ಅ.15. ಭಾಯಂದರ್ ಅಯ್ಯಪ್ಪ ಆರಾಧನಾ ಭಕ್ತ ಮಂಡಳಿಯ ವಾರ್ಷಿಕ ಮಹಾಸಭೆ.

ಮುಂಬಯಿ, ಅ.12. ಭಾಯಂದರ್ ಪೂರ್ವದ ಶ್ರೀ ಅಯ್ಯಪ್ಪ ಆರಾಧನಾ ಭಕ್ತ ಮಂಡಳಿಯ ವಾರ್ಷಿಕ ಮಹಾಸಭೆಯು ಆದಿತ್ಯವಾರ ಅ.15ರಂದು ಸಾಯಂಕಾಲ 5 ಗಂಟೆಗೆ ಸರಿಯಾಗಿ ನವಘರ್ ಪೋಲಿಸ್ ಸ್ಟೇಶನ್ ಪಕ್ಕದಲ್ಲಿರುವ ಅಯ್ಯಪ್ಪ ಮಂದಿರದ ವಠಾರದಲ್ಲಿ ಮಂಡಳಿಯ ಅದ್ಯಕ್ಷ ಸುಕೇಶ್ ಶೆಟ್ಟಿಯವರ ಅದ್ಯಕ್ಷತೆಯಲ್ಲಿ ಜರಗಲಿರುವುದು. 

ಈ ಸಂಧರ್ಭದಲ್ಲಿ ಗತವರ್ಷದ ವರದಿ ಹಾಗೂ ಆಯವ್ಯಯ ಪಟ್ಟಿಯನ್ನು ಮಂಡಿಸಲಾಗುವುದು. ಮುಂದಿನ ವರ್ಷಗಳ ಆಡಳಿತಕ್ಕೆ ನೂತನ ಕಾರ್ಯಕಾರಿ ಸಮಿತಿ ಮತ್ತು ಉಪಸಮಿತಿಗಳನ್ನು ರಚಿಸಲಾಗುವುದು. ಮಂಡಳಿಯ 18 ನೇ ವಾರ್ಷಿಕ ಮಹಾಪೂಜೆಯನ್ನು ವಿಜ್ರಂಭಣೆಯಿಂದ ಆಚರಿಸುವರೇ ರೂಪುರೇಖೆಗಳ ಬಗ್ಗೆ ಚರ್ಚಿಸಲಾಗುವುದು. 

ಈ ಸಭೆಯಲ್ಲಿ ಮಂಡಳಿಯ ಎಲ್ಲಾ ಸದಸ್ಯರು, ಸ್ವಾಮಿಗಳು ಹಾಗೂ ಆರಾಧನಾ ಫ್ರೆಂಡ್ಸ್ ನ ಸದಸ್ಯೆಯರು, ಭಜನಾ ಸಮಿತಿಯ ಸದಸ್ಯರು ಉಪಸ್ಥಿತರಿರಬೇಕಾಗಿ ಮಂಡಳಿಯ ಕಾರ್ಯದರ್ಶಿ ಸುಧಾಕರ ಪೂಜಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

No comments

Powered by Blogger.