ಬಿಲ್ಲವರ ಅಸೋಸಿಯೇಶನ್ ಮುಂಬಯಿ, ಡೊಂಬಿವಲಿ ಸ್ಥಳೀಯ ಕಛೇರಿಯ ವತಿಯಿಂದ ರತನ್ ಪೂಜಾರಿ ಯವರಿಗೆ ಅಭಿನಂದನೆ.
ಬಿಜೆಪಿ ಡೊಂಬಿವಲಿ ದಕ್ಷಿಣ ಭಾರತೀಯ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ರತನ್ ಪೂಜಾರಿ ಯವರಿಗೆ ಅಕ್ಟೋಬರ್19 ರ ಗುರುವಾರ ಬಿಲ್ಲವರ ಅಸೋಸಿಯೇಶನ್ ಮುಂಬಯಿ, ಡೊಂಬಿವಲಿ ಸ್ಥಳೀಯ ಕಛೇರಿಯ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಭಾರತ್ ಬ್ಯಾಂಕ್‌ನ ನೂತನ ನಿರ್ದೇಶಕರು ಹಾಗೂ ನೂತನ ಕಾರ್ಯಾಧ್ಯಕ್ಷರಾದ ಶ್ರೀ.ಸೂರ್ಯಕಾಂತ್ ಜಯ ಸುವರ್ಣ, ಡೊಂಬಿವಲಿ ಶಾಖೆಯ ಭಾರತ್ ಬ್ಯಾಂಕ್ ಸಿಬ್ಬಂದಿಗಳು, ಕರ್ನಾಟಕ ಸಂಘ ಡೊಂಬಿವಿಲಿ, ಬಂಟ್ಸ್ ಸಂಘ ಡೊಂಬಿವಿಲಿ, ಹೋಟೆಲ್ ಅಸೋಸಿಯೇಶನ್ ಡೊಂಬಿವಿಲಿ, ಶ್ರೀ ಮಹಾವಿಷ್ಣು ಮಂದಿರ ಡೊಂಬಿವಿಲಿ, ಶ್ರೀ ರಾಧಾ ಕೃಷ್ಣಮಂದಿರ, ಸಾಯಿನಾಥ ಮಿತ್ರ ಮಂಡಲಿ ಡೊಂಬಿವಲಿ, ಜಗತ್ ಜ್ಯೋತಿ ಕಲಾವೃಂದ ಡೊಂಬಿವಲಿ,ಹಾಗೂ ಡೊಂಬಿವಲಿಯ ಇನ್ನಿತರ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಅಭಿನಂದನೆ ಸ್ವೀಕರಿಸಿದ ರತನ್ ಪೂಜಾರಿಯವರು ಇವರೆಲ್ಲರಉಪಸ್ಥಿತಿಯಲ್ಲಿ ಅಭಿನಂದನೆ ಸ್ವೀಕರಿಸಿ ರುವುದು ಅತ್ಯಂತ ಗೌರವಯುತವಾಗಿದೆ .ಡೊಂಬಿವಿಲಿ ಸ್ಥಳೀಯ ಕಛೇರಿಯ ಗೌರವ ಕಾರ್ಯಾಧ್ಯಕ್ಷ ದೇವರಾಜ್ ಪೂಜಾರಿ, ಕಾರ್ಯಾಧ್ಯಕ್ಷ ಶ್ರೀ ಚಂದ್ರಹಾಸ್ ಪಾಲನ್ ಮತ್ತು ಕಾರ್ಯದರ್ಶಿ ಶ್ರೀ ಸಚಿನ್ ಪೂಜಾರಿ ಅವರಿಗೆ ವಿಶೇಷ ಧನ್ಯವಾದಗಳು ಎಂದರು.
Post a Comment