ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿಗೆ ಭಾರತ್ ಬ್ಯಾಂಕ್ ನ ಕಾರ್ಯಧ್ಯಕ್ಷ ಸೂರ್ಯಕಾಂತ್ ಜೆ.ಸುವರ್ಣ ಭೇಟಿ.

ಚಿತ್ರ : ಸತೀಶ್ ಶೆಟ್ಟಿ.
ಡೊಂಬಿವಲಿಯ ಪ್ರಸಿದ್ಧ ಧಾರ್ಮಿಕ ಸಂಸ್ಥೆ ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿಯು 59ನೇ ನವರಾತ್ರಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತಿದೆ.

ತಾ.19 ರಂದು ತಡ ಸಂಜೆ ಭಾರತ್ ಬ್ಯಾಂಕ್ ನ ನೂತನ ಕಾರ್ಯಧ್ಯಕ್ಷರಾಗಿ ಆಯ್ಕೆಯಾದ ಸೂರ್ಯಕಾಂತ ಜೆ.ಸುವರ್ಣ ಮಂಡಳಿಗೆ ಆಗಮಿಸಿ ಶ್ರೀ ದೇವಿಯ ದರ್ಶನ ಪಡೆದರು.
ಮಂಡಳಿಯ ಧರ್ಮದರ್ಶಿ ಅಶೋಕ್ ಡಿ.ಶೆಟ್ಟಿ    ಅವರು ಸೂರ್ಯಕಾಂತ್ ಸುವರ್ಣ ಅವರಿಗೆ ಶ್ರೀ ದೇವರ ಪ್ರಸಾದ ನೀಡಿ ಗೌರವಿಸಿದರು.

ಭಾರತ್ ಬ್ಯಾಂಕ್ ನ ನೂತನ ನಿರ್ದೇಶಕರುಗಳಾದ ದಯಾನಂದ ಪೂಜಾರಿ, ನಿರಂಜನ್ ಪೂಜಾರಿ, ಎನ್.ಸಿ.ಪಿ. ನೇತಾರ ಲಕ್ಷ್ಮಣ ಪೂಜಾರಿ, ವಿರಾರ್-ನಾಲಸೋಪರ ಕರ್ನಾಟಕ ಸಂಸ್ಥೆಯ ಅಧ್ಯಕ್ಷ ಸದಾಶಿವ ಕರ್ಕೇರ,  ಸದಾಶಿವ ಪೂಜಾರಿ ಕಲ್ಯಾಣ್,ಇಂದ್ರಾಳಿ ದಿವಾಕರ ಶೆಟ್ಟಿ, ಸುಕುಮಾರ ಶೆಟ್ಟಿ, ಭಾರತ್ ಬ್ಯಾಂಕ್ ದೊಂಬಿವಲಿ ಶಾಖೆಯ ಮುಖ್ಯಸ್ಥ ರಮೇಶ್ ಸುವರ್ಣ, ಮಂಡಳಿಯ  ಕಾರ್ಯದರ್ಶಿ ಕಿಶೋರ್ ಶೆಟ್ಟಿ, ಮೋಹನ್ ಸಾಲ್ಯಾನ್, ತಾರಾನಾಥ ಅಮೀನ್, ಚಿನ್ಮಯ್ ಸಾಲ್ಯಾನ್, ಉಪಸ್ಥಿತರಿದ್ದರು.

No comments

Powered by Blogger.