ಅ. 20 ರಂದು ತೋನ್ಸೆ ಶಂಕರ್ ಸುವರ್ಣರಿಗೆ ಶ್ರದ್ಧಾಂಜಲಿ ಸಭೆ


 
ಮುಂಬಯಿ : ತೋನ್ಸೆ ಗರೋಡಿಯ ಮುಂಬಯಿ ಸಮಿತಿಯ ಗೌರವ ಅಧ್ಯಕ್ಷರಾಗಿ ಹಾಗೂ ಪ್ರಸ್ತುತ ತೋನ್ಸೆ ಗರೋಡಿ ಮುಂಬಯಿ ಸಮಿತಿಯ ಸೇವಾ ಟ್ರಸ್ಟ್ ನ ಸಲಹೆಗಾರರಾಗಿ ದುಡಿದ ಸಮಾಜ ಸೇವಕ  ಕೊಡುಗೈ ದಾನಿ ತೋನ್ಸೆ ಶಂಕರ್ ಸುವರ್ಣರು ಅ. 15 ರಂದು ಅಲ್ಪಕಾಲದ ಅನಾರೋಗ್ಯದಿಂದ ದೈವಾಧೀನರಾಗಿದ್ದು ಅ. 20 ರಂದು ಸಂಜೆ 6 ಕ್ಕೆ ಬಿಲ್ಲವ ಭವನದಲ್ಲಿ ಶ್ರದ್ಧಾಂಜಲಿ ಸಭೆಯನ್ನು ಆಯೋಜಿಸಲಾಗಿದೆ. ಈ ಸಭೆಯಲ್ಲಿ ಮೃತರ ಅಭಿಮಾನಿಗಳು, ಬಂಧುಗಳು ಹಾಗೂ ತೋನ್ಸೆ ಗರೋಡಿಯ ಮುಂಬಯಿ ಸಮಿತಿಯ ಎಲ್ಲಾ ಸದಸ್ಯರು ಪಾಲ್ಗೊಂಡು ಮೃತರ ಆತ್ಮಕ್ಕೆ ಚಿರಶಾಂತಿ ಕೋರಬೇಕಾಗಿ  ತೋನ್ಸೆ ಗರೋಡಿಯ ಮುಂಬಯಿ  ಸೇವಾ ಟ್ರಸ್ಟನ ಗೌರವ ಕಾರ್ಯದರ್ಶಿ ತೋನ್ಸೆ ಸಂಜೀವ ಪೂಜಾರಿ, ಅದ್ಯಕ್ಷರು, ಉಪಾಧ್ಯಕ್ಷರುಗಳು, ಕಾರ್ಯಕಾರಿ ಸಮಿತಿ ಹಾಗೂ ಸಲಹಾ ಸಮಿತಿ ಯ ಸದಸ್ಯರು ವಿನಂತಿಸಿದ್ದಾರೆ.

ಶಂಕರ್ ಸುವರ್ಣರು ಮೂಲತಃ ಮೂಡುತೋನ್ಸೆ ನಿವಾಸಿಯಾಗಿದ್ದು ತನ್ನ ಪ್ರಾಥಮಿಕ ಶಿಕ್ಷಣವನ್ನು ಊರಿನಲ್ಲಿ ಮುಗಿಸಿ ಮುಂಬಯಿಯಲ್ಲಿ ಕಾನೂನು ಪದವಿ ಗಳಿಸಿದರು. ಉನ್ನತ ಮಟ್ಟದ ಉದ್ಯೋಗ ಮಾಡಿ ನಿವೃತ್ತ ಜೀವನ ಸಾಗಿಸುತ್ತಿದ್ದರು. ಪತ್ನಿ ಪದ್ಮಾವತಿ,  ಇಬ್ಬರು ಹೆಣ್ಣು ಮಕ್ಕಳು, ಅಳಿಯಂದಿರು ಹಾಗೂ ಮೊಮ್ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದರು.  ತೋನ್ಸೆ ಗರೋಡಿಯ ಗುರಿಕಾರರಾಗಿ ಹಲವಾರು ದಶಕಗಳ ಕಾಲ ಸೇವೆ ಸಲ್ಲಿಸಿದ್ದಇವರು ತೋನ್ಸೆ ಗರೋಡಿಯ ಮುಂಬಯಿ ಸಮಿತಿಯ ಗೌರವ ಅಧ್ಯಕ್ಷರಾಗಿ ಹಾಗೂ ಪ್ರಸ್ತುತ ತೋನ್ಸೆ  ಗರೋಡಿ ಮುಂಬಯಿ ಸಮಿತಿಯ ಸೇವಾ ಟ್ರಸ್ಟ್ ನ ಸಲಹೆಗಾರರಾಗಿದ್ದರು.

No comments

Powered by Blogger.