ಕಾಪು ಶ್ರೀ ಹಳೆ ಮಾರಿಯಮ್ಮ ದೇವಸ್ಥಾನ -; ಅಕ್ಟೋಬರ್ 15 ರಿಂದ 17ರ ತನಕ ಜೀರ್ಣೋದ್ಧಾರ ನಿಧಿ ಸ್ಥಾಪನೆ-ಮುಷ್ಟಿ ಕಾಣಿಕೆ ಸಮರ್ಪಣೆ , ಮಹಾಸಂಕಲ್ಪ .
ಕಾಪು ಸೀಮೆಯ ಆರಾಧ್ಯ ದೇವತೆ ಶ್ರೀ ಹಳೆ ಮಾರಿಯಮ್ಮ ದೇವಸ್ಥಾನದ ಸುತ್ತಪೌಳಿಯ ಜೀರ್ಣೋದ್ಧಾರದ ಪ್ರಯುಕ್ತ ಅಕ್ಟೋಬರ್ 15 ರಂದು ಜೀರ್ಣೋದ್ಧಾರದ ನಿಧಿ ಸ್ಥಾಪನೆ - ಮುಷ್ಟಿ ಕಾಣಿಕೆ ಸಮರ್ಪಣೆ ಮಹಾಸಂಕಲ್ಪ ಅಭಿಯಾನ ಆರಂಭಗೊಳ್ಳಲಿದೆ .
ದೇವಸ್ಥಾನದ ಎಂಟು ದಶಕಗಳ ಹಳೆಯ ವಾಸ್ತುವಿನ ಸುತ್ತುಪೌಳಿ ಪ್ರಸ್ತುತ ಜೀರ್ಣಾವಸ್ಥೆಯಲ್ಲಿದ್ದು ಶ್ರೀ ಸಂಸ್ಥಾನ ಕಾಶಿ ಮಠಾಧಿಪತಿ ಶ್ರೀಮದ್ ಸಂಯಮಿಂದ್ರ
ತೀರ್ಥ ಶ್ರೀಪಾದರ ಆಶೀರ್ವಾದ ಮತ್ತು ಮಾರ್ಗದರ್ಶನದಂತೆ ಸುತ್ತುಪೌಳಿಯ ಸಮಗ್ರ ಜೀರ್ಣೋದ್ಧರಕ್ಕೆ ಯೋಜನೆ ಹಾಕಿಕೊಳ್ಳಲಾಗಿದೆ .
ಕಾಪುಶ್ರೀ ವೆಂಕಟರಮಣ ದೇವಸ್ಥಾನ ಮತ್ತು ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಕಾಪುಪೇಟೆಯ 10 ಸಮಸ್ತರು ನವರಾತ್ರಿ ಮೊದಲ ದಿನ ಬೆಳಿಗ್ಗೆ 9 ಗಂಟೆಗೆ ಮಾರಿಯಮ್ಮ ದೇವಸ್ಥಾನದಲ್ಲಿ ಜೀರ್ಣೋದ್ಧಾರ ನಿಧಿ ಸ್ಥಾಪನೆ-ಮುಷ್ಟಿಕಾಣಿಕೆ ಸಮರ್ಪಣೆ ಮಹಾಸಂಕಲ್ಪಕ್ಕೆ ಚಾಲನೆ ನೀಡಲಿದ್ದಾರೆ .
ಅಕ್ಟೋಬರ್ 17ರ ವರೆಗೆ ಮುಷ್ಟಿ ಕಾಣಿಕೆ ಸಮರ್ಪಣೆ ನಡೆಯಲಿದೆ ಎಂದು ಆಡಳಿತ ಮೊಕ್ತೇಸರ ಪ್ರಸಾದ್ ಗೋಕುಲ್ದಾಸ್ ಶೆಣೈ ಮತ್ತು ಆಡಳಿತ ಮಂಡಳಿಯ ಪ್ರಕಟಣೆ ತಿಳಿಸಿದೆ .
Post a Comment