ಕುಲಾಲ ಸಂಘ ನಾನಿಲ್ತಾರ್ ಮುಲ್ಲಡ್ಕ ಮುಂಡ್ಕೂರು ವಾರ್ಷಿಕ ಮಹಾಸಭೆ.



ಕುಲಾಲ ಸಂಘ ನಾನಿಲ್ತಾರ್ ಮುಲ್ಲಡ್ಕ ಮುಂಡ್ಕೂರು  ವಾರ್ಷಿಕ ಮಹಾಸಭೆ.
 ಒಗ್ಗಟ್ಟಿನಲ್ಲಿ ಸಮಾಜವನ್ನು ಮುನ್ನಡೆಸುವ:
ಐತು ಆರ್ ಮೂಲ್ಯ ಮುಂಡ್ಕೂರು

ಮುಂಡ್ಕೂರು ಅ 15. ಸಮಾಜದ ಬಂಧುಗಳು ಒಗ್ಗಟ್ಟಾಗಿ ಕಾರ್ಯನಿರ್ವಹಿಸಿದಾಗ ಸಂಘ ಬಲಿಷ್ಠ ಗೊಳ್ಳುತ್ತದೆ ಎಲ್ಲರೂ ಒಗ್ಗಟ್ಟಿನಿಂದ ಸಮಾಜವನ್ನು ಮುನ್ನಡೆಸಿ ಸಂಘ ನಡೆಸುವ ಎಲ್ಲಾ ಸೇವಾ ಕಾರ್ಯಗಳಿಗೆ ನನ್ನ ಸದಾ ಬೆಂಬಲವಿದೆ ಎಂದುಕುಲಾಲ ಸಂಘ ನಾನಿಲ್ತಾರ್
ಗೌರವಾಧ್ಯಕ್ಷ.   ಮುಂಬೈಯ ಜೋಗೇಶ್ವರಿ ಜೈ ಕೊಚ್ ನ ದೇವಿಪ್ರಸಾದ್ ಹೋಟೆಲ್  ಮಾಲಕ  ಐತು ಆರ್ ಮೂಲ್ಯಮುಂಡ್ಕೂರು ನುಡಿದರ.

  ಅವರು ಅ    1 ರಂದು ಕುಲಾಲ ಸಂಘ ನಾನಿಲ್ತಾರ್ ಮುಲ್ಲಡ್ಕ ಮುಂಡ್ಕೂರು ಇದರ  35ನೇ ವರ್ಷದ ವಾರ್ಷಿಕ ಮಹಾಸಭೆ ಮತ್ತುಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಸಂಘದ ಅಧ್ಯಕ್ಷರಾದ  ಕುಶ ಆರ್ ಮೂಲ್ಯಇನ್ನಾರವರ ಅಧ್ಯಕ್ಷತೆ ವಹಿಸಿ ಸಮಾಜದ ಸಹಕಾರಿ ಸಂಸ್ಥೆ ಸ್ಥಾಪನೆಗೆ  ಸರ್ವರ ಸಹಕಾರವನ್ನು ಕೋರಿದರು.
 ಬೆಂಗಳೂರು ಸಂಘದ ಅಧ್ಯಕ್ಷರಾದ  ವಿಠಲ ಮೂಲ್ಯ ಕನೀರ ತೋಟ ಕುಲಾಲ ಸಮುದಾಯವನ್ನು ಪ್ರವರ್ಗ 1 ಗೆ ಸೇರ್ಪಡೆ ಹಾಗೂ ಹಂಪಿ ವಿಶ್ವವಿದ್ಯಾಲಯದಲ್ಲಿ ಕುಂಬಾರರ ಕುಲ ಶಾಸ್ತ್ರೀಯ ಅಧ್ಯಯನ ಪೀಠ  ರಚನೆಗೊಂಡಿದ್ದು ಕುಂಬಾರ ಸಮಗ್ರ ವರದಿಯನ್ನು ಸರ್ಕಾರಕ್ಕೆ ವರದಿ ಮಾಡಲಿದೆ  ಎಂದು ತಿಳಿಸಿದರು.
ಮುಂಬಯಿ ನಾನಿಲ್ತಾರ್ ಅಭಿಮಾನಿ ಬಳಗ ಸಂಚಾಲಕರದ ಕೃಷ್ಣ ಮೂಲ್ಯ ನಾಲಸೂಪರ  ಮಾತನಾಡಿ
ಮುಂಡ್ಕೂರು ಶ್ರೀ ಅಮ್ಮನವರು ಆಶೀರ್ವಾದದಲ್ಲಿ ಸಂಘದ ಯೋಜನೆಗಳಿಗೆ ಮುಂಬೈಯಿಂದ ಸಹಕಾರ ನೀಡುತ್ತೇವೆ ಎಂದು ನುಡಿದರು 

 ಅತ್ಯುತ್ತಮ ಉಡುಪಿ ಜಿಲ್ಲಾ ಶಿಕ್ಷಕ ಪ್ರಶಸ್ತಿ ಪುರಸ್ಕೃಷ್ಟರಾದ  ಶ್ರೀರಮೆಶ್ ಕುಲಾಲ್ ಸಿದ್ದಾಪುರ.... ಕಾಂತಾವರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪ್ರಭಾಕರ್ ಕುಲಾಲ್.  ಟೈಲರ್ ಎಸೋಸಿಯೇಷನ್   ಅಧ್ಯಕ್ಷ ರಮಾನಂದ್ ಮೂಲ್ಯ. ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ತುಳು ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಕು ರಶ್ಮೀತ ರಮೇಶ್ ಮೂಲ್ಯ. ಕರಾಟೆ ಸ್ಪರ್ಧೆಯಲ್ಲಿ ನಾಲ್ಕು ಚಿನ್ನದ ಪದಕ ಪಡೆದ ಮೋಕ್ಷಿತ್ ಕುಲಾಲ್  ಇವರನ್ನು ಸನ್ಮಾನಿಸಲಾಯಿತು.

 ಕುಲಾಲ ಸಂಘದ  ಶ್ರೀ ದುರ್ಗಾ ಕುಣಿತ ಭಜನೆಯ ಶಿಕ್ಷಕರಾದ ರಾಜೇಂದ್ರ ಶೆಟ್ಟಿಗಾರ್ ಅವರನ್ನು ಸನ್ಮಾನಿಸಲಾಯಿತು.

2023-25ರ ನೂತನ ಕಾರ್ಯಕಾರಿ ಮಂಡಳಿ ಅಯ್ಕೆ ಮಾಡಲಾಯಿತು ಅಧ್ಯಕ್ಷರಾಗಿ ಜಯರಾಮ್ ಕುಲಾಲ್. ಯುವ ವೇದಿಕೆ ಅಧ್ಯಕ್ಷರಾಗಿ ಲೋಕೇಶ್ ಕುಲಾಲ್ ಮುಂಡ್ಕೂರು.ಮಹಿಳಾ ಘಟಕ ಅಧ್ಯಕ್ಷೆ ಯಾಗಿ ಪ್ರತಿಮಾ ಶ್ರೀಧರ್ ಆಯ್ಕೆ ಮಾಡಲಾಯಿತು 

ವೇದಿಕೆ ಯಲ್ಲಿ   ಮಾಜಿ ಅಧ್ಯಕ್ಷ ಮಂಜಪ್ಪ ಮೂಲ್ಯ. ಉಪಾಧ್ಯಕ್ಷರಾದ ಬೊಗ್ಗು  ಮೂಲ್ಯ ಬೇಲಾಡಿ. ಕಾರ್ಯದರ್ಶಿ ಆಶಾ ವರದರಾಜ್, ಸುಧಾಕರ ಕುಲಾಲ್ ದೀಪಕ್ ಬೆಳ್ಮಣ್, ರಾಜೇಶ್ ಕುಲಾಲ್, ಸುಧಾಕರ್ ಕುಲಾಲ್ ಸಂತೋಷ್ ಕುಲಾಲ್ ಅಗ್ಗರಟ್ಟ ಉಪಸ್ಥಿತರಿದ್ದರು...

ಕುಮಾರಿ ಹರ್ಷಿತಾ,‌ ಮತ್ತು ಶಿಕ್ಷಕರಾದ ಶ್ರೀಕಾಂತ್ ಕಾರ್ಯಕ್ರಮ ನಿರೂಪಿಸಿ ..  ದೈಹಿಕ ಶಿಕ್ಷಕರಾದ ದಿನೇಶ್ ಕುಲಾಲ್ ವಂದಿಸಿದರು,...


No comments

Powered by Blogger.