ಆ 15 ರಿಂದ 24 ರ ವರಗೆ ಶ್ರೀ ಜಗದಂಬಾ ಕಾಲಭೈರವ ದೇವಸ್ಥಾನದಲ್ಲಿ ಶರನ್ನವರಾತ್ರಿ
ಜೋಗೇಶ್ವರಿ ಪೂರ್ವ ಇತಿಹಾಸ ಪ್ರಸಿದ್ಧ ಗುಹೆಯ ಸಮೀಪದ ಶ್ರೀ ಜಗದಂಬಾ ಕಾಲಭೈರವ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ,ಈ ಬಾರಿಯೂ ಶರನ್ನವರಾತ್ರಿ ಹಾಗೂ ವಿಜಯದಶಮಿ ಮಹೋತ್ಸವವು ಆಕ್ಟೊಬರ್ 15 ರಿಂದ ಮೊದಲ್ಗೊಂಡು 24 ರ ತನಕ ವಿವಿಧ ಪೂಜಾ,ವಿಧಿ-ವಿಧಾನದೊಂದಿಗೆ ದೇವಸ್ಥಾನದ ಪ್ರದಾನ ಅರ್ಚಕರಾದ ಪಾದೂರು ನರಹರಿ ತಂತ್ರಿ ಅವರ ಪರೋಹಿತ್ಯದಲ್ಲಿ ನಡೆಯಲಿದೆ.
ತಾ.15 ರವಿವಾರ , ಬೆಳಿಗ್ಗೆ 9.30 ಗೆ ಘಟಸ್ತಾಪನ, ಅಭಿಷೇಕ, ದ್ವಾದಶ ನಾರಿಕೇಳ ಗಣಯಾಗ, ಮಹಾಪೂಜೆ .
ತಾ.16. ಸೋಮವಾರ , ಬೆಳಿಗ್ಗೆ 10ಕ್ಕೆ ಪಂಚಬ್ರಹ್ಮ ಮಂತ್ರಯಾಗ,ಮಹಾಪೂಜೆ.
ತಾ 17 ಮಂಗಳವಾರ , ಬೆಳಿಗ್ಗೆ 10ಕ್ಜೆ ಸ್ವಯಂವರ ಪಾರ್ವತಿ ಮಂತ್ರ ಯಾಗ, ಮಹಾಪೂಜೆ.
ತಾ.18 ಬುಧವಾರ ,ಬೆಳಿಗ್ಗೆ ಭಾಗ್ಯಕ್ಯಮತ ಸೂಕ್ತಯಾಗ, ಮಹಾಪೂಜೆ.
ತಾ.19 ಗುರುವಾರ ,ಬೆಳಿಗ್ಗೆ 8.30 ಕ್ಕೆ ಲಲಿತಾ ಪಂಚಮಿಯ ಪ್ರಯುಕ್ತ ಸಾಮೂಹಿಕ ಚಂಡಿಕಾಯಾಗ,ಪೂರ್ಣಾಹುತಿ, ಮಹಾಪೂಜೆ.
ತಾ.20ರ ಶುಕ್ರವಾರ , ಬೆಳಿಗ್ಗೆ 10ಕ್ಕೆ ಲಕ್ಷ್ಮೀ ಹ್ರದಯ ನಾರಾಯಣ ಮಂತ್ರಯಾಗ, ಮಹಾಪೂಜೆ
ತಾ.21 ಶನಿವಾರ , ಬೆಳಿಗ್ಗೆ 10ಕ್ಕೆ ವಾಯುಸ್ತುತಿ ಪುರಶ್ಚರಣಯಾಗ, ಮಹಾಪೂಜೆ
ತಾ.22 ರವಿವಾರ , ಬೆಳಿಗ್ಗೆ 10ಕ್ಕೆ ಸೂಕ್ತಯಾಗ, ಮಹಾಪೂಜೆ.
ತಾ.23 ಸೋಮವಾರ , ಬೆಳಿಗ್ಗೆ ನವಾಕ್ಪರೀ ಮಂತ್ರಯಾಗ, ಮಹಾಪೂಜೆ.
ತಾ.24 ಮಂಗಳವಾರ, ಬೆಳಿಗ್ಗೆ 10ಕ್ಕೆ ವಿಜಯ ದಶಮಿ ಪ್ರಯುಕ್ತ ಶ್ರೀ ದುರ್ಗಾಹೋಮ ,12ಕ್ಕೆ ಪೂರ್ಣಾಹುತಿ, 12.30 ಕ್ಕೆ ಮಹಾಪೂಜೆ.
ಪ್ರತಿದಿನ ಮಧ್ಯಾಹ್ನ ಅನ್ನ ಸಂತರ್ಪಣೆ, ರಾತ್ರಿ 7.30ಕ್ಕೆ ಭಜನೆ,9.30ಕ್ಕೆ ಮಹಾಪೂಜೆ ನಡೆಯಲಿದ್ದು, ನವರಾತ್ರಿಯ ಎಲ್ಲಾ ದಿನಗಳಲ್ಲೂ ಭಾಗವಹಿಸಿ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸುವಂತ್ತೇ ಆಡಳಿತ ಮೊಕ್ತೇಸರ ಸಂಜೀವ ಪೂಜಾರಿ, ಗೌರವ ಕಾರ್ಯದರ್ಶಿ ಶೇಖರ ಕರ್ಕೇರ, ಟ್ರಸ್ಟಿಗಳು, ಸೇವಾ ಸಮಿತಿ,ಭಜನಾ ಮತ್ತು ಮಹಿಳಾ ಮಂಡಳಿ ಹಾಗೂ ಸರ್ವ ಸದಸ್ಯರು ವಿನಂತಿಸಿದ್ದಾರೆ.
Post a Comment