ಪುಸ್ತಕ, ಲೇಖನ ಬರೆಯುವ ಆಸಕ್ತಿ ಮೂಡಿದ್ದು ಹೇಗೆ ? ವಿಷಯ ಬಹಿರಂಗಪಡಿಸಿದ ಸುಧಾ ಮೂರ್ತಿ
ಬೆಳಗಾವಿ ಅ.10: ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಹಾಗೂ ಲೇಖಕಿ ಸುಧಾ ಮೂರ್ತಿ ಅವರು ಬೆಳಗಾವಿಯ ಸಪ್ನ ಬುಕ್ ಹೌಸ್‌ನಲ್ಲಿ ಭಾನುವಾರ ಬೆಳಗಾವಿ ಬುಕ್ ಕ್ಲಬ್ ಸದಸ್ಯರೊಂದಿಗೆ ಸಂವಾದ ನಡೆಸಿದರು. ಸುಧಾ ಮೂರ್ತಿಯವರು ತಾವು ಪುಸ್ತಕ ಮತ್ತು ಲೇಖನಗಳನ್ನು ಬರೆಯಲು ಆರಂಭಿಸಿದ್ದು ಹೇಗೆ, ಹಿಂದಿನ ಕಾರಣವೇನು ಎಂಬುವುದರ ಬಗ್ಗೆ ತಿಳಿಸಿದರು. ಅಲ್ಲದೆ ಬರೆಯಲು ಪ್ರಾರಂಭಿಸಿದ್ದಾಗಿನಿಂದ ತಮಗೆ ಆದ ಅನುಭವಗಳನ್ನು ಸದಸ್ಯರೊಂದಿಗೆ ಹಂಚಿಕೊಂಡರು.
“ತಮ್ಮ ಜೀವನದಲ್ಲಿ ಆದ ಧನಾತ್ಮಕ ಅನುಭವಗಳು ಮತ್ತು ತಮ್ಮ ಕೆಲಸಗಳಿಗೆ ಧನಾತ್ಮಕ ಪ್ರತಿಕ್ರಿಯೆ ಬರಲು ಪ್ರಾರಂಭವಾದವು. ಇದರಿಂದ ಪ್ರೇರಣೆಗೊಂಡು ನಿಯಮಿತವಾಗಿ ಬರೆಯಲು ಆರಂಭಿಸಿದೆ” ಎಂದು ಲೇಖಕಿ ಸುಧಾ ಮೂರ್ತಿಯವರು ತಿಳಿಸಿದರು.
ಬೆಳಗಾವಿಯ ಬುಕ್ ಕ್ಲಬ್ ಜನರಲ್ಲಿ ಸಾಹಿತ್ಯದ ಪ್ರೀತಿಯನ್ನು ಬೆಳೆಸಲು ಮತ್ತು ಪುಸ್ತಕ ಉತ್ಸಾಹಿಗಳಿಗೆ ಉತ್ತಮ ವೇದಿಕೆಯಾಗಿದೆ. ಬುಕ್ ಕ್ಲಬ್ ಪ್ರತಿ ಭಾನುವಾರ ಸ್ನೇಹಶೀಲ ಕೆಫೆಗಳಿಂದ ಹಿಡಿದು ಸಮುದಾಯ ಭವನಗಳವರೆಗೆ ವಿವಿಧ ಸ್ಥಳಗಳಲ್ಲಿ ಭೇಟಿ ನೀಡಿ ಸಾಹಿತ್ಯದ ಅರಿವು ಮೂಡಿಸುತ್ತದೆ.
Post a Comment