No comments

Powered by Blogger.