ಅಶೋಕ್ ಸುವರ್ಣ ಅವರಿಗೆ ಮೊಗವೀರ ಲೇಖಕರ ಕೃತಿಗಳ ಸಂರಕ್ಷಣೆ ಬಗ್ಗೆ ಸನ್ಮಾನ.

ಉಚ್ಚಿಲ ದಸರಾ ಉತ್ಸವ ಸಂದರ್ಭದಲ್ಲಿ ಆಯೋಜಿಸಲಾದ ಮೊಗವೀರ ಸಮಾಜದ ಲೇಖಕರ / ಸಾಹಿತಿಗಳ / ಕವಿಗಳ, ಸಂಶೋಧಕರ, ಕಥೆಗಾರರ  ಮುದ್ರಿತ  ಕೃತಿಗಳ ಪ್ರದರ್ಶನ ಮತ್ತು ಅವುಗಳ ಸಂರಕ್ಷಣೆ ಪ್ರಯುಕ್ತ  ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ವಠಾರದಲ್ಲಿ ವ್ಯವಸ್ಥೆಯನ್ನು  ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘವು  ಗೌರವ ಸಲಹೆಗಾರ, ಸಾಮಾಜಿಕ ಚಿಂತಕ, ನಾಡೋಜ ಡಾ. ಜಿ. ಶಂಕರ್  ಅವರ ಮಾರ್ಗದರ್ಶನದಲ್ಲಿ ಹಾಗೂ ಸಂಘ ದ ಅಧ್ಯಕ್ಷ ಶ್ರೀ ಜಯ ಕೋಟ್ಯಾನ್ ಅವರ ನೇತೃತ್ವ ದಲ್ಲಿ ಯೋಜನೆಯು ಕಾರ್ಯರೂಪಕ್ಕೆ   ಬಂದಿದ್ದು, ಪ್ರದರ್ಶನ ಪ್ರಾರಂಭವಾಗಿದೆ.

 ಈ ಯೋಜನೆಯ ಅಗತ್ಯತೆ ಬಗ್ಗೆ ಮಹಾಜನ ಸಂಘಕ್ಕೆ ವಿನಂತಿ ಮಾಡಿದ್ದ, ಹಾಗೂ ಕೃತಿಗಳ ಸಂಗ್ರಹ ಮಾಡಿ ಪ್ರದರ್ಶನಕ್ಕೆ ಸಹಕಾರ ಮಾಡಿದ ಮೊಗವೀರ ಪತ್ರಿಕೆ ಸಂಪಾದಕ ಅಶೋಕ್ ಸುವರ್ಣ ಅವರನ್ನು ಅಕ್ಟೋಬರ್ 16 ರಂದು ದಸರಾ ಸಂಭ್ರಮದಲ್ಲಿ ನಾಡೋಜ ಡಾ. ಜಿ. ಶಂಕರ್ , ಅಧ್ಯಕ್ಷ ಜಯ ಸಿ.ಕೋಟ್ಯಾನ್, ವಾಸುದೇವ್ ಸಾಲ್ಯಾನ್, ಗುಂಡು ಅಮೀನ್, ಆಗಮ ಶಾಸ್ತ್ರಜ್ಞ, ಪಂಜ ಭಾಸ್ಕರ್ ತಂತ್ರಿ, ಅವರ ಉಪಸ್ಥಿತಿಯಲ್ಲಿ ಸನ್ಮಾನಿಸಲಾಯಿತು.

No comments

Powered by Blogger.