ಶ್ರೀ ಬಾಲಾಜಿ ಕೋ-ಅಪರೇಟೀವ್ ಕ್ರೆಡಿಟ್ ಸೋಸಾಯಿಟಿಯ 34ನೇ ವಾರ್ಷಿಕ ಮಹಾಸಭೆ.
ಸದಸ್ಯರಿಂದ ಸದಸ್ಯರಿಗಾಗಿ ಇರುವುದೇ ಸಹಕಾರಿ ಸಂಸ್ಥೆಗಳು - ಜಿ ಟಿ ಆಚಾರ್ಯ,
ಮುಂಬಯಿ ಅ 13. ಒಬ್ಬರಿಗೊಬ್ಬರು ಸಹಾಯ ಮಾಡುವುದೇ ಸಹಕಾರಿ ಸಂಸ್ಥೆಗಳ ಉದ್ದೇಶ. ಇನ್ನೊಬ್ಬರ ಹಣವನ್ನು ನಾವು ಉಪಯೋಗಿಸುತ್ತಿದ್ದೇವೆ. ಸಾಲದ ಹಣವನ್ನು ಸಮಯಕ್ಕೆ ಸರಿಯಾಗಿ ಮರುಪಾತಿಸಿದರೆ ಯಾವುದೇ ಸಂಸ್ಥೆ ಆರೋಗ್ಯವಾಗಿ ಇರುವುದರ ಜೊತೆಗೆ ಹೆಚ್ಚಿನ ಲಾಭಾಂಶವನ್ನು ಸದಸ್ಯರಿಗೆ ಕೊಡುವುದಕ್ಕೆ ಸಾಧ್ಯವಾಗುತ್ತದೆ ಎಂದು ಜಿ ಟಿ ಆಚಾರ್ಯ ಹೇಳಿದರು.
ಅವರು ಅ8 ರಂದು ದಹಿಸರ್ ಪೂರ್ವದ ಹೊಟೇಲ್ ಗೋಕುಲಾನಂದದಲ್ಲಿ ಜರುಗಿದ ಶ್ರೀ ಬಾಲಾಜಿ ಕೋ-ಅಪರೇಟೀವ್ ಕ್ರೆಡಿಟ್ ಸೋಸಾಯಿಟಿಯ 34ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷ ಸ್ಥಾನದಿಂದ ಮಾತನಾಡುತ್ತಾ ಸಂಸ್ಥೆಯು ಕಳೆದ 34 ವರ್ಷಗಳಿಂದ ನಡೆದು ಬಂದ ಮತ್ತು ಪ್ರಗತಿಯನ್ನು ಪಡೆದ ರೀತಿಯನ್ನು ವಿವರಿಸಿದರು. ಹೊಸ ಕಾರ್ಯಕಾರಿ ಸಮಿತಿಯ ರಚನೆಗೆ ಸಂಬಂಧಿಸಿದ ಇಲಾಖೆಗೆ ಈಗಾಗಲೇ ಪತ್ರ ಬರೆದಿದ್ದು ಆದಷ್ಟು ಬೇಗ ಅನುಮತಿ ಸಿಗಬಹುದು ಎಂದರು.
ಸೋಸಾಯಿಟಿಯ ನಿರ್ದೇಶಕರು ಹಿರಿಯ ಸದಸ್ಯರಾದ ಪಿ. ಕೃಷ್ಣ , ಶಂಕರ ಆರ್ ಕುಂದರ್ , ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್ ಅಧ್ಯಕ್ಷ ಸದಾನಂದ ಎನ್ ಆಚಾರ್ಯರು, ಮಾಜಿ ನಿರ್ದೇಶಕರಾದ ಭುಜಂಗ ಆರ್ ಶೆಟ್ಟಿ ಹಾಗೂ ನಿರ್ದೇಶಕರ ಉಪಸ್ಥಿತಿಯಲ್ಲಿ ದೀಪ ಪ್ರಜ್ವಲಿಸುವುದರ ಮೂಲಕ ಮಹಾಸಭೆಯನ್ನು ಪ್ರಾರಂಭಿಸಲಾಯಿತು.
ಕಾರ್ಯದರ್ಶಿ ಲತಾ ಆರ್ ಆಚಾರ್ಯ ಸದಸ್ಯರನ್ನು ಸ್ವಾಗತಿಸಿದರು. ಕೋಶಾಧಿಕಾರಿ ಮಾಧವ ಎಸ್ ಆಚಾರ್ಯರು ಲೆಕ್ಕ ಪತ್ರ ಹಾಗೂ ವಾರ್ಷಿಕ ವರದಿಯನ್ನು ಸಭೆಯ ಮುಂದಿತ್ತರು, ಸಭೆಯು ಅದನ್ನು ಮಂಜೂರು ಮಾಡಿತು. ಸುಧೀರ್ ಜೆ ಆಚಾರ್ಯ ಮತ್ತು ಹರೀಶ ಜಿ ಆಚಾರ್ಯ ಅವರನ್ನು ಆಂತರಿಕ ಲೆಕ್ಕ ಪರಿಶೋಧಕರನ್ನಾಗಿ ನೇಮಿಸಲಾಯಿತು. ಮೇಸರ್ಸ ಸಂಜಯ ಚವಾನ್ ಮತ್ತು ಕಂಪೆನಿಯವರನ್ನು ಬಾಹ್ಯ ಲೆಕ್ಕ ಪರಿಶೋಧಕರನ್ನಾಗಿ ನೇಮಿಸಲಾಯಿತು.
ವರದಿ ವರ್ಷ 2022-23ನೇ ಸಾಲಿಗೆ 5% ಲಾಭಾಂಶವನ್ನು ನೀಡುವುದಾಗಿ ಕಾರ್ಯಕಾರಿ ಸಮಿತಿಯು ಮಂಡಿಸಿದ ಠರಾವನ್ನು ಮಂಜೂರು ಮಾಡಲಾಯಿತು. ಸೊಸಾಯಿಟಿಯ ಚಟುವಟಿಕೆಗಳಿಗೆ ಸಹಾಯಕವಾಗುವಂತೆ ಸದಾನಂದ ಎನ್ ಆಚಾರ್ಯ ಕಲ್ಯಾಣ್ ಪುರ, ಅರುಣ್ ಪಿ ಆಚಾರ್ಯ, ಬಾಬುರಾಜ್ ಆಚಾರ್ಯ, ನ್ಯಾಯವಾದಿ ನಿತೇಶ್ ಆಚಾರ್ಯ, ಗಣೇಶ್ ಕುಮಾರ್, ಶಮಿತ ಪಿ. ಆಚಾರ್ಯ, ಶ್ವೇತಾ ಪಿ ಆಚಾರ್ಯ ಇವರನ್ನು ಸಲಹೆಗಾರರನ್ನಾಗಿ ಆಡಳಿತ ಸಮಿತಿಯಲ್ಲಿ ನೇಮಿಸಲಾಗಿದೆ ಹಾಗೂ ಅದನ್ನು ಈ ಮಹಾಸಭೆಯಲ್ಲಿ ದೃಢೀಕರಿಸಬೇಕು ಎಂದು ಅಧ್ಯಕ್ಷರು ಸಭೆಯಲ್ಲಿ ತಿಳಿಸಿದರು.
ವೇದಿಕೆಯಲ್ಲಿ ಉಪಾಧ್ಯಕ್ಷ ಕೆ ಪಿ ಚಂದ್ರಯ ಆಚಾರ್ಯ, ಕಾರ್ಯದರ್ಶಿ ಲತಾ ಆರ್ ಆಚಾರ್ಯ, ಕೋಶಾಧಿಕಾರಿ ಮಾಧವ ಎಸ್ಸ್ ಆಚಾರ್ಯ, ಸಿಎ ಪ್ರಭಾಕರ ಬಿ. ಶೆಟ್ಟಿ, ಜಯಕರ ಎ. ಕುಕ್ಯಾನ್, ರಾಜೇಶ್ ಕೆ. ಆಚಾರ್ಯ, ವಿನೋದ್ ಪಿ ಆಚಾರ್ಯ, ಶೋಭಾ ಎಮ್ ಆಚಾರ್ಯ ಉಪಸ್ಥಿತರಿದ್ದರು. ಸದಸ್ಯರುಗಳಾದ ಸದಾನಂದ ಎನ್ ಆಚಾರ್ಯ ಕಲ್ಯಾಣಪುರ, ರವೀಶ್ ಜಿ ಆಚಾರ್ಯ, ಮಹಾಬಲ ಎ. ಆಚಾರ್ಯ, ಪಿ. ಕೃಷ್ಣ, ಚಿತ್ರಪು ಕೆ ಎಂ ಕೋಟ್ಯಾನ್. ತುಕಾರಾಮ ಮಡಿವಾಳ, ಹರೀಶ್ ಜಿ ಆಚಾರ್ಯ, ಪ್ರಭಾಕರ ಎಸ್ ಆಚಾರ್ಯ ಶಂಕರ್ ಕುಂದರ್, ಶ್ರೀನಿವಾಸ ಪೂಜಾರಿ. ಮುಂತಾದವರು ತಮ್ಮ ತಮ್ಮ ಸಲಹೆ ಸೂಚನೆಗಳನ್ನಿತ್ತರು.
ಕಾರ್ಯದರ್ಶಿ ಲತಾ ಆರ್ ಆಚಾರ್ಯರ ಧನ್ಯವಾದಗಳೊಂದಿಗೆ ಸಭೆ ಮುಕ್ತಾಯವಾಯಿತು.
Post a Comment