ನವರಾತ್ರಿ ಹಬ್ಬದ ಸಂದರ್ಭದಲ್ಲಿ ಮುಂಬೈ ಮೆಟ್ರೋ ಮಧ್ಯರಾತ್ರಿ ಸೇವೆಗಳನ್ನು ನಡೆಸಲಿದೆ.
ಅಕ್ಟೋಬರ್ 15 ರಿಂದ 24 ರವರೆಗೆ ಪ್ರಾರಂಭವಾಗುವ ನವರಾತ್ರಿಯ 10 ದಿನಗಳ ಉತ್ಸವದಲ್ಲಿ ಪ್ರತಿದಿನ ಮಧ್ಯರಾತ್ರಿ ತನಕ ಮುಂಬೈನಲ್ಲಿ ಮೆಟ್ರೋ ಸೇವೆಗಳು ಕಾರ್ಯನಿರ್ವಹಿಸುತ್ತವೆ.
ರಾಜ್ಯ ಆಡಳಿತವು ಮೆಟ್ರೋ 2A ಮತ್ತು ಲೈನ್ 7 ಮಾರ್ಗದಲ್ಲಿ 12:20 ರ ತನಕ ಜನರು ಪ್ರಯಾಣಿಸಲು
ಅನುಕೂಲ ಕಲ್ಪಿಸಿದೆ.
ಪ್ರಸ್ತುತ ಮೆಟ್ರೊದ 2A, ಅಂಧೇರಿ ಪಶ್ಚಿಮದಿಂದ ದಹಿಸರ್‌ಗೆ ರಾತ್ರಿ 10.20 ರ ತನಕ ಹಾಗೂ ಲೈನ್ 7 ದಹಿಸರ್ ಪೂರ್ವದಿಂದ ಗುಂಡಾವಳಿ ತನಕ ರಾತ್ರಿ 10.30 ರ ತನಕ ಚಲಿಸುತ್ತಿದ್ದು, ನವರಾತ್ರಿ ಹಬ್ಬಕ್ಕೆ ಸಮಯವನ್ನು 12.20 ಕ್ಕೆ ವಿಸ್ತರಿಸಿದೆ.
10 ದಿನಗಳ ಉತ್ಸವದ ಸಮಯ ಮೆಟ್ರೋ ದ ರಾತ್ರಿ ಯ ಪ್ರಯಾಣದ ಸಮಯ ವಿಸರಿಸುವಂತ್ತೇ ಬಿಜೆಪಿ ಶಾಸಕ ಅತುಲ್ ಭಟ್ಕಳ್ ಕರ್ ಅವರು ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರಿಗೆ ಮನವಿ ಮಾಡಿದ್ದು, ತನ್ನ ಮನವಿಗೆ ಸ್ಪಂದಿಸಿದ ,ಮುಖ್ಯ ಮಂತ್ರಿಗೆ ಅತುಲ್ ಕೃತಜ್ಞತೆ ಸಲ್ಲಿಸಿದ್ದಾರೆ.
ಇದು ಸರ್ಕಾರವು ಜನರ ಬಗ್ಗೆ ಸಂವೇದನಾಶೀಲವಾಗಿದೆ ಮತ್ತು ಅಲ್ಲಿನ ಸಮಸ್ಯೆಗಳನ್ನು ಧನಾತ್ಮಕವಾಗಿ ಪರಿಗಣಿಸುತ್ತದೆ ಎಂದು ತೋರಿಸುತ್ತದೆ ಎಂದು ಅತುಲ್ ಹೇಳಿದ್ದಾರೆ.
Post a Comment