ಭಾರತ್ ಬ್ಯಾಂಕಿನ ನೂತನ ಆಡಳಿತ ಮಂಡಳಿ ಯನ್ನು ಗೌರವಿಸಿದ ಕರ್ನಾಟಕದ ಮಾಜಿ ಸಚಿವ ಡಾ. ಕೆ ಸಿ ನಾರಾಯಣ ಗೌಡ.

ಮುಂಬಯಿ ಅ 16.ಭಾರತ್ ಬ್ಯಾಂಕಿನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಜಯ ಸಿ. ಸುವರ್ಣ ಪ್ಯಾನಲ್ ನ ಸ್ಪರ್ಧಿಸಿ ಗೆಲುವು ಸಾಧಿಸಿಕೊಂಡ ನೂತನ ಕಾರ್ಯ ಧ್ಯಕ್ಷರಾಗಿ ಆಯ್ಕೆಗೊಂಡಿರುವ ಸೂರ್ಯಕಾಂತ ಜಯ ಸುವರ್ಣ ಅವರನ್ನು ಮತ್ತು ಉಪ ಕಾರ್ಯಧ್ಯಕ್ಷ ನ್ಯಾಯವಾದಿ ಸೋಮನಾಥಾ. ಬಿ ಅಮೀನ್ ಮತ್ತು  ನಿರ್ದೇಶಕರನ್ನು ಅಭಿನಂದಿಸುವುದಕ್ಕಾಗಿ  ಅ 17 ಗೊರೆಗಾವ್ ಪೂರ್ವದ ದಲ್ಲಿರುವ ಬ್ಯಾಂಕಿನ ಕೇಂದ್ರ ಕಚೇರಿಯಲ್ಲಿ ಕರ್ನಾಟಕ ಸರಕಾರದ ಮಾಜಿ ಸಚಿವ. ಮುಂಬೈಯ ಜಯಲಕ್ಷ್ಮಿ ಕೋ  ಕ್ರೆಡಿಟ್ ಸೊಸೈಟಿಯ ಗೌರವ  ಕಾರ್ಯಧ್ಯಕ ಡಾ ಕೆ ಸಿ ನಾರಾಯಣ ಗೌಡ ಮತ್ತು.ಜಯಲಕ್ಷ್ಮಿ ಕೋ  ಆಪರ್ಟಿವ್ ಕ್ರೆಡಿಟ್ ಸೊಸೈಟಿಯ   ಕಾರ್ಯಧ್ಯಕ ರಂಗಪ್ಪ ಸಿ ಗೌಡ.  ಅಭಿನಂದಿಸಿ ಗೌರವಿಸಿದರು.
ಬಳಿಕ ಸೂರ್ಯಕಾಂತ್ ಸುವರ್ಣರೊಂದಿಗೆ ಸುದೀರ್ಘಕಾಲ ಮಾತನಾಡಿದ ಮಾಜಿ ಸಚಿವ ನಾರಾಯಣಗೌಡರು ನಮ್ಮ ಸಮುದಾಯದ ಬಂಧುಗಳಿಗೆ ಜಯ ಸುವರ್ಣ ರ ಕಾಲಾವಧಿಯಲ್ಲಿ ವಿವಿಧ ರೀತಿಯಲ್ಲಿ ಸಹಕಾರವನ್ನು ಭಾರತ್ ಬ್ಯಾಂಕ್ ಮೂಲಕ ನೀಡುತ್ತಾ ಬಂದಿದ್ದಾರೆ. ಆ ಮೂಲಕಅವರು ಉದ್ಯಮದಲ್ಲಿ ಅಭಿವೃದ್ಧಿಯನ್ನು ಕಂಡಿದ್ದಾರೆ. ಒಕ್ಕಲಿಗ ಸಮುದಾಯದ ಹಿರಿಯ ರಾಗಿರುವ ರಂಗಪ್ಪ ಗೌಡರನ್ನು ಮತ್ತು ಹಲವಾರು ಉದ್ಯಮಿಗಳನ್ನು ಎತ್ತರಕ್ಕೆ ಬೆಳೆಸುವುದಕ್ಕೆ ಜಯ ಸುವರ್ಣರು  ಆಶೀರ್ವದಿಸಿದ್ದಾರೆ ಎಂಬುದನ್ನು ನೆನಪಿಸಿ, ಬ್ಯಾಂಕಿನ ಅಭಿವೃದ್ಧಿಗೆ ನಮ್ಮ ಎಲ್ಲಾ ರೀತಿಯ ಸಹಕಾರಗಳಿಗೆ. ಆಡಳಿತ ಮಂಡಳಿ ಸಮರ್ಥ ರೀತಿಯಲ್ಲಿ ಬ್ಯಾಂಕನ್ನು ಮುನ್ನಡೆಸಲಿ ಎಂದು ಶುಭ ಹಾರಸಿದರು.

 ಇದೆ ಸಂದರ್ಭದಲ್ಲಿ ರಂಗಪ್ಪ ಗೌಡರು ಜಯ ಸುವರ್ಣರ ಸೇವಾಕಾರಿಗಳು ಮತ್ತು ಅವರಿಗೆ ನೀಡಿದ ಸಹಾಯ ಸಹಕಾರದ ಬಗ್ಗೆ ಸೂರ್ಯಕಾಂತ್ ಅವರಿಗೆ ತಿಳಿಸಿದರು. ಬ್ಯಾಂಕಿನ ಅಭಿವೃದ್ಧಿಯ ಕಾರ್ಯಗಳಿಗೆ ನಮ್ಮ ಸದಾ ಬೆಂಬಲವಿದೆ ಎಂದು ತಿಳಿಸಿದರು.

 ಈ ಸಂದರ್ಭದಲ್ಲಿ ಭಾರತ್ ಬ್ಯಾಂಕ್‌ನ  ನೂತನ  ಉಪ ಕಾರ್ಯಾಧ್ಯಕ್ಷರ   ನ್ಯಾಯವಾದಿ ಸೋಮನಾಥ ಬಿ. ಅಮೀನ್‌  , ನಿರ್ದೇಶಕರದ, ಗಂಗಾಧರ ಜೆ. ಪೂಜಾರಿ, ಭಾಸ್ಕರ್ ಎಂ. ಸಾಲ್ಯಾನ್,, ಮೋಹನದಾಸ್ ಜಿ. ಪೂಜಾರಿ. ಬ್ಯಾಂಕಿನ ಆಡಳಿತ ನಿರ್ದೇಶಕ . ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿದ್ಯಾನಂದ ಕರ್ಕೇರ. ಜಂಟಿ ಆಡಳಿತ ನಿರ್ದೇಶಕ  ದಿನೇಶ್ ಸಾಲಿಯನ್. ಮಹಾಪ್ರಬಂಧಕ ಮಹೇಶ್ ಪೂಜಾರಿ. ಜಯಲಕ್ಷ್ಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಕಾರ್ಯದರ್ಶಿ ಕೆ  ರಾಜೇ ಗೌಡ. ಉಪಕಾರ್ಯಧ್ಯಕ್ಷ ಕೆಂಪೇಗೌಡ. ಬಾಲಾಜಿ ಇಂಟರ್ನ್ಯಾಷನಲ್ ನಿರ್ದೇಶಕ ಸುನಿಲ್ ರಂಗಪ್ಪ ಗೌಡ. ಸಮಾಜ ಸೇವಕ ಗಂಗಾಧರ್ ಗೌಡ. ಉಪಸ್ಥರಿದ್ದರು


No comments

Powered by Blogger.