ಬೆಂಗಳೂರಿನಲ್ಲಿ ಸಿಕ್ಕಿದ 42 ಕೋಟಿ ರೂಪಾಯಿ ಕಮಿಷನ್ ಹಣ : ನಳಿನ್ ಕುಮಾರ್ ಕಟೀಲ್.
ಬೆಂಗಳೂರಿನ ಗುತ್ತಿಗೆದಾರರೊಬ್ಬರ ಮನೆಯಲ್ಲಿ ಐಟಿ ಅಧಿಕಾರಿಗಳು ಪತ್ತೆ ಹಚ್ಚಿದ 42 ಕೋಟಿ ಕಮಿಷನ್ ಹಣ ಎಂಬ ಮಾಹಿತಿ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನವೀನ್ ಕುಮಾರ್ ಕಟೀಲ್ ಹೇಳಿಕೆ ನೀಡಿದ್ದಾರೆ .
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದವರು ಬೆಂಗಳೂರಿನಲ್ಲಿ ಅಂಬಿಕಾ ಪತಿ ಎಂಬ ಗುತ್ತಿಗೆದಾರನ ಮನೆಗೆ ಐಟಿ ದಾಳಿಯಾಗಿದೆ ಕೆಲ ದಿನಗಳ ಹಿಂದೆ 600 ಕೋಟಿ ರೂಪಾಯಿ ಹಣ ಸರ್ಕಾರ ಬಿಡುಗಡೆ ಮಾಡಿತ್ತು. ಈಗ ಸಿಕ್ಕ ಹಣ ಕಮಿಷನ್ ಹಣ ಎಂಬ ಮಾಹಿತಿ ಸಿಕ್ಕಿದೆ ರಾಜ್ಯದಲ್ಲಿ ಇವತ್ತು ಎಟಿಎಂ ಸರ್ಕಾರ ಕೆಲಸ ಮಾಡುತ್ತಿದೆ. ತೆಲಂಗಾಣದ ಚುನಾವಣೆಗೆ ಸಂಗ್ರಹಿಸಲಾದ ಹಣ ಎನ್ನಲಾಗುತ್ತಿದೆ .
ಐಟಿ ಯಾರ ಒತ್ತಡದಿಂದಲೂ ದಾಳಿಗಳನ್ನು ಮಾಡುವುದಿಲ್ಲ .ಗುತ್ತಿಗೆದಾರರಿಗೆ ಹಣ ಬಿಡುಗಡೆಯಾದ ಬೆನ್ನಲ್ಲೆ , ಹಣ ಸಿಕ್ಕಿರೋದು ಅನುಮಾನ ಹುಟ್ಟಿಸಿದೆ .
ಇದೊಂದು ಭ್ರಷ್ಟಾಚಾರದ ಹಾಗೂ ಪರ್ಸೆಂಟೇಜ್ ಸರ್ಕಾರ ಭ್ರಷ್ಟಾಚಾರಿಗಳ ಬೆಂಗಾವಲಿಗಿರುವ ಕಲೆಕ್ಷನ್ ಮತ್ತು ಎಟಿಎಂ ಸರ್ಕಾರ .ಸುಳ್ಳು ಹೇಳಿ ಭರವಸೆ ಕೊಟ್ಟು ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ , ಕರ್ನಾಟಕ ಕತ್ತಲೆಯಲ್ಲಿದೆ ವಿದ್ಯುತ್ ಪೂರೈಕೆಯಲ್ಲಿ ಮತಯಾಗುತ್ತಿದೆ ರೈತರಿಗೆ ವಿದ್ಯುತ್ ಇಲ್ಲ, ನಿದ್ದೆಗೆಟ್ಟರೂ ರೈತರಿಗೆ ಕರೆಂಟ್ ಇಲ್ಲ ಎಂದು ನಳಿನ್ ಕುಮಾರ್ ಕಿಡಿಕಾರಿದರು .
Post a Comment