ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿ ಡೊಂಬಿವಲಿ. ಇದರ ಶ್ರೀದೇವಿಯ ಆಗಮನ ಮೆರವಣಿಗೆ, ನವರಾತ್ರಿ ಉತ್ಸವ ಆರಂಭ...
ಚಿತ್ರ : ಸತೀಶ್ ಶೆಟ್ಟಿ.
ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿ ಡೊಂಬಿವಲಿ. ಇದರ ಶ್ರೀದೇವಿಯ ಆಗಮನ ಮೆರವಣಿಗೆಯು ಅಕ್ಟೋಬರ್ 14 ರ ಶನಿವಾರ ಸಾಯಂಕಾಲ 6:30 ಗಂಟೆಗೆ ಡೊಂಬಿವಲಿ ಪೂರ್ವದ ಬ್ರಾಹ್ಮಣ ಸಭಾ ದಿಂದ ತುಳುನಾಡಿನ ಆಚರಣೆ, ಪದ್ಧತಿ ಹಾಗೂ ಮಹಾರಾಷ್ಟ್ರ ನೆಲದ ಸಂಸ್ಕೃತಿ ಯಂತೆ
ನಾಸಿಕ್ ಡೋಲ್, ಕೇರಳದ ಚಂಡೆ, ತುಳುನಾಡಿನ ವಾದ್ಯ , ತುಳುನಾಡಿನ ಜೀಟಿಗೆ, ಸಾಲು ಸಾಲು ದೀಪಗಳು, ಮಂಡಳಿಯ ಬಾಲ ಕಲಾವಿದರಿಂದ ಕುಣಿತ ಭಜನೆ, ತಟ್ಟಿರಾಯ, ಗೊಂಬೆ ಪ್ರದರ್ಶನ,ಮಂಡಳಿಯ ಕಲಾವಿದರಿಂದ ಯಕ್ಷಗಾನ ಪ್ರಾತ್ಯಕ್ಷಿಕೆ, ಹಾಗೂ ಮಹಿಳಾ ವಿಭಾಗದವರಿಂದ ಬಣ್ಣ ಬಣ್ಣ ಕೊಡೆಗಳ ಚಿತ್ತಾರ, ಕಳಶ ಸೇವೆ ಯೊಂದಿಗೆ ಶ್ರೀದೇವಿಯ ಆಗಮನ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.
ಮೆರವಣಿಗೆಯ ರಸ್ತೆಯ ಉದ್ದಕ್ಕೆ ಡೊಂಬಿವಲಿಯ ತುಳು, ಕನ್ನಡ ಉದ್ಯಮಿಗಳು ದೇವಿಗೆ ಹಣ್ಣುಕಾಯಿ, ಪೂಜೆ ನೆರೆವೇರಿಸುವುದರೊಂದಿಗೆ, ಭಕ್ತರಿಗೆ ತಂಪು ಪಾನೀಯ ಸೇವೆ ನೀಡಿ ಸಹಕರಿಸಿದರು. ರಸ್ತೆ ಯ ಉದ್ದಕ್ಕೋ ಸಹಸ್ರಾರು ಜನ ಭಕ್ತರು ದೇವಿಯ ದರ್ಶನ ಪಡೆದು ಕೃತಾರ್ಥರಾದರು.
ಅಕ್ಟೋಬರ್ 15 ರ ರವಿವಾರ ಬೆಳಿಗ್ಗೆ 8.00 ಗಂಟೆ ಯಿಂದ ಗಣ ಹೋಮ, ಉಗ್ರಾಣ ಪೂಜೆ, ಪ್ರಾಣ ಪ್ರತಿಷ್ಠೆ ಹಾಗೂ ದೇವಿ ಪಾರಾಯಣ, ಭಜನೆ ನಡೆದು ಮಹಾಪೂಜೆ ನೆರವೇರಿತು.
20-10-2023 ನೇ ಶುಕ್ರವಾರದಂದು ಸಾಯಂಕಾಲ 3.00 ಗಂಟೆಗೆ ಹಳದಿ-ಕುಂಕುಮ ಕಾರ್ಯಕ್ರಮವು ಜರುಗಲಿದೆ.
19-10-2023 ರ ಗುರುವಾರ ಹಾಗೂ 22-10-2023 ರ ರವಿವಾರ ಸಾಯಂಕಾಲ 7.30 ಕ್ಕೆ ರಂಗ ಪೂಜೆ ನಡೆಯಲಿದೆ.
ದಿನಾ ಬೆಳಿಗ್ಗೆ ತುಲಾಭಾರ ಸೇವೆ ಹಾಗೂ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸೇವೆಯು ನಡೆಯಲಿದೆ.
16/10/2023 ನೇ ಸೋಮವಾರ ಸಾಯಂಕಾಲ 5:30 ಕ್ಕೆ ಶ್ರೀ ಪುತ್ತೂರು ಚಂದ್ರಹಾಸ ಹಾಗೂ ಬಳಗ, ಶ್ರೀ ಅಯ್ಯಪ್ಪ ಭಜನಾ ಮಂಡಳಿ ಅಜ್ಜೆಪಾಡ, ಡೊಂಬಿವಲಿ (ಪೂ),
17/10/2023 ನೇ ಮಂಗಳವಾರ ಸಾಯಂ. 6:30 ಕ್ಕೆ ಶ್ರೀ ಸುರೇಶ್ ಶೆಟ್ಟಿ, ಪನ್ವೆಲ್,
18/10/2023 ನೇ ಬುಧವಾರ ಸಾಯಂ 5:30 ಕ್ಕೆ ಮೂಡುಬೆಳ್ಳೆ ಶ್ರೀ ವಿಜಯ್ ಕುಮಾರ್ ಶೆಟ್ಟಿ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
23-10-2023 ರ ಸೋಮವಾರ ಸಾಯಂಕಾಲ 4.30 ರಿಂದ ಮಂಡಳಿಯ ಬಾಲ ಕಲಾವಿದರಿಂದ ನೃತ್ಯ ವೈಭವ, ನಂತರ ಶ್ರೀ ಮಹಾ ಗಣಪತಿ ಯಕ್ಷಗಾನ ಮಂಡಳಿ ಪುಣೆ ಹಾಗೂ ಊರಿನ ಅತಿಥಿ ಕಲಾವಿದರಿಂದ " ಶ್ರೀ ದೇವಿ ಮಹಾತ್ಮೆ" ಯಕ್ಷಗಾನ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ ಸುಪ್ರಸಿದ್ಧ ಯಕ್ಷಗಾನ ಕಲಾವಿದರು ಹಾಗೂ ಲೇಖಕರು ಆದ ಶ್ರೀ ಕೊಲ್ಯಾರು ರಾಜು ಶೆಟ್ಟಿ ಅವರನ್ನು ಇನ್ನ ಕುರ್ಕಿಲ ಬೆಟ್ಟು ಬಾಳಿಕೆ ದಿವಂಗತ ದಾಸು ಬಾಬು ಶೆಟ್ಟಿ ಅವರ ಸಂಸ್ಮರಣಾರ್ಥ ಸನ್ಮಾನಿಸಲಾಗುವುದು.
24-10-2023ನೇ ಮಂಗಳವಾರ ಸಾಯಂಕಾಲ 4.30 ಗಂಟೆಗೆ ಶ್ರೀದೇವಿಯ ವಿಸರ್ಜನಾ ಮೆರವಣಿಗೆಯು ವಿವಿಧ ವೇಷ ಭೂಷಣ ಗಳೊಂದಿಗೆ ವೈಭವ ವಾಗಿ ನಡೆಯಲಿದ್ದು,
ಮಂಡಳಿಯು 59 ವರ್ಷದ ನವರಾತ್ರಿ ಉತ್ಸವವನ್ನು ಆಚರಿಸುತ್ತಿದ್ದು, ಮಹಾನಗರ ದ ಎಲ್ಲಾ ಭಕ್ತಾಭಿಮಾನಿಗಳು ನವರಾತ್ರಿಯ ಹಾಗೂ ವಿಜಯ ದಶಮಿಯ ಎಲ್ಲಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ತೀರ್ಥ ಪ್ರಸಾದ ಸ್ವೀಕರಿಸಿ, ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಧರ್ಮದರ್ಶಿಗಳಾದ ಅಶೋಕ್ ದಾಸು ಶೆಟ್ಟಿ, ಅಧ್ಯಕ್ಷರಾದ ಗೋಪಾಲ್ ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆಯಾದ ವಿಲಾಸಿನಿ ಶೆಟ್ಟಿ ಹಾಗೂ ಎಲ್ಲಾ ಸದಸ್ಯರು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
Post a Comment