ವಿಶ್ವಕಪ್ ಕ್ರಿಕೆಟ್ : ಮತ್ತೊಮ್ಮೆ ಮಿಂಚಿದ ಕೊಹ್ಲಿ, ಬಾಂಗ್ಲಾದ ಸದ್ದಡಗಿಸಿದ ಭಾರತ.
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಸ್ಟೇಡಿಯಮ್ ನಲ್ಲಿ ಇಂದು ಭಾರತದ 5ನೇ ಪಂದ್ಯ ಬಾಂಗ್ಲಾದೇಶದ ವಿರುದ್ಧ ನಡೆದಿದ್ದು, ಭಾರತವು ಬಾಂಗ್ಲಾವನ್ನು 7 ವಿಕೆಟ್ ಗಳಿಂದ ಸೋಲಿಸಿ, ತನ್ನ ಗೆಲುವಿನ ಓಟವನ್ನು ಮುಂದುವರಿಸಿದೆ.
ಬಾಂಗ್ಲಾದೇಶದ 256 ರನ್ ಬೆನ್ನತಿದ ಭಾರತಕ್ಕೆ ರೋಹಿತ್ ಶರ್ಮಾ ಮತ್ತು ಗಿಲ್ ಅವರ ಉತ್ತಮ ಆರಂಭ ನೀಡಿದರು. 48 ರನ್ ಗಳಿಸಿ ರೋಹಿತ್ ಔಟಾದರೆ, ಗಿಲ್ 53 ರನ್ ಹೊಡೆದರು. ಆದರೆ ಕೊಹ್ಲಿ ಎಂದಿನಂತೆ ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿ ಅಜೇಯ 103 ರನ್ ಬಾರಿಸಿ ,ಭಾರತ 7 ವಿಕೆಟ್ ಗಳ ಸುಲಭ ಜಯಗಳಿಸಲು ನೆರವಾದರು.
ಇದಕ್ಕೂ ಮೊದಲು ಟಾಸ್ ಗೆದ್ದ ಬಾಂಗ್ಲಾದೇಶ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿತಲ್ಲದೆ, ಉತ್ತಮ ಆರಂಭವನ್ನು ಪಡೆದಿತ್ತು.ಆದರೆ ಟಿ.ಹಸನ್ 51 ರನ್ ಗಳಿಸಿ ಔಟಾದ ಬಳಿಕ ಕುಸಿತ ಕಂಡಿತು.ಎಲ್.ದಾಸ್ 66 ರನ್ ಗಳಿಸಿ, ತಂಡದ ಪರವಾಗಿ ಗರಿಷ್ಠ ಸ್ಕೋರರ್ ಎಣಿಸಿದರು. ಭಾರತದ ಬುಮ್ರಾ, ಸಿರಾಜ್, ಜಡೇಜಾ ತಲಾ 2 ವಿಕೆಟ್ ಕಬಲಿಸಿದರೆ, ಶಾರ್ದೂಲ್ ಠಾಕುರು,ಕುಲದೀಪ್ ಯಾದವ್ 1 ವಿಕೆಟ್ ಪಡೆದರು.
ಭಾರತದ ಮುಂದಿನ ಪಂದ್ಯ ಆಕ್ಟೊಬರ್ 22 ರಂದು ನ್ಯೂಜಿಲೆಂಡ್ ವಿರುದ್ಧ ನಡೆಯಲಿದೆ.
Post a Comment