ಶ್ರೀ ಮಹಾಕಾಳಿ ಮಂದಿರ ಜೋಗೇಶ್ವರಿ ಪೂರ್ವ. ಆ.15 ರಿಂದ ಸ್.24 ರ ತನಕ 59ನೇ ವಾರ್ಷಿಕ ನವರಾತ್ರಿ, ದಸರೋತ್ಸವ.
ಜೋಗೇಶ್ವರಿ ಪೂರ್ವದ ಪ್ರೇಮ್ ನಗರ ಕ್ವಾರ್ಟರ್ಸ್ ಕಾಲನಿರುವ ಶ್ರೀ ಮಹಾಕಾಳಿ ಮಂದಿರದಲ್ಲಿ 59ನೇ ವರ್ಷದ ನವರಾತ್ರಿ ಹಾಗೂ ದಸರ ಮಹೋತ್ಸವ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ .
ಅಕ್ಟೋಬರ್ 15 ಆದಿತ್ಯವಾರ ಬೆಳಿಗ್ಗೆ 7:30ಕ್ಕೆ ಗಣ ಹೋಮದೊಂದಿಗೆ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುವುದು.ಅಂದು ಸಂಜೆ 6 ಗಂಟೆಗೆ ಘಟ ಪ್ರತಿಷ್ಠೆಯಾಗಲಿದೆ.
ಪ್ರತಿದಿನ ಸಂಜೆ 7 ಗಂಟೆಯಿಂದ 9:00ಯ ತನಕ ಶನಿಗ್ರಂಥ ಪಾರಾಯಣ ಭಜನೆ, ಹೂವಿನ ಪೂಜೆ ಮಹಾ ಆರತಿ ಜರಗಲಿದೆ .
ಅಕ್ಟೋಬರ್ 15 ,ಆದಿತ್ಯವಾರ ಮತ್ತು ಅಕ್ಟೋಬರ್ 19ರ ಗುರುವಾರದಂದು ಆವೇಶ ಪೂಜೆ,
ಅಕ್ಟೋಬರ್ 21 ರಂದು ಶನಿವಾರ ಸಂಜೆ 5:00 ಗಂಟೆಗೆ ದೇವಿ ಸಹಸ್ರನಾಮಾವಳಿ ,
ಅಕ್ಟೋಬರ್ 22ರ ಆದಿತ್ಯವಾರದಂದು ಸಂಜೆ 5:00 ಗಂಟೆಗೆ ದುರ್ಗಾ ಹೋಮ ,
ಅಕ್ಟೋಬರ್ 23 ರ ಸೋಮವಾರ ಮಹಾ ಆರತಿ ನಂತರ ಅನ್ನಸಂತರ್ಪಣೆ ಹಾಗೂ ಬೆಳಗಿನ ತನಕ ಭಜನಾ ಕಾರ್ಯಕ್ರಮ ನಡೆಯಲಿದೆ .
ಅಕ್ಟೋಬರ್ 24ರ ಮಂಗಳವಾರದಂದು ಸಂಜೆ 3 ಗಂಟೆಯಿಂದ ಭಜನೆ ,ಆರತಿ ,ಆವೇಶ, ಹೂವಿನ ಪೂಜೆ ಪಂಚಾಮೃತ ಅಭಿಷೇಕವಾದ ಬಳಿಕ , ಘಟ ವಿಸರ್ಜನೆಗಾಗಿ ಮೆರವಣಿಗೆಯ ಮೂಲಕ ಹೊರಡಲಿದೆ.
ಶ್ರೀ ಮಹಾಕಾಳಿ ಅಮ್ಮನ ಸನ್ನಿಧಾನದಲ್ಲಿ ಜರಗಲಿರುವ ಈ ಎಲ್ಲ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತೀರ್ಥ ಪ್ರಸಾದ ಸ್ವೀಕರಿಸಿ ಅಮ್ಮನ ಕೃಪಾನುಗ್ರಹಕ್ಕೆ ಪಾತ್ರರಾಗಬೇಕಾಗಿ ಮಂದಿರದ ಆಡಳಿತ ಹಾಗೂ ಕಾರ್ಯಕಾರಿ ಸದಸ್ಯರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
Post a Comment