ಇನ್ನೂ ವಿಶ್ವವನ್ನೇ ನೋಡಿಲ್ಲ ಆಗಲೇ ವಿಶ್ವ ದಾಖಲೆ ಸೃಷ್ಟಿ! 31 ದಾಖಲೆಗಳೊಂದಿಗೆ ಹಾಲುಗಲ್ಲದ ಮಗು ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸ್ಥಾನ ಪಡೆದಳು!ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ.
ಇನ್ನೂ ವಿಶ್ವವನ್ನೇ ನೋಡಿಲ್ಲ ಆಗಲೇ ವಿಶ್ವ ದಾಖಲೆ ಸೃಷ್ಟಿ! 31 ದಾಖಲೆಗಳೊಂದಿಗೆ ಹಾಲುಗಲ್ಲದ ಮಗು ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸ್ಥಾನ ಪಡೆದಳು!
31 ದಾಖಲೆಗಳೊಂದಿಗೆ, ಹಾಲುಗಲ್ಲದ ಮಗು ಹುಟ್ಟಿದ 72 ದಿನಗಳಲ್ಲಿ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸ್ಥಾನ ಪಡೆದಳು!
ಛಿಂದವಾಡ, ಅಕ್ಟೋಬರ್ 12: ಈ ಪುಟ್ಟ ಬಾಲಕಿ ಹುಟ್ಟಿ ಕೇವಲ 72 ದಿನಗಳಾಗಿವೆ. ಇಷ್ಟು ಚಿಕ್ಕ ಮಗುವಿನ ಹೆಸರಿಗೆ ಸರ್ಕಾರ ನೀಡುವ 33 ದಾಖಲೆಗಳನ್ನು ಆಕೆಯ ಪಾಲಕರು ಮಾಡಿಸಿದ್ದಾರೆ. ಇದರಿಂದ ಆ ಮಗು ಇನ್ನೂ ವಿಶ್ವವನ್ನೇ ನೋಡಿಲ್ಲವಾದರೂ ವಿಶ್ವದಾಖಲೆ ಸೃಷ್ಟಿಗೆ ಭಾಜನಳಾಗಿದ್ದಾಳೆ. ಅದು ಹೇಗೆ ಸಾಧ್ಯ? ಎಂದು ನೀವು ಮೂಗಿನ ಮೇಲೆ ಬೆರಳಿಟ್ಟುಕೊಂಡಿರಾ ಆಗಲೇ? ಹಾಗಾದರೆ ಅದೇನು ಅಂತಹಾ ವಿಶ್ವ ದಾಖಲೆ ಎಂಬುದನ್ನು ನೀವು ತಿಳಿದುಕೊಳ್ಳಲೇಬೇಕು. ಈ ವರ್ಷ ಜುಲೈ 8 ರಂದು ಮಧ್ಯಪ್ರದೇಶದ ಛಿಂದವಾಡ ಜಿಲ್ಲೆಯ ಕೇಸರಿನಂದನ್ ಸೂರ್ಯವಂಶಿ ಮತ್ತು ಪ್ರಿಯಾಂಕಾ ದಂಪತಿಗೆ ಶರಣ್ಯಾ ಎಂಬ ಪುಟ್ಟ ಹುಡುಗಿ ಜನಿಸಿದಳು.
ಜನನದ ಮೂರು ತಿಂಗಳಲ್ಲಿ, ಬೇಬಿ ಶರಣ್ಯಾ ವಿಶ್ವ ದಾಖಲೆಯನ್ನು ಸಾಧಿಸಿದಳು. ಅದೇನೆಂದರೆ, ತಮ್ಮ ಮಗುವಿನ ಜನನವನ್ನು ಶಾಶ್ವತವಾಗಿ ಸ್ಮರಣೀಯವಾಗಿಸಲು ಏನಾದರೂ ಮಾಡಬೇಕೆಂದು ಬಯಸಿದ ಈ ದಂಪತಿ 28 ಗುರುತಿನ ಚೀಟಿ ದಾಖಲೆಗಳೊಂದಿಗೆ ಮಗುವಿನ ಹೆಸರನ್ನು ವಿಶ್ವ ದಾಖಲೆಗೆ ಸೇರ್ಪಡೆ ಮಾಡಿದರು. ದಂಪತಿ ತಡಮಾಡದೆ ಸ್ಪರ್ಧೆಗೆ ಅಣಿಯಾದರು. ಅವರು ತಮ್ಮ ಮಗಳ ಹೆಸರಿನಲ್ಲಿ ಸಾಧ್ಯವಾದಷ್ಟೂ ಹೆಚ್ಚು ದಾಖಲೆಗಳನ್ನು ಹೊಂದಲು ಬಯಸಿದರು. ಹೀಗಾಗಿ ಮಗಳು ಶರಣ್ಯಾ ಹುಟ್ಟಿದ 72 ದಿನಗಳಲ್ಲಿ 31 ಬಗೆಯ ಪ್ರಮಾಣ ಪತ್ರಗಳನ್ನು ಪಡೆದು ವಿಶ್ವ ದಾಖಲೆ ಪುಸ್ತಕದಲ್ಲಿ ಸ್ಥಾನ ಪಡೆದಿದ್ದಾರೆ.
ಶರಣ್ಯಾ ಅವರ ಪೋಷಕರಾದ ಕೇಸರಿ ನಂದನ್ ಮತ್ತು ಪ್ರಿಯಾಂಕಾ ಇಬ್ಬರೂ ಚಂದಂಗಾವ್‌ನ ಅಂಚೆ ಇಲಾಖೆಯಲ್ಲಿ ಉದ್ಯೋಗಿಗಳು. ಜೊತೆಗೆ ಶರಣ್ಯಾಳ ತಾತ ಕೂಡ ಅಂಚೆ ಉದ್ಯೋಗಿ. ಶರಣ್ಯಾ ಹೆಸರಿನಲ್ಲಿ 72 ದಿನಗಳಲ್ಲಿ 31 ಗುರುತಿನ ದಾಖಲೆ ಪಡೆದು ಗುರಿ ಸಾಧಿಸಲಾಗಿದೆ. ಪಾಸ್‌ಪೋರ್ಟ್, ಐಡಿ ಕಾರ್ಡ್, ಆಧಾರ್ ಕಾರ್ಡ್, ಇಮ್ಯುನೈಸೇಶನ್ ಕಾರ್ಡ್, ‘ಲಾಡ್ಲಿ ಲಕ್ಷ್ಮಿ’ ಪ್ರಮಾಣಪತ್ರ, ಜಾತಿ ಪ್ರಮಾಣಪತ್ರ, ಸ್ಥಳೀಯ ನಿವಾಸ ಪ್ರಮಾಣಪತ್ರ, ರಾಷ್ಟ್ರೀಯ ಆರೋಗ್ಯ ಕಾರ್ಡ್, ‘ಸುಕನ್ಯಾ ಸಮೃದ್ಧಿ’ ಖಾತೆ, ‘ಮಹಿಳಾ ಸಮ್ಮಾನ್ ಉಳಿತಾಯ ಪತ್ರ’, ‘ರಾಷ್ಟ್ರೀಯ ಉಳಿತಾಯ ದಾಖಲೆಗಳು’, ‘ಕಿಸಾನ್ ವಿಕ’ ಪತ್ರಾ’, ಪೋಸ್ಟ್ ಆಫೀಸ್ ಉಳಿತಾಯ ಖಾತೆ, PNB ATM ಕಾರ್ಡ್, ಸಾರ್ವಜನಿಕ ಭವಿಷ್ಯ ನಿಧಿ ಖಾತೆ, ಬ್ಯಾಂಕ್ ಖಾತೆಗಳು ಇತ್ಯಾದಿ ಇತ್ಯಾದಿ.
ಅನೇಕ ಜನರು ಸರಿಯಾದ ಗುರುತಿನ ದಾಖಲೆಗಳಿಲ್ಲದೆ ತೊಂದರೆಗಳನ್ನು ಎದುರಿಸುತ್ತಾರೆ. ಸರ್ಕಾರದ ಹಲವು ಯೋಜನೆಗಳಿಂದ ದೂರವೇ ಉಳಿಯುತ್ತಾರೆ. ಅಂತಹವರಲ್ಲಿ ಜಾಗೃತಿ ಮೂಡಿಸಲು ಈ ರೀತಿ ಮಾಡಲಾಗಿದೆ ಎಂದು ಶರಣ್ಯಾಳ ಅಪ್ಪ-ಅಮ್ಮ ಹೇಳುತ್ತಾರೆ. ಅಲ್ಲದೆ, ಹೆಣ್ಣು ಮಗುವಿನ ಜನನದ ಮೇಲೆ ಯಾವ ಸರ್ಕಾರದ ಯೋಜನೆಗಳು ಅನ್ವಯಿಸುತ್ತವೆ ಮತ್ತು ಅವುಗಳನ್ನು ಹೇಗೆ ಪಡೆಯುವುದು ಮುಂತಾದ ವಿವರಗಳನ್ನು ಹೇಗೆ ಪಡೆಯುವುದು ಎಂದು ತಿಳಿಯಲು ನಾವು ಬಯಸಿದ್ದೇವೆ. ಸೂಕ್ತ ವಿವರಗಳೊಂದಿಗೆ ಸಕಾಲದಲ್ಲಿ ಅರ್ಜಿ ಸಲ್ಲಿಸಿದರೆ ಯಾವುದೇ ಪ್ರಮಾಣಪತ್ರವನ್ನು ಸುಲಭವಾಗಿ ಪಡೆಯಬಹುದು ಎಂದೂ ಅವರು ಕಿವಿಮಾತು ಹೇಳಿದರು.
Post a Comment