"ಸತ್ಯ ಶ್ಯಾಮಾಲಂ ವಂದೇ ಮಾತರಂ" ವಿಶಿಷ್ಟ ಕಾರ್ಯಕ್ರಮದೊಂದಿಗೆ ಐಲೇಸಾ ದಿಂದ ಇಸ್ರೋ ವಿಜ್ಞಾನಿ , ಕವಿ ಸಿ.ಆರ್.ಸತ್ಯ ಅವರ ಪತ್ನಿ ಶ್ಯಾಮಲಾ ಸತ್ಯ ಅವರಿಗೆ , ತಾ 15.10 ರಂದು ಗೌರವ ನಮನ.

"ಸತ್ಯ ಶ್ಯಾಮಾಲಂ ವಂದೇ ಮಾತರಂ" ವಿಶಿಷ್ಟ ಕಾರ್ಯಕ್ರಮದೊಂದಿಗೆ ಐಲೇಸಾ ದಿಂದ ಇಸ್ರೋ ವಿಜ್ಞಾನಿ ,
 ಕವಿ ಸಿ. ಆರ್. ಸತ್ಯ ಅವರ ಪತ್ನಿ ಶ್ಯಾಮಲಾ ಸತ್ಯ ಅವರಿಗೆ,
 ತಾ 15.10 ರಂದು ಗೌರವ ನಮನ.

ಫ್ರೆಂಚ್ ಫೋಟೋಗ್ರಾಫರ್ ಹೆನ್ರಿಕಾರ್ಟಿಯರ್ ಬ್ರೆಸ್ಸೋನ್ ತೆಗೆದ ಆ ಒಂದು ಫೋಟೋ ನೋಡದವರು ತೀರಾ ವಿರಳ . ಸೈಕಲ್ ನಲ್ಲಿ ರಾಕೆಟ್ ನೋಸ್ ಹೇರಿಕೊಂಡು ಇನ್ಸ್ಟ್ರುಮೆಂಟ್ ಇಂಜಿನಿಯರ್ ವೇಲಪ್ಪನ್ ನಾಯರ್ ಹಾಗೂ ಇಸ್ರೋ ಸಂಸ್ಥೆಯ ರಾಕೆಟ್ ಇಂಜಿನಿಯರ್ ಸಿ ಆರ್ ಸತ್ಯ ಜೊತೆಯಾಗಿ ನಡೆಯುವ ಚಿತ್ರವದು . ಅಂದು ಶೈಶವ ಸ್ಥಿತಿಯಲ್ಲಿದ್ದ ರಾಕೆಟ್ ಉಡಾವಣೆ ತಂತ್ರಜ್ಞಾನ ಮುಂದೆ ಕಲಾಂ ನೇತ್ರತ್ವದ ಸಿ ಆರ್ ಸತ್ಯ ತಂಡ ಉಪಗ್ರಹ ವಾಹಕ ರಾಕೆಟ್ ಅನ್ನು ಯಶಸ್ವಿಯಾಗಿ ಕಕ್ಷೆಗೆ ಹಾರಿಸುವಲ್ಲಿ ಯಶಸ್ವಿಯಾಗಿದ್ದು ಒಂದು ಇತಿಹಾಸ.

 ಇಂತಹ ಬಿಡುವಿಲ್ಲದ ವಿಜ್ಞಾನಿಯೊಳಗೆ ಒಬ್ಬ ಅದ್ಬುತ ವೈನೋಧಿಕ ಕವಿ ಅಡಗಿದ್ದ ಎನ್ನುವುದು ಹೆಚ್ಚಿನವರಿಗೆ ತಿಳಿಯದ ಸತ್ಯ .

 "ಆಚೆ ಮನೆ ಸುಬ್ಬಮ್ಮನದು ಏಕಾದಶಿ ಉಪವಾಸ" ಎನ್ನುವ ಮೈಸೂರು ಅನಂತಸ್ವಾಮಿಯವರ ಸಂಯೋಜನೆಯ  ಖ್ಯಾತ ಹಾಡಿನ ಮೂಲಕ ಕನ್ನಡದ ಜನತೆಗೆ ಹಾಸ್ಯ ಸವಿಯ ಹಾಡನ್ನು ಉಣಬಡಿಸಿದ
 ಸತ್ಯ ಅವರದು ವಿಜ್ಞಾನದ ಜೊತೆ ಸಾಹಿತ್ಯದ ಅನೂಹ್ಯ ಪ್ರಯಾಣ .
 ಸತ್ಯ ರವರ ಈ ಸಾಹಿತ್ಯ, ಸಂಗೀತದ ಆಸಕ್ತಿಯನ್ನು ಅವರ ಅನುಪಸ್ಥಿತಿಯಲ್ಲಿ ಅವರ ಕಾವ್ಯ ಸ್ಫೂರ್ತಿ, ಜೀವನ ಸಂಗಾತಿ ಶ್ಯಾಮಲರವರ ಜೊತೆಯೊಂದಿಗೆ ಸಂವಾದದಲ್ಲಿ ತೊಡಗಿ ಕವಿ ಪತ್ನಿಯ ಸಂಗಾತಿ 
 ಸಾಹಿತ್ಯ ಶೂನ್ಯವನ್ನು ಒಂದಿಷ್ಟು ಹೊತ್ತು ಕಳೆಯಲು ಐಲೇಸಾ "ಸತ್ಯಂ ಶ್ಯಾಮಲಾಂ ವಂದೇ ಮಾತರಂ" ಎಂಬ ವಿಭಿನ್ನ ಕಾರ್ಯಕ್ರಮವನ್ನು ಬೆಂಗಳೂರಿನ ಆನಂದನಗರದ ಶ್ಯಾಮಲರವರ ಮನೆಯಲ್ಲಿ ಭಾನುವಾರ ಅಂದರೆ 15-10.2023 ತಾರೀಕು ಸಮಾನ ಮನಸ್ಕ ಸಾಹಿತ್ಯ ಅಭಿಮಾನಿಗಳ ಕೂಡಿವೆಕೆಯಲ್ಲಿ ನಡೆಸಲು ತೀರ್ಮಾನಿಸಿದೆ .

 ಕಾರ್ಯಕ್ರಮದಲ್ಲಿ ರಾಜ್ಯ ಪ್ರಶಸ್ತಿ ವಿಜೇತ ಹಿನ್ನೆಲೆ ಗಾಯಕ ರಮೇಶ್ಚಂದ್ರ , ಟಿವಿ ವಾರ್ತಾ ನಿರೂಪಕ, ನಾಯಕ ನಟ ರಾಘವ ಸೂರ್ಯ ,ಪತ್ರಕರ್ತ ವಿನೋದ್ ಗಾಯಕರುಗಳಾದ ಅಜೇಶ್ ಚಾರ್ಮಾಡಿ, ಡಾ. ಸುಶೀಲಾ ರಾವ್, ಪ್ರಕಾಶ್ ಪಾವಂಜೆ, ನಾಟ್ಯ ವಿಧುಶಿ ನಮಿತಾ ಆನಂತ್ ಮತ್ತು ಸನತ್ ಭಾಗವಹಿಸಲಿದ್ದಾರೆ.
 ಕಾರ್ಯಕ್ರಮವನ್ನು ಸಾಹಿತಿ,ಐಲೇಸಾ ದ ಕ್ರಿಯೇಟಿವ್ ಹೆಡ್ ಶಾಂತರಾಮ ಶೆಟ್ಟಿ ಮತ್ತು ಅನಂತ್ ನಿರ್ವಹಿಸಲಿದ್ದು ಗೋಪಾಲ್ ಪಟ್ಟೆ, ಪಳ್ಳಿ ವಿಶ್ವನಾಥ್ ಶೆಟ್ಟಿ ,ಶಿವೂ ಸಾಲ್ಯಾನ್ ಮತ್ತು ನರೇಂದ್ರ ಕಬ್ಬಿನಾಲೆ ಯೋಜಿಸಲಿದ್ದಾರೆ .

 ಆಸಕ್ತರು ಅ  ದಿನ ಬೆಳಿಗ್ಗೆ 10:30 ಗಂಟೆಗೆ ಈ ಕಾರ್ಯಕ್ರಮದಲ್ಲಿ ಭಾಗಿಯಾಗಬಹುದು, ಮತ್ತು ಇತರ ವಿವರಗಳಿಗೆ ಐಲೇಸಾದ  ಮೀಡಿಯಾ ಸಂಚಾಲಕರಾದ ಮುಂಬೈಯ ಸುರೇಂದ್ರ ಕುಮಾರ್  ಮಾರ್ನಾಡ್ :93242 80156 ಮತ್ತು  ವಿವೇಕ್ ಮಂಡೆಕರ :90082 42735  ಕರೆ ಮಾಡಿ ತಿಳಿದುಕೊಳ್ಳಬಹುದು.


No comments

Powered by Blogger.