ಅಂತೂ ಇಂತೂ ಉಚ್ಚಿಲ ಹೆದ್ದಾರಿಗೆ ಬೆಳಕಿನ ಭಾಗ್ಯ
ಕಳೆದ ಒಂದುವರೆ ವರ್ಷದಿಂದ ನಿರಂತರವಾಗಿ ಸಾರ್ವಜನಿಕರು ಹೆದ್ದಾರಿ ಇಲಾಖೆ, ಉಚ್ಚಿಲ ಬಡಾ ಗ್ರಾಮ ಪಂಚಾಯತ್, ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದರೂ, ದಾರಿ ದೀಪದ ಭಾಗ್ಯ ಲಭಿಸಿರಲಿಲ್ಲ.
ತಿಂಗಳ ಹಿಂದೆ ಗ್ರಾಮ ಪಂಚಾಯತ್ ಅಧ್ಯಕ್ಷ ಶಿವ ಕುಮಾರ್ ಮೆಂಡನ್ ರವರನ್ನು ಪತ್ರಕರ್ತರು ಮತ್ತು ಸ್ಥಳೀಯರು ಸಂಪರ್ಕಿಸಿದ್ದಾಗ ಹೆದ್ದಾರಿ ಇಲಾಖೆ ಒಂದು ತಿಂಗಳ ಒಳಗೆ ದಾರಿದೀಪದ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದಾರೆ ಎಂದು ಹೇಳಿದ್ದಾರೆ.
ಇಂದು ಅಕ್ಟೋಬರ್ 12ರ ಸಂಜೆ ಹೆದ್ದಾರಿ ಇಲಾಖೆ ಹೇಳಿದ ಮಾತನ್ನು ಉಳಿಸಿಕೊಂಡಿದೆ. ಹೆದ್ದಾರಿ ಮಧ್ಯದ ಕಂಬಗಳ ದೀಪಗಳು ಉರಿಯಲಾರಂಭಿಸಿದೆ.
ಅಕ್ಟೋಬರ್ 15ರಂದು ಉಚ್ಚಿಲದ ಶ್ರೀ ಮಹಾಲಕ್ಷ್ಮೀ ದೇವಳದ ವೈಭವದ ದಸರ ಉತ್ಸವ ೨೦೨೩ನಡೆಯಲಿದ್ದು ದೇವಸ್ಥಾನದ ವತಿಯಿಂದ ಮತ್ತು ಗ್ರಾಮಸ್ಥರು ತಮ್ಮ ತಮ್ಮ ಮನೆಗಳಲ್ಲಿ ಹಬ್ಬಗಳಂತೆ ದೀಪವನ್ನು ಅಳವಡಿಸಿದ್ದಾರೆ. ಈ ಬಾರಿ ದಸರಾ ಉತ್ಸವಕ್ಕಾಗಿ ಹೆದ್ದಾರಿ ಹೆದ್ದಾರಿ ಇಲಾಖೆಯೂ ದಾರಿದೀಪ ಅಳವಡಿಸಿ ಸಾರ್ವಜನಿಕರಿಂದ ಭೇಷ್ ಎನಿಸಿದೆ.
ದೀಪ ಉರಿಯಲು ಕಳೆದ ಒಂದೂವರೆ ವರ್ಷದಿಂದ ಶ್ರಮ ವಹಿಸಿದ ಗ್ರಾಮಸ್ಥರು, ಸಂಘ ಸಂಸ್ಥೆಯವರು ಮತ್ತು ಗ್ರಾಮ ಪಂಚಾಯತ್ ಅಧ್ಯಕ್ಷ ಶಿವಕುಮಾರ್ ಮೆಂಡನ್ ಅಭಿನಂದನಾರ್ಹರು.
Post a Comment