ಅ.29.ವಿದ್ಯಾದಾಯಿನಿ ಸಭಾದ ಶತಮಾನೋತ್ಸವ ಸಮಾರಂಭ. ತುಳು ಕನ್ನಡಿಗರಿಂದ ಜಾನಪದ ನೃತ್ಯ ಸ್ಪರ್ಧೆಗೆ ಆಹ್ವಾನ.

ಅ.29.ವಿದ್ಯಾದಾಯಿನಿ ಸಭಾದ ಶತಮಾನೋತ್ಸವ ಸಮಾರಂಭ.

ತುಳು ಕನ್ನಡಿಗರಿಂದ ಜಾನಪದ ನೃತ್ಯ ಸ್ಪರ್ಧೆಗೆ ಆಹ್ವಾನ.

 ಮುಂಬಯಿ. ಸೆ.9. ಮುಂಬಯಿಯ ಪ್ರತಿಷ್ಠಿತ ಕೆನರಾ ವಿದ್ಯಾದಾಯಿನಿ ರಾತ್ರಿ ಶಾಲಾ ಸಂಚಾಲಕತ್ವದ ವಿದ್ಯಾದಾಯಿನಿ ಸಭಾವು ಶತಮಾನ ಪೂರೈಸಿದ್ದು , ಅದರ ಉತ್ಸವವನ್ನು ಇದೀಗ ವಿಜ್ರಂಭಣೆಯಿಂದ ಆಚರಿಸಲು ಅಣಿಯಾಗಿದೆ. ಈ ಸಮಾರಂಭವು ಅ.29ರಂದು ದಿನಪೂರ್ತಿ ಸಾಂತಾಕ್ರೂಸ್ ಬಿಲ್ಲವ ಭವನದ ಸಭಾಂಗಣದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ  ನಡೆಯಲಿದೆ. ಅಂದು ಬೆಳಿಗ್ಗೆ 9 ರಿಂದ ಮದ್ಯಾಹ್ನ 12.30ರವರಿಗೆ ತುಳುಕನ್ನಡ ಶಾಲೆ ಹಾಗೂ ಸಂಘಸಂಸ್ಥೆಗಳಿಗೆ ಜಾನಪದ ನೃತ್ಯ ಸ್ಪರ್ಧೆಯನ್ನು ಆಯೋಜಿಸಿದೆ. 

 ಈ ಸ್ಪರ್ಧೆಯಲ್ಲಿ ಕೇವಲ ಮೊದಲು ಹೆಸರು ಕೊಟ್ಟ ಹತ್ತು ತಂಡದವರಿಗೆ ಮಾತ್ರ ಭಾಗವಹಿಸಲು ಅವಕಾಶವಿದೆ. ಈ ಸ್ಪರ್ಧೆಯ ಮೇಲ್ವಿಚಾರಣೆಯನ್ನು ಹಾಗೂ ಪ್ರಥಮ( Rs.15000),ದ್ವಿತೀಯ (Rs.10000) ಮತ್ತು ತೃತೀಯ(Rs.5000) ಬಹುಮಾನವನ್ನು ಕನ್ನಡ ಜಾನಪದ ಪರಿಷತ್, ಬೆಂಗಳೂರು ಇದರ ಮಹಾರಾಷ್ಟ್ರ ಘಟಕದ ವತಿಯಿಂದ ಮಾಡಲಿದ್ದಾರೆ. ಭಾಗವಹಿಸುವ ಎಲ್ಲಾ ತಂಡಗಳಿಗೂ ಸಮಾಧಾನಕರ ಬಹುಮಾನ ಹಾಗೂ ಪಾರಿತೋಷಕವನ್ನು ಸಂಸ್ಥೆಯ ವತಿಯಿಂದ ನೀಡಲಾಗುವುದು.ಮದ್ಯಾಹ್ನ ಮೇಲೆ ನಡೆಯಲಿರುವ ಸಭಾಕಾರ್ಯಕ್ರಮದಲ್ಲಿ ಬಹುಮಾನವನ್ನು ವಿತರಿಸಲಾಗುವುದು ಹಾಗೂ ಆ ತನಕ ಎಲ್ಲಾ ಸ್ಪರ್ಧಾಳುಗಳ ಉಪಸ್ಥಿತಿ ಅಗತ್ಯ. ಬೆಳಗ್ಗಿನ ಉಪಹಾರ, ಮದ್ಯಾಹ್ನ ಹಾಗೂ ಸಾಯಂಕಾಲದ ಊಟದ ವ್ಯವಸ್ಥೆ ಮಾಡಲಾಗುವುದು. 

ಈ ಸ್ಪರ್ಧೆಯು ತುಳುಕನ್ನಡಿಗರಿಗಾಗಿ ಆಯೋಜಿಸಲಾಗಿದ್ದು ಸ್ಪರ್ಧಾಳುಗಳ ಆಧಾರ್ ಕಾರ್ಡ್ ಪ್ರವೇಶ ಪತ್ರದಲ್ಲಿ ನೀಡುವುದು ಅಗತ್ಯ.  ಸ್ಪರ್ಧೆಯ ತಂಡದಲ್ಲಿ ಗರಿಷ್ಟ ಎಂಟು ಜನ ಭಾಗವಹಿಸಬಹುದು. ಹಾಡು ಹಾಗೂ ನೃತ್ಯ ಕೇವಲ ಜಾನಪದಕ್ಕೆ ಅನುಗುಣವಾಗಿದ್ದು ಹಾಡನ್ನು ಪ್ರತ್ಯೇಕ ಪೆನ್ಡ್ರೈವ್ ಮುಖಾಂತರ ಸಂಸ್ಥೆಗೆ ಕಳಿಸಬೇಕು. ತಮ್ಮ ಹೆಸರು ಹಾಗೂ ಹೆಚ್ಚಿನ ಮಾಹಿತಿಗಾಗಿ ಮೊ.ಕ್ರಮಾಂಕ 9324759589 ಅಥವಾ 8850067062 ನಲ್ಲಿ ಸಂಪರ್ಕಿಸಬೇಕಾಗಿ ಸಂಸ್ಥೆಯ ಅದ್ಯಕ್ಷ ಪುರುಷೋತ್ತಮ ಎಸ್. ಕೋಟ್ಯಾನ್, ಕಾರ್ಯದರ್ಶಿ ಚಿತ್ರಾಪು ಕೆ.ಎಮ್.ಕೋಟ್ಯಾನ್ ಮತ್ತು ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

No comments

Powered by Blogger.