ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ15ನೇ ವಾರ್ಷಿಕ ಮಹಾಸಭೆ.
ಕಲಾ ಪೋಷಕರು ಮುಂಬೈ ನಾಟಕ ತಂಡಗಳಿಗೆ ಪ್ರೋತ್ಸಾಹ ನೀಡಿ : ಡಾ| ಸುರೇಂದ್ರಕುಮಾರ್ ಹೆಗ್ಡೆ.
ಮುಂಬಯಿ, ಅ 18: ಸಮಾಜದಲ್ಲಿ ಕಲಾವಿದರು ಮುಖ್ಯ ಭೂಮಿಕೆಯಲ್ಲಿದ್ದಾರೆ ರಂಗಭೂಮಿಯಲ್ಲಿ ಅಭಿನಯದ ಮೂಲಕ ಸಮಾಜದ ಬದಲಾವಣೆಗೆ ಕಲಾವಿದರು ಮಾತ್ರ ಕೊಡುಗೆಯನ್ನು ನೀಡುತ್ತಾರೆ ಅಂತ ಕಲಾವಿದರು ಒಗ್ಗೂಡಿಸಿ ಸ್ಥಾಪನೆಗೊಂಡ ಕನ್ನಡಿಗ ಕಲಾವಿದರ ಪರಿಷತ್ತು ಇದೀಗ ಒಂದೂವರೆ ದಶಕದ ಸೇವೆಯಲ್ಲಿದೆ. ಈಗಾಗಲೇ ನಿರ್ಣಾಯಗೊಂಡಂತೆ ಸಂಸ್ಥೆಯ ಸ್ವಂತ ಕಚೇರಿಯ ಹುಡು ಕಾಟ ಈಗಾಗಲೇ ಮುಗಿದಿದ್ದು . . ಈ ಕಾಯಕಕ್ಕೆ ಸಹೃದಯರ ಸಹಯೋಗ ಅವಶ್ಯವಿದೆ. ಕಲಾಭಿ ಮಾನಿಗಳ ಸಹಕಾರದಿಂದ ಇದು ಶೀಘ್ರವೇ ನನಸಾಗುವ ಭರವಸೆ ನಮಗಿದೆ. ಕಲೆ ಕಲಾವಿದರಿಗೆ ಮುಂಬೈಯ ಕಲಾ ಪೋಷಕರು ಸಹಕಾರ ನೀಡಿ ಮುಂಬೈ ತಂಡಗಳಿಗೆ ಪ್ರೋತ್ಸಾಹ ನೀಡಬೇಕು
ಎಂದು ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಇದರ ಅಧ್ಯಕ್ಷ ಡಾ| ಸುರೇಂದ್ರಕುಮಾರ್ ಹೆಗ್ಡೆ ತಿಳಿಸಿದರು.
ಸಾಂತಾಕ್ರೂಜ್ ಪೂರ್ವದಲ್ಲಿನ ಬಿಲ್ಲವ ಭವನದ ಕಿರು ಸಭಾಗೃಹದಲ್ಲಿ 15ನೇ ವಾರ್ಷಿಕ ಮಹಾ ಸಭೆಯನ್ನು ದೀಪ ಬೆಳಗಿಸಿ ಚಾಲನೆ ಯನ್ನಿತ್ತು ಸಭಾಧ್ಯಕ್ಷತೆ ವಹಿಸಿ ಸುರೇಂದ್ರಕುಮಾರ್ ಮಾತನಾಡಿದರು.
ಪರಿಷತ್ ಉಪಾಧ್ಯಕ್ಷರಾದ ಕಮಲಾಕ್ಷ ಜಿ.ಸರಾಫ್, ಶ್ರೀನಿವಾಸ ಪಿ.ಸಾಫಲ್ಯ, ಗೌ| ಪ ಕಾರ್ಯದರ್ಶಿ ದಾಮೋದರ ಶೆಟ್ಟಿ ಇರುವೈಲು, ಗೌ| ಪ) ಕೋಶಾಧಿಕಾರಿ ಪಿ.ಬಿ ಚಂದ್ರಹಾಸ್, ಜೊತೆ ಕಾರ್ಯದರ್ಶಿ ಚಂದ್ರಾವತಿ ದೇವಾಡಿಗ, ಜೊತೆ ಕೋಶಾಧಿಕಾರಿ ನವೀನ್ ಶೆಟ್ಟಿ ಇನ್ನಬಾಳಿಕೆ, ಮಹಿಳಾಧ್ಯಕ್ಷೆ ತಾರಾ ಆರ್. ಬಂಗೇರ, ಸಂಚಾಲಕಿ ಕುಸುಮಾ ಸಿ.ಪೂಜಾರಿ ಮತ್ತಿತರ ಪದಾಧಿಕಾರಿಗಳು ವೇದಿಕೆಯಲ್ಲಿ ಪಾಲ್ಗೊಂಡಿದ್ದರು.
ದಾಮೋದರ ಶೆಟ್ಟಿ ಇರುವೈಲು ವಾರ್ಷಿಕ ವರದಿ ಮಂಡಿಸಿದರು. ಪಿ.ಬಿ ಚಂದ್ರಹಾಸ್ ಗತವಾರ್ಷಿಕ ಲೆಕ್ಕಪತ್ರಗಳನ್ನು ಮಂಡಿಸಿದರು. ಜಗದೀಶ್ ಡಿ.ರೈ ಅವರನ್ನು ಲೆಕ್ಕಪರಿ ಶೋಧಕರನ್ನಾಗಿ ಹಾಗೂ ರಾವ್ ಎಂಡ್ ಅಶೋಕ್ ಚಾರ್ಟಡ್್ರ ಅಕೌಂಟೆಂಟ್ಸ್ ಇವರನ್ನು ಬಾಹ್ಯ ಲೆಕ್ಕಪರಿಶೋಧಕರನ್ನಾಗಿ ಸಭೆಯು ಸರ್ವಾನುಮತದಿಂದ ಗೊಳಿಸಿತು. ಆಯ್ಕೆ
ಸಂಘದ ಸದಸ್ಯರನೇಕರು ಹಾಜ ರಿದ್ದು ಸಭೆಯಲ್ಲಿನ ಡಾ| ಸತೀಶ್ ಎನ್.ಬಂಗೇರ, ಡಾ| ಬಿ.ಆ ಮಂಜುನಾಥ್, ಕೆ.ಕೆ ಶೆಟ್ಟಿ, ಗುರುರಾಜ್ ಎನ್.ನಾಯಕ್, ಕೆ.ಮಂಜುನಾಥಯ್ಯ, ಅನಿಲ್ ಹೆಗ್ಡೆ, ಅಮಿತಾ ಜತ್ತನ್, ಮಧುಸೂದನ ಟಿ.ಆರ್, ವೀಣಾ ಸುವರ್ಣ, ದೇವಲ್ಕುಂದ ಭಾಸ್ಕ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಪ್ರೇಮನಾಥ್ ಆರ್.ಕುಕ್ಯಾನ್, ಪದ್ಮನಾಭ ಸಸಿಹಿತ್ತು ಮತ್ತಿತರ ಸದಸ್ಯರು ಮಾತಾನಾಡಿ ಸಲಹೆ ಸೂಚನೆಗಳನ್ನು ನೀಡಿ ಸಂಘದ ಅಭ್ಯದಯಕ್ಕೆ ಹಾರೈಸಿದರು. ಚುದ್ರಾವತಿ ದೇವಾಡಿಗ ಧನ್ಯವಾದ ಸಲ್ಲಿಸಿದರು.
Post a Comment