ಸಿದ್ದು ಸರಕಾರ ನಾಲ್ಕು ತಿಂಗಳಲ್ಲಿ ಗ್ಯಾರಂಟಿ ಯೋಜನೆಗೆ ಖರ್ಚು ಮಾಡಿದ ಮೊತ್ತ ಬರೋಬ್ಬರಿ 6,392 ಕೋಟಿ ರೂಪಾಯಿ.
ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಮೂಲಕ ಬಾರಿ ಸದ್ದು ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತ್ರತ್ವದ ಕಾಂಗ್ರೆಸ್ ಸರ್ಕಾರ ನಾಲ್ಕು ತಿಂಗಳಲ್ಲಿ 4 ಗ್ಯಾರಂಟಿ ಗಳಿಗೆ ಬರೋಬ್ಬರಿ 6,398 ಕೋಟಿ ವೆಚ್ಚ ವ್ಯಯಿಸಿದೆ.
ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಗ್ಯಾರಂಟಿಗಳು ಹಂತ ಹಂತವಾಗಿ ಜಾರಿಯಾಗಿದ್ದು ಕೊನೆಯದಾಗಿ ಜಾರಿಯಾದ ಗೃಹಲಕ್ಷ್ಮಿಗೆ ಕೇವಲ ಒಂದುವರೆ ತಿಂಗಳಲ್ಲಿ 1,935 ಕೋಟಿ ರೂಪಾಯಿ ವೆಚ್ಚವಾಗಿರುವುದು ಗಮನಾರ್ಹ.
ಐದು ಗ್ಯಾರಂಟಿಗಳಿಗೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ 39,815 ಕೋಟಿ ರೂ. ವೆಚ್ಚವಾಗುವ ಅಂದಾಜಿದೆ.
ಜೂನ್ 11ರಿಂದ ಅಕ್ಟೋಬರ್ 10 ರ ವರೆಗೆ ಒಟ್ಟು ನಾಲ್ಕು ತಿಂಗಳಲ್ಲಿ ನಾಲ್ಕು ಗ್ಯಾರಂಟಿ ಗಳಿಗೆ 6,392 ಕೋಟಿ ವೆಚ್ಚವಾಗಿದೆ .
ಸದ್ಯ ಅನ್ನ ಭಾಗ್ಯ ಯೋಜನೆಯಡಿ ಹೆಚ್ಚುವರಿ ಐದು ಕೆಜಿ ಅಕ್ಕಿ ಬದಲಿಗೆ ಅರ್ಹ ಪಡಿತರ ಕಾರ್ಡ್ ನ ಪ್ರತಿ ಸದಸ್ಯರಿಗೆ ಡಿಬಿಟಿ ಮಾಡಲಾಗುತ್ತಿದ್ದು ,2270 ಕೋಟಿ ರೂ. ಭರಿಸಲಾಗಿದೆ.
ಉಚಿತ ವಿದ್ಯುತ್ ಸೌಲಭ್ಯಕ್ಕಾಗಿ1402 ಕೋಟಿ ರೂ ವೆಚ್ಚವಾಗಿದ್ಫು ಶಕ್ತಿ ಯೋಜನೆಗೆ 4 ತಿಂಗಳಲ್ಲಿ 785.48 ಕೋಟಿ ರೂ. ಖರ್ಚಾಗಿದೆ.
ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಜಾರಿಗೆ ನೀಡಲಾಗಿದ್ದು ಅರ್ಹ ಫಲಾನುಭವಿಗಳು ಸೌಲಭ್ಯದಿಂದ ವಂಚಿತರಾಗದಂತೆ ಆರ್ಥಿಕ ಇಲಾಖೆ ನಿಯಮಿತವಾಗಿ ಅನುದಾನ ಬಿಡುಗಡೆ ಮಾಡುತ್ತಿದೆ . ಹಿಂದಿನ ವರ್ಷಗಳಿಗೆ ಹೋಲಿಸಿದರೆ ಆರಂಭಿಕ ನಾಲ್ಕು ತಿಂಗಳಲ್ಲಿ ಇಷ್ಟು ದೊಡ್ಡ ಮೊತ್ತದ ಹಣ ವೆಚ್ಚವಾಗಿರುವುದು ಇದೇ ಮೊದಲು ಗ್ಯಾರಂಟಿ ಜೊತೆಗೆ ಇತರ ಇತರ ವೆಚ್ಚಗಳಿಗೂ ಸೂಕ್ತ ರೀತಿಯಲ್ಲಿ ಹಣ ಹೊಂದಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ .
Post a Comment