ಬಿಲ್ಲವರ ಎಸೋಸಿಯೇಶನಿನ ಮಹಿಳಾ ವಿಭಾಗದ ವತಿಯಿಂದ ಭಜನಾ ಸ್ಪರ್ಧೆ.

ಭಜನೆ ಮುಖಾಂತರ ಮಕ್ಕಳಲ್ಲಿ ಶಿಸ್ತು, ಸಂಸ್ಕಾರ ಬೆಳೆಯಲು ಸಾಧ್ಯ - ಹರೀಶ್ ಜಿ.ಅಮೀನ್.

ಚಿತ್ರ, ವರದಿ: ಉಮೇಶ್ ಕೆ.ಅಂಚನ್.

ಮುಂಬಯಿ, ಅ 15. ಭಕ್ತಿಯಿಂದ ಮಾಡುವ ಭಜನೆಯು ಭಗವಂತನನ್ನು ಒಲಿಸುವ ಸುಲಭವಾದ ಸಾಧನ. ಅಲ್ಲದೆ ಭಜನೆ  ಮಾಡುವವರ ಹಾಗೂ ಕೇಳುವವರ ಮನಸ್ಸಿಗೂ ಸಂತೋಷ ನೀಡುತ್ತದೆ. ಬಿಲ್ಲವರ ಅಸೋಸಿಯೇಶನ್ ಮಹಿಳಾ ವಿಭಾಗದ ವತಿಯಿಂದ ಭಜನಾ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಭಜನಾಸ್ಪರ್ಧೆಯನ್ನು ಆಯೋಜಿಸಿದೆ. ಮಕ್ಕಳು, ಮಹಿಳೆಯರು ಭಜನೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕೆಂಬುದೇ ಸಂಸ್ಥೆಯ ಉದ್ದೇಶ.ಭಜನೆ ಮುಖಾಂತರ ಮಕ್ಕಳಲ್ಲಿ ಶಿಸ್ತು ಸಂಸ್ಕಾರ ಬೆಳೆಯಲು ಸಾಧ್ಯ ಎಂದು ಬಿಲ್ಲವರ ಅಸೋಸಿಯೇಶನಿನ ಅದ್ಯಕ್ಷ ಹರೀಶ್ ಜಿ.ಅಮೀನ್ ಹೇಳಿದರು. ಅವರು ಅ.14ರಂದು ಸಾಂತಾಕ್ರೂಸ್ ಬಿಲ್ಲವ ಭವನದಲ್ಲಿ ಅಸೋಸಿಯೇಶನಿನ ಮಹಿಳಾ ವಿಭಾಗವು ಸ್ಥಳೀಯ ಕಚೇರಿಗಳ ಮಹಿಳಾ  ಸದಸ್ಯೆಯರಿಗೆ ಆಯೋಜಿಸಿದ್ದ ಭಜನಾ ಸ್ಪರ್ಧೆಯಲ್ಲಿ ಭಾಗವಹಿಸಿ ಮಾತನಾಡಿದರು.
          ಮುಂದೆ ಮಾತಾಡಿದ ಅವರು ‌ನವಮುಂಬಯಿಯಲ್ಲಿ ನಿರ್ಮಾಣದಲ್ಲಿರುವ ಬಿಲ್ಲವ ಸಮುದಾಯ ಭವನವು ಜನವರಿ ತಿಂಗಳಲ್ಲಿ ಲೋಕಾರ್ಪಣೆ ಗೊಳ್ಳಲಿದೆ. ಅಸೋಸಿಯೇಶನ್ ಮಾಡುತ್ತಿರುವ ಹಲವಾರು ಸಮಾಜಪರ ಕಾರ್ಯಗಳಿಗೆ ತಮ್ಮೆಲ್ಲರ ಸಹಕಾರ ಅಗತ್ಯ. ಬಿಲ್ಲವರ ಅಸೋಸಿಯೇಶನ್ ಹುಟ್ಟು ಹಾಕಿದ ಭಾರತ್ ಬ್ಯಾಂಕನ್ನು ಇನ್ನೂ ಬಲಪಡಿಸುವ ಕೆಲಸ ನಮ್ಮಿಂದಾಗಬೇಕು ಎಂದು ಹೇಳಿದರು.

         ಭಜನಾ ಸ್ಪರ್ಧೆಯಲ್ಲಿ ತೀರ್ಪು ಗಾರರಾಗಿ ಆಗಮಿಸಿದ್ದ ಕಲಾಸೌರಭದ ರೂವಾರಿ ಪದ್ಮನಾಭ ಸಸಿಹಿತ್ಲು ಮಾತನಾಡಿ ಇಂತಹ ಕಾರ್ಯಕ್ರಮವನ್ನು ಆಯೋಜಿಸುವುದರಿಂದ ಭಜನಾ ಮಂಡಳಿ ಹಾಗೂ ಹೊಸ ಪ್ರತಿಭೆಗಳಿಗೆ ಅವಕಾಶ ಸಿಗುತ್ತದೆ. ಅಸೋಸಿಯೇಶನಿನಲ್ಲಿ ನಡೆಯುತ್ತಿರುವ ಗುರುವಾರದ ಭಜನಾ ಕಾರ್ಯಕ್ರಮಕ್ಕೆ ವಾರಕ್ಕೊಂದರಂತೆ ಸ್ಥಳೀಯ ಕಚೇರಿಗಳ ಸದಸ್ಯರ ಭಜನೆ ನಡೆದರೆ ಒಳ್ಳೆಯದು ಎಂದು ಹೇಳಿ ಭಜನೆಯಲ್ಲಿ ಭಾಗವಹಿಸಿದ್ದ ಎಲ್ಲಾ ಸದಸ್ಯೆಯರನ್ನು ಅಭಿನಂದಿಸಿದರು.

          ಅಸೋಸಿಯೇಶನಿನ ಉಪಾದ್ಯಕ್ಷೆ ಜಯಂತಿ ವರದ್ ಉಳ್ಳಾಲ್ ತನ್ನ ಅನಿಸಿಕೆಯನ್ನು ವ್ಯಕ್ತ ಪಡಿಸುತ್ತಾ ಯುವ ವಿಭಾಗದ ಮಕ್ಕಳಿಗೆ ನೃತ್ಯದ ಬದಲು ಭಜನೆ ಕಲಿಯುವಿಕೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕು ಎಂದರು.

        ಭಜನಾ ಸ್ಪರ್ಧೆಯಲ್ಲಿ ಮೀರಾರೋಡ್ ಸ್ಥಳೀಯ ಕಛೇರಿ ಪ್ರಥಮ, ನವಮುಂಬಯಿಯ ಸ್ಥಳೀಯ ಕಚೇರಿ ದ್ವಿತೀಯ, ದೊಂಬಿವಿಲಿ ಸ್ಥಳೀಯ ಕಚೇರಿ ತೃತೀಯ ಹಾಗೂ ವಸಾಯಿ ಮತ್ತು ಕಾಂದಿವಿಲಿ ಸ್ಥಳೀಯ ಕಚೇರಿಗಳು ಸಮಾಧಾನಕರ ಬಹುಮಾನ ಪಡೆದವು. ಬಹುಮಾನದ ಪ್ರಾಯೋಜಕತ್ವದಲ್ಲಿ ಯಶೋಧಾ ಎನ್.ಪೂಜಾರಿ ಹಾಗೂ ಗೌರವಧನವನ್ನು ಸಬಿತಾ ಜಿ.ಪೂಜಾರಿ ನೀಡಿ ಸಹಕರಿಸಿದ್ದರು.ಭಜನೆ ಸ್ಪರ್ಧೆಯಲ್ಲಿ ತೀರ್ಪುಗಾರರಾಗಿ ಆಗಮಿಸಿದ್ದ ಪದ್ಮನಾಭ ಸಸಿಹಿತ್ಲು ಮತ್ತು ಭಾರತಿ ಉಡುಪರನ್ನು ಸತ್ಕರಿಸಲಾಯಿತು. ಮಹಿಳಾ ವಿಭಾಗದ ಉಪಾದ್ಯಕ್ಷೆ ಜಯಂತಿ ಕೋಟ್ಯಾನ್ ಮತ್ತು ಕಾರ್ಯದರ್ಶಿ ಸಬಿತಾ ಜೆ.ಪೂಜಾರಿ ತೀರ್ಪುಗಾರರನ್ನು ಪರಿಚಯಿಸಿದರು. 

          ಆರಂಭದಲ್ಲಿ ಬ್ರಹ್ಮಶ್ರೀನಾರಾಯಣ ಗುರುಮೂರ್ತಿಗೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಅಸೋಸಿಯೇಶನಿನ ಗೌರವ ಕಾರ್ಯದರ್ಶಿ ಹರೀಶ್ ಜಿ.ಸಾಲ್ಯಾನ್ ಸಂಸ್ಥೆಯ ಕಾರ್ಯಚಟುವಟಿಕೆಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಿಳಾ ವಿಭಾಗದ ಕಾರ್ಯಾದ್ಯಕ್ಷೆ ಶಕುಂತಳಾ ಕೆ.ಕೋಟ್ಯಾನ್ ಸ್ವಾಗತಿಸಿ, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಅಭಾರ ಮನ್ನಿಸಿದರು. ಕಾರ್ಯಕ್ರಮವನ್ನು  ಸಬಿತಾ ಜೆ.ಪೂಜಾರಿ ನಿರೂಪಿಸಿದರು. ಅಸೋಸಿಯೇಶನಿನ ಪದಾಧಿಕಾರಿಗಳು, ಸದಸ್ಯರು,  ಸ್ಥಳೀಯ ಸಮಿತಿಗಳ ಸದಸ್ಯರು, ಮಹಿಳಾ ವಿಭಾಗದ ಸದಸ್ಯೆಯರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ್ದರು. ವೇದಿಕೆಯಲ್ಲಿ ಮೊಮಿತಾ ಎಚ್. ಅಮೀನ್,ಅಸೋಸಿಯೇಶನಿನ ಉಪಾಧ್ಯಕ್ಷರುಗಳಾದ ಧರ್ಮಪಾಲ್ ಅಂಚನ್, ಶಂಕರ್ ಡಿ.ಪೂಜಾರಿ, ಜತೆಕೋಶಾಧಕಾರಿ ಹರಿಶ್ಚಂದ್ರ ಕುಂದರ್ ಉಪಸ್ಥಿತರಿದ್ದರು.

No comments

Powered by Blogger.