ಪಿತೃಪಕ್ಷದಲ್ಲಿ ಅಗಲಿದ ಆತ್ಮಗಳಿಗೆ ಶ್ರಾದ್ಧ ಮಾಡುವುದು .

ಪಿತೃಪಕ್ಷದಲ್ಲಿ  ಅಗಲಿದ ಆತ್ಮಗಳಿಗೆ ಶ್ರಾದ್ಧ ಮಾಡುವುದು .

ಜಯ  ಸಿ ಪೂಜಾರಿ

ಮಹಾಲಯ ಅಮಾವಾಸ್ಯೆ ( ಮಾಲಯ ಅಮಾವಾಸ್ಯೆ) ಹತ್ತಿರ ಬರುತ್ತಾ ಉಂಟು . ಇದೇ ಹದಿನಾಲ್ಕನೇ  ತಾರೀಕು ಶನಿವಾರದಂದು ಮಾಲಯ ಅಮಾವಾಸ್ಯೆ ಪ್ರತಿ ಮನೆಯಲ್ಲೂ ಹಿರಿಯರೆಲ್ಲರು ಅಗಲಿರುತ್ತಾರೆ . ಅವರಿಗೆ  ಈಗ  ಮನೆಯಲ್ಲಿ  ಜಿವಂತಾ ಇರುವ ಸಂಬಂದಿಕರು ಶ್ರಾದ್ಧ ಮಾಡುವುದು ಅವರವರ ಕರ್ತವ್ಯ ಕೂಡ ಆಗಿರುತ್ತದೆ . ಯಾಕಂದರೆ  ಅಮಾವಾಸ್ಯೆ  ಎಂಬುದಕ್ಕೆ  ವಿಶೇಷ  ಅರ್ಥವಿದೆ .  ಮನುಷ್ಯರು   ಹುಟ್ಟಿದವರು ಒಂದಲ್ಲ ಒಂದು ದಿನ  ದೇವರ  ಪಾದ ಸೇರಲೇ ಬೇಕು .

 ಜೀವವನ್ನು  ಬಿಟ್ಟಾಗ  ಮನೆಯವರು  ಸಂಬಂದಿಕರು  ಸ್ವಲ್ಪ ದಿನ ಕಣ್ಣೀರುಡುವುದು ಸಹಜ . ಸ್ವಲ್ಪ ದಿನದ ನಂತರ ಎಲ್ಲವೂ ಮರೆತು ಹೋಗುತ್ತದೆ .ದಿನ ಉರುಳಿದಂತೆ ಅವರ ಪ್ರೀತಿ ವಾತ್ಸಲ್ಯ ಎಲ್ಲಾ ಹೋಗುತ್ತದೆ . ಅಲ್ಲಲ್ಲಿ ರಕ್ತ ಸಂಬಂದಿ ಮನೆಗಳಲ್ಲಿ ನೆಮ್ಮದಿ ಇರುವುದಿಲ್ಲ . ಇದಕ್ಕೆ ಕಾರಣ ಸತ್ತವರ ಪಿತೃಗಳೇ  ಕಾರಣ. ಕೆಲವೊಂದು  ರಕ್ತ ಸಂಬಂಧಿಗಳಿಗೆ  ಆತ್ಮಗಳು  ಪೀಡೆ ಕೊಡುವುದು  ಇನ್ನಿತರ ಪೀಡೆಗಳು  ಕಾಣ ಸಿಗುವುದು  . ಕೆಲವರು ಅದಕ್ಕೆಲ್ಲ ಮಂತ್ರವಾದಿಗಳ ಹತ್ತಿರ ಹೋಗಿ  ತಡೆಗಟ್ಟುವುದು  ಏನೇನೋ ಮಾಡುತ್ತಾರೆ . ಇದು  ಊರುಗಳಲ್ಲಿ  ಹಳ್ಳಿ ಹಳ್ಳಿಗಳಲ್ಲಿ ಅಧಿಕ  ಪ್ರಕರಣಗಳು  ನಡೆಯುತ್ತವೆ . ಪಿತೃ ಪಕ್ಷ  ಬರುವ ಸಮಯಗಳಲ್ಲಿ     ಹಿರಿಯರು ಅವರ ಆತ್ಮಗಳೆಲ್ಲ  ದೈವ ದೇವರುಗಳ  ಹಿಡಿತದಿಂದ  ಹೊರ ಬಂದು  ಮನೆ ಮಂದಿಗಳನ್ನು ನೋಡಲು ಮನೆ ಬಾಗಿಲಿನ ದ್ವಾರದಲ್ಲಿಯೇ  ಬಂದು  ಆಸೀನರಾಗುತ್ತಾರೆ . ಎಂಬುದು  ಬಲ್ಲವರು  ಹೇಳುತ್ತಾರೆ .

 ಮನೆಯಲ್ಲಿ  ಹಿರಿಯ  ಕಿರಿಯ ಪಿತೃಗಳು ಅಗಲಿದವರೆಲ್ಲ ಮನೆಯವರು  ಬಡಿಸಿದ  ಭೋಜನವನ್ನು  ಸವಿದು ಅಂದು ಮನೆಯವರಿಗೆಲ್ಲ  ಸುಖ ಶಾಂತಿ  ನೆಮ್ಮದಿ  ಸಮೃದ್ಧಿ ಇರಲಿ  ಎಂದು  ಆಶೀರ್ವದಿಸಿ  ಕಾಗೆಗಳಿಗೆ ಅನ್ನ ನೀಡಿದನ್ನು ಕಂಡು  ಹೊರಟು  ಹೋಗುತ್ತಾರೆ  ಎಂದು ನಂಬಿಕೆ ಯೊಂದಿಗೆ  ಶ್ರಾದ್ಧ ಮಾಡುವ  ಅಗತ್ಯವಿರುತ್ತದೆ .  ಈ ಶ್ರಾದ್ಧವನ್ನು ಈಗ  ಮನೆಯ ಹಿರಿಯರೆಲ್ಲ ಮಾಡುತ್ತಾ ಇದ್ದರೆ ಈಗಿನ  ಯುವ ಜನಾಂಗ  ಅದನ್ನು ಹಿಂಬಾಲಿಸಿಕೊಂಡು  ಬರಬಹುದು .   ಆದರೂ  ಈಗಿನ  ಯುವ ಜನಾಂಗಕ್ಕೆ  ಇದೆಲ್ಲ  ಅರ್ಥ ಆಗುವುದೂ ಇಲ್ಲ  ಮತ್ತು  ಅವರು ನಂಬುವುದು ಇಲ್ಲ . 

ಕಾಂತಾರ  ಸಿನಿಮಾ ಬಂದ ಮೇಲೆ  ಯುವ ಜನಾಂಗ  ದೈವಗಳನ್ನು  ನಂಬಲು  ಪ್ರಯತ್ನಿಸಿದರು.  ಇನ್ನು   ಪಿತೃ ಪಕ್ಷ ಶ್ರಾದ್ಧ ಬಗ್ಗೆ  ಯಾರಾದರೂ  ಸಿನಿಮಾ ಮಾಡಿದರೇನೇ  ಈಗಿನ ವಿದ್ಯಾವಂತ ಮಕ್ಕಳು  ನಂಬಿಕೆ ಇಡಬಹುದು . 
ಏನೇ  ಆಗಲಿ  ನಂಬಿಕೆನೇ  ಎಲ್ಲಾ ಸರ್ವಸ್ತ ಅಂದು ಕೊಂಡರೆ  ಎಲ್ಲವೂ ಇದೆ . ಬಗ್ಗಿದವನಿಗೆ  ಒಂದು  ಏಟು  ಜಾಸ್ತಿ  ನಂಬದವನಿಗೆ  ಯಾವ ಪಿತೃಗಳೇ  ಎದುರಿಲ್ಲ .

ಜಯ  ಸಿ ಪೂಜಾರಿ

No comments

Powered by Blogger.