ಭಾರತ್ ಬ್ಯಾಂಕ್ ಗೆ ಅತ್ಯುತ್ತಮ ಮಾನವ ಸಂಪನ್ಮೂಲ ನಿರ್ವಹಣಾ ಪ್ರಶಸ್ತಿ ( Best HR Management Award )


ಸಹಕಾರಿ ರಂಗದ ಶ್ರೇಷ್ಠ ಬ್ಯಾಂಕ್ ಗಳಲ್ಲಿ ಒಂದಾದ ಭಾರತ್ ಬ್ಯಾಂಕ್ ನ ಪ್ರಶಸ್ತಿಯ ಸರಮಾಲೆಗೆ ಮತ್ತೊಂದು ಮಣಿ ಸೇರ್ಪಡೆಗೊಂಡಿತು.

ಅಕ್ಟೊಬರ್ 19ರಂದು ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದ ಆಲ್ ಇಂಡಿಯಾ ಕೋ -ಆಪರೇಟಿವ್ ಬ್ಯಾಂಕ್ಸ್ ಸಮ್ಮಿತ್ ನಲ್ಲಿ ಭಾರತ್ ಬ್ಯಾಂಕ್ ಗೆ ಅತ್ಯುತ್ತಮ ಮಾನವ ಸಂಪನ್ಮೂಲ ನಿರ್ವಹಣಾ ಪ್ರಶಸ್ತಿ (Best HR Management Award) ಪ್ರಧಾನಿಸಲಾಯಿತು.

 ಗುಜರಾತ್ ಸರಕಾರದ ಕ್ಯಾಬಿನೆಟ್ ಸಚಿವ ಜಯೇಶ್ ರಾಡಿಯ ಅವರು ಭಾರತ್ ಬ್ಯಾಂಕ್ ನ ಕಾರ್ಯಧ್ಯಕ್ಷ ಸೂರ್ಯಕಾಂತ್ ಜೆ ಸುವರ್ಣ ಅವರಿಗೆ ಪ್ರಶಸ್ತಿ ಹಸ್ತಾಂತರಿಸಿದರು.

ಈ ಶುಭ ಸಂದರ್ಭದಲ್ಲಿ ಎಂ ಎಸ್ ಸಿ ಬ್ಯಾಂಕ್ ನ ಪ್ರಮೋದ್ ಕಾರ್ನಾಡ್, ಮನೋಜ್ ಅಗರ್ವಾವಾಲ್, ಬ್ಯಾಂಕಿಂಗ್ ಫ್ರ್ಯಾಂಟಿಯರ್ಸ್ ನ ಬಾಬು ನಾಯರ್, ಭಾರತ್ ಬ್ಯಾಂಕಿನ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿದ್ಯಾನಂದ ಎಸ್ ಕರ್ಕೇರ, ಜಂಟಿ ಆಡಳಿತ ನಿರ್ದೇಶಕ , ದಿನೇಶ್ ಬಿ ಸಾಲ್ಯಾನ್ ಉಪಸ್ಥಿತರಿದ್ದರು.

ಭಾರತ್ ಬ್ಯಾಂಕ್ ತನ್ನ 101 ಶಾಖೆಗಳು, 3 ವಿಸ್ತರಣ ಕೌಂಟರ್‌ಗಳು, 104 ಆನ್-ಸೈಟ್ ಎಟಿಎಂ ಕೇಂದ್ರಗಳು ಮತ್ತು 3 ಆಫ್-ಸೈಟ್ ಎಟಿಎಂ ಕೇಂದ್ರಗಳ ಮೂಲಕ ಮಹಾರಾಷ್ಟ್ರ, ಕರ್ನಾಟಕ ಮತ್ತು ಗುಜರಾತ್ ರಾಜ್ಯಗಳಾದ್ಯಂತ ಸೇವೆಗಳನ್ನು ನೀಡುತ್ತಿದೆ.

2023-24ರ  ಆರ್ಥಿಕ ವರ್ಷದಲ್ಲಿ ಬ್ಯಾಂಕ್ ವಿವಿಧ ಸಂಸ್ಥೆಗಳಿಂದ ಒಟ್ಟು ನಾಲ್ಕು ಪ್ರತಿಷ್ಠಿತ ಪ್ರಶಸ್ತಿಗಳನ್ನು ಸ್ವೀಕರಿಸಿದೆ.

No comments

Powered by Blogger.