ಮುಂಬಯಿ ಭಾರತದ ಶ್ರೀಮಂತ ನಗರ ,ಮುಖೇಶ್ ಅಂಬಾನಿ ಶ್ರೀಮಂತ ವ್ಯಕ್ತಿ.

ಹುರೂನ್ ಇಂಡಿಯ ಸಂಸ್ಥೆ ಭಾರತದ ಶ್ರೀಮಂತರ ಪಟ್ಟಿ ಮತ್ತು ಭಾರತದ ಶ್ರೀಮಂತ ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ . ಅತ್ಯಂತ ಹೆಚ್ಚು ಶತಕೋಟ್ಯಾಧೀಶರು ಇರುವ ನಗರಗಳ ಪೈಕಿ ಮುಂಬೈ ಮೊದಲ ಸ್ಥಾನದಲ್ಲಿದ್ದರೆ, ದೆಹಲಿ ಎರಡನೇ ಸ್ಥಾನದಲ್ಲಿದೆ.

 ಸದ್ಯ ಭಾರತದಲ್ಲಿ 259 ಶತ ಕೋಟ್ಯಾಧೀಶರಿದ್ದು, ಕಳೆದ ಒಂದು ವರ್ಷದ ಅವಧಿಯಲ್ಲಿ ಪ್ರತಿ ಮೂರು ವಾರಕ್ಕೆ 
 ಇಬ್ಬರಂತೆ ಹೊಸಬರು ಶತಕೋಟ್ಯಾಧೀಶರಾಗಿದ್ದಾರೆ . ಅತ್ಯಂತ ಹೆಚ್ಚು ಶತಕೋಟಿಯಧೀಶರು ಇರುವ ನಗರಗಳ ಪೈಕಿ ಮುಂಬೈ ಮೊದಲ ಸ್ಥಾನದಲ್ಲಿದೆ. ಭಾರತದ ಅತಿ ಶ್ರೀಮಂತ ವ್ಯಕ್ತಿ 8.08 ಲಕ್ಷ ಕೋಟಿ ರೂಪಾಯಿ ಆಸ್ತಿಯ ಮಾಲಕ ರಿಲಯನ್ಸ್ ಇಂಡಸ್ಟ್ರೀಸ್ ನ ಮುಖೇಶ್ ಅಂಬಾನಿ ಆಗಿದ್ದಾರೆ.
 ದೆಹಲಿ ಎರಡನೇ ಸ್ಥಾನದಲ್ಲಿದ್ದು, ದೆಹಲಿಯ ಅತೀ ಶ್ರೀಮಂತ ವ್ಯಕ್ತಿಗಳ ಲಿಸ್ಟ್ ನಲ್ಲಿ ಶಿವನಾಡರ್ ಮೊದಲ ಸ್ಥಾನದಲ್ಲಿದ್ದಾರೆ .
 ಇನ್ನು ನಮ್ಮ ಬೆಂಗಳೂರು ಅತ್ಯಂತ ಹೆಚ್ಚು ಶತಕೋಟ್ಯಾಧೀಶರು ಇರುವ ನಗರ ಪೈಕಿ ಮೂರನೇ ಸ್ಥಾನದಲ್ಲಿ, ಹೈದರಾಬಾದ್ ನಾಲ್ಕು ಮತ್ತು ಚೆನ್ನೈ 5ನೇ ಸ್ಥಾನದಲ್ಲಿದೆ.

No comments

Powered by Blogger.