ಭಾವಿ ಪರ್ಯಾಯ ಶ್ರೀಪುತ್ತಿಗೆ ಶ್ರೀಪಾದರಿಗೆ ಗೋಕುಲದಲ್ಲಿ ಪಾದಪೂಜೆ - ತೊಟ್ಟಿಲು ಪೂಜೆ.


ಭಾವಿ ಪರ್ಯಾಯ ಶ್ರೀಪುತ್ತಿಗೆ  ಶ್ರೀಪಾದರಿಗೆ ಗೋಕುಲದಲ್ಲಿ ಪಾದಪೂಜೆ  - ತೊಟ್ಟಿಲು ಪೂಜೆ.


ಭಗವದ್ಗೀತೆಯು ಪ್ರತಿಯೊಂದು ಸಮಸ್ಯೆಯನ್ನು ಬಗೆಹರಿಸಲು ಮುಖ್ಯ ಪಾತ್ರವನ್ನು ವಹಿಸುತ್ತದೆ. :
  ಪರಮಪೂಜ್ಯ  ಶ್ರೀ ಸುಶ್ರೀಂದ್ರತೀರ್ಥಶ್ರೀಪಾದಂಗಳ
 
 ಮುಂಬಯಿ : ಭಾವಿ ಶ್ರೀಪುತ್ತಿಗೆ ಮಠಾಧೀಶರಾದ ಪರಮಪೂಜ್ಯ ಶ್ರೀಸುಗುಣೇಂದ್ರತೀರ್ಥ ಶ್ರೀಪಾದಂಗಳವರು ತಮ್ಮ ಶಿಷ್ಯರಾದ ಕಿರಿಯ ಪಟ್ಟದ ಪರಮಪೂಜ್ಯ  ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದಂಗಳವರೊಡನೆ  ಅ. 7 ರಂದು  ಸಾಯನ್ ನಲ್ಲಿರುವ  ಹನುಮಾನ್ ಮಂದಿರದಿಂದ  ಭಕ್ತರ ಭಜನೆ, ಕೊಂಬು ಚೆಂಡೆ ವಾದ್ಯಗಳ ಗಳೊಂದಿಗೆ ಶೋಭಾ ಯಾತ್ರೆ ಮೂಲಕ ಗೋಕುಲದ   ಶ್ರೀಗೋಪಾಲಕೃಷ್ಣನ ಸನ್ನಿಧಾನದ ಕರೆತರಲಾಯಿತು.  


ಸ್ವಾಮೀಜಿಯವರು  ಕೃಷ್ಣನ ಸಂದೇಶವನ್ನು  ಭಗವದ್ಗೀತೆ ಕೋಟಿ ಯಜ್ಞದ ಮೂಲಕ ಜಗತ್ತಿಗೆ ಸಾರಿದ್ದಾರೆ : ಡಾ.  ಸುರೇಶ್ ರಾವ್.

ಗೋಕುಲಕ್ಕೆ ಬರಮಾಡಿಕೊಂಡ ಇಬ್ಬರು  ಸ್ವಾಮೀಜಿಯವರನ್ನು  ವಿಶೇಷವಾದ ಆಗಿ  ಪಾದಪೂಜೆ ಮಾಡಿದ ಬಳಿಕ ಸ್ವಾಗತಿಸುತ್ತಾ ಗೋಕುಲ ಪ್ರತಿಯೊಂದು ಸೇವಾ ಕಾರ್ಯದಲ್ಲಿ ಅಷ್ಟಮಠಗಳ ಸ್ವಾಮೀಜಿಯವರ ಅನುಗ್ರಹವಿರುತ್ತದೆ. ಪುತ್ತಿಗೆ ಮಠದ ಮಠಾಧೀಶರು ನಾಲ್ಕನೆಯ ಬಾರಿ ಪರಿಯಾಯಮಾಡುತ್ತಿದ್ದಾರೆ. ಅವರು ಜಗತ್ತಿಗೆ ಕೃಷ್ಣನ ಸಂದೇಶವನ್ನು ಸಾರುತ್ತ ಬಂದವರು ಮುಂದಿನ ವರ್ಷ ಪರ್ಯಾಯವನ್ನು ಮಾಡುತ್ತಿರುವ ಶ್ರೀಗಳ ಯೋಜನೆಗಳು ಉಡುಪಿಯ ಅಭಿವೃದ್ಧಿಗೆ ಪೂರಕವಾಗಲಿ ಎಂದು ನುಡಿದರು. 



 ಸ್ವಾಮೀಜಿ ಯವರು ಗೋಕುಲದ   ಶ್ರೀಗೋಪಾಲಕೃಷ್ಣನ ವಿಶೇಷ ಮಂಗಳಾರತಿ ನಡೆಸಿದರು. ನಂತರ  ಬಿ ಎಸ್ ಕೆ ಬಿ ಅಸೋಸಿಯೇಷನ್ ಅಧ್ಯಕ್ಷರಾದ ಡಾ . ಸುರೇಶ್ ರಾವ್ ಮತ್ತು ವಿಜಯಲಕ್ಷ್ಮಿ ಸುರೇಶ್ ರಾವ್ ದಂಪತಿಗಳು  ಶ್ರೀಗಳ ಪಾದಪೂಜೆಯನ್ನು ಮಾಡಿದರು

 
ಶ್ರೀಸುಗುಣೇಂದ್ರತೀರ್ಥಶ್ರೀಪಾದಂಗಳವರು ಆಶ್ರೀರ್ವಚನ ನೀಡುತ್ತಾ ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಉತ್ತಮವಾದ ಸಂದೇಶವನ್ನು ನೀಡಿದ್ದಾನೆ. ಮನುಷ್ಯನಿಗೆ ವೈಯಕ್ತಿಕ ಸಮಸ್ಯೆ , ಪರಿವಾರದ ಸಮಸ್ಯೆ  , ಸಾಮಾಜಿಕ ಸಮಸ್ಯೆ , ರಾಷ್ಟ್ರೀಯ ಅಥವಾ ಅಂತರಾಷ್ಟ್ರೀಯ ಸಮಸ್ಯೆ ಆಗಿರಬಹುದು ಎಲ್ಲಾ ಸಮಸ್ಯೆಯನ್ನು ಬಗೆಹರಿಸಲು ಭಗವದ್ಗೀತೆಯಲ್ಲಿ ನಮೂದಿಸಲಾಗಿದೆ.  ಭಗವದ್ಗೀತೆಯು ಪ್ರತಿಯೊಂದು ಸಮಸ್ಯೆಯನ್ನು ಬಗೆಹರಿಸಲು ಮುಖ್ಯ ಪಾತ್ರವನ್ನು ವಹಿಸುತ್ತದೆ. ಯಾವುದೇ  ಒತ್ತಡ ರಹಿತ ಜೀವನ ನಡೆಸಲು ಭಗವದ್ಗೀತೆಯಲ್ಲಿ ನೀಡಲಾಗಿದೆ. ಇದರಲ್ಲಿ ಸೂಕ್ತ ಸಂದೇಶವನ್ನು ನೀಡಿದ್ದಾರೆ. ಅನೇಕರು ತೊಂದರೆಯನ್ನು ಅನುಭವಿಸಲು ಕಾರಣ ಅವರು  ಇತರರೊಡನೆ ನೇರ ಸಂಪರ್ಕವನ್ನು ಬೆಳೆಸುವುದು. ಒಬ್ಬರು ಇನ್ನೊಬ್ಬರೊಂದಿಗೆ ನೇರವಾಗಿ ಸಂಪರ್ಕವನ್ನು ನಡೆಸಿದರೆ  ಅದು ಮನಸ್ಸಿಗೆ ಶಾಂತಿಯನ್ನು ನೀಡುವುದಿಲ್ಲ. ಒಬ್ಬರು ಇನ್ನೊಬ್ಬರಲ್ಲಿ ದೇವರ ಮುಖಾಂತರ ಹೊಂದಿದ ಸಂಪರ್ಕದಿಂದ ಸುಖವಾಗಿ ಬಾಳಲು ಸಾಧ್ಯ. ದೂರನಾಣಿಯಲ್ಲಿ ಮಾತನಾಡಿದಂತೆ.  ನೀವು ಇತರ ವ್ಯಕ್ತಿಯೊಂದಿಗೆ ಮಾತನಾಡಲು ಬಯಸುವ ಟೆಲಿಫೋನ್ ಸಂಪರ್ಕದಂತೆ , ನಂತರ ನೀವು ಫೋನ್ ಮುಖಾಂತರ ಉಪಗ್ರಹದ ಮೂಲಕ  ಸಂಪರ್ಕವನ್ನು ಹೊಂದಿ  ಇನ್ನೊಬ್ಬ ವ್ಯಕ್ತಿಯೊಂದಿಗೆ ಮಾತನಾಡುವಂತೆ.  ಕೃಷ್ಣ ಹೇಳುವಂತೆ ಸೆಟ್ ಲಾಯಿಟ್ ಮೂಲಕ ಸಂಪರ್ಕಿಸಿ ಕೃಷ್ಣ ನೇ ಉಪಗ್ರಹದಂತೆ. 
ಅದಕ್ಕಾಗಿಯೇ ಕೇಂದ್ರ ಬಿಂದುವಿನಲ್ಲಿ ದೇವರ ಸಂದೇಶ ಮತ್ತು ನಿಮಗೆ ವೈಯಕ್ತಿಕ ಕೇಂದ್ರ ಸ್ವಯಂ ಕೇಂದ್ರಿತ ಅಗತ್ಯವಿದ್ದರೆ ನೀವು ಎಲ್ಲವನ್ನೂ ಪೂರ್ಣಗೊಳಿಸುತ್ತೀರಿ. ಮನಸ್ಸಿಗೆ ಶಾಂತಿ ನೀಡುವ ಸಂದೇಶ ಬಗವದ್ಗೀರೆಯಲ್ಲಿದೆ. ನಾನು ಯಾವಾಗಲೂ ನಿಮ್ಮೊಂದಿಗಿದ್ದೇನೆ ನೀವು ಚಿಂತಿಸಬೇಕಾಗಿಲ್ಲ ಇದು ಶ್ರೀ ಕೃಷ್ಣನು ನೀಡಿದ ಸಂದೇಶ. ಈ ಸಂದೇಶವನ್ನು ಎಲ್ಲರಿಗೆ ತಿಳಿಸಿದಲ್ಲಿ ಎಲ್ಲರೂ ಸುಖ ವಾಗಿ ಜೀವಿಸಲು ಸಾಧ್ಯ. ಇದಕ್ಕಾಗಿಯೇ ನಾವು ಭಗವದ್ಗೀತೆಯನ್ನು ಎಲ್ಲೆಡೆ ಹರಡುವಂತೆ ಮಾಡುತ್ತೇವೆ.
ಕೆಲವರು ನನ್ನ ಕಾರು, ನನ್ನ ಮನೆ, ನನ್ನ ಬೆಕ್ಕು, ನನ್ನ ನಾಯಿ ಇವೆಲ್ಲವೂ ನನ್ನದೇ, ಆದರೆ ತನಗೆ ದೇವರು ಎಲ್ಲವೂ ಎಂದು ಬಾವಿಸುದಿಲ್ಲ.ನೀವು ಭಗವಂತನೇ ನನಗೆ ಸರ್ವಸ್ವ ಎಂದು ಭಾವಿಸಿದರೆ ಎಲ್ಲ ಕಾಲವೂ ಸುಖವಾಗಿರುವುದು. ಮಿಗಿಲಾಗಿ ಅದು ನನಗೆ ಸರ್ವಸ್ವ ಎಂದು ಭಾವಿಸಿದರೆ ಸದಾ ಚಿಂತೆಯಲ್ಲಿರುತ್ತೀರಿ.  ದೊಡ್ಡ ಮನೆಯನ್ನು ನಿರ್ಮಿಸುತ್ತೇವೆ ಆದರೆ ದೇವರಿಗಾಗಿ ದೊಡ್ಡ ಮನೆಯನ್ನು ನಿರ್ಮಿಸುದಿಲ್ಲ. ನಮ್ಮ ಸ್ನಾನಗೃಹ ದೇವರ ಕೋಣೆಗಿಂತ ದೊಡ್ಡದಾಗಿದೆ. ಅದಕ್ಕಾಗಿಯೇ ನಾವು ಯಾವಾಗಲೂ ಟೆನ್ಷನ್‌ನಲ್ಲಿರುತ್ತೇವೆ ಎಂದ ಸ್ವಾಮೀಜಿಯವರು ನಾವು ವಿಶೇಷ ಪುಸ್ತಕವನ್ನು ಪ್ರಕಟಿಸಿದ್ದೇವೆ ಮತ್ತು ನಾವು ವಿವಿಧ ಭಾಷೆಗಳಲ್ಲಿ ಅದನ್ನು ಪ್ರಕಟಿಸಿದ್ದೇವೆ  ಮತ್ತು ಯಾರು ಯಾವುದೇ ಭಾಷೆಯಲ್ಲಿ ಬರೆಯಲು ಸಿದ್ಧರಿದ್ದರೆ ನಾವು ಅವರಿಗೆ ಈ ಎರಡು ಪುಸ್ತಕಗಳನ್ನು ನೀಡಲಿದ್ದೇವೆ. ಆದ್ದರಿಂದ ಕೋಟಿ ಗೀತಾ ಲೇಖನ ಯಜ್ಞದ ಅಭಿಯಾನ ಪ್ರಾರಂಭಿಸಿದ್ದೇವೆ.  ನೀವು ಈ ಪುಸ್ತಕವನ್ನು ಪಡೆದುಕೊಳ್ಳಬೇಕು ಎಂದರು. 

ಮುಖ್ಯ ಅತಿಥಿಗಳಾಗಿ ಮಾನ್ಯ ಲೋಕಸಭಾ ಸದಸ್ಯ ರಾಹುಲ್ ಶಿವಾಲಿ, ವಿಧಾನಸಭಾ ಸದಸ್ಯರಾದ ತುಕಾರಾಂ ರಾಮಕೃಷ್ಣ ಕೋಟೆ, ಸಿದ್ದಿನಾಯಕ ಗಣಪತಿ ಮಂದಿರ ನ್ಯಾಸ ಇದರ ವಿಸ್ವಸ್ಥರಾದ ಶುಭೋದ ಶರತ್ ಆಚಾರ್ಯ,  ಉದಯ ಆಚಾರ್ಯ,  ಬಿ ಎಸ್ ಕೆ ಬಿ ಅಸೋಸಿಯೇಷನ್ಉಪಾಧ್ಯಕ್ಷರಾಗ ಳಾದ ವಾಮನ್ ಹೊಳ್ಳ. ಅವಿನಾಶ್ ಶಾಸ್ತ್ರಿ, ಕಾರ್ಯದರ್ಶಿ ಎ. ಪಿ ಕೆ. ಪೋತಿ, ಕೋಶಾಧಿಕಾರಿ ಸಿಎ ಹರಿದಾಸ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಗೋಪಾಲ್ ಆಚಾರ್ಯರು ನಿರೂಪಿಸಿದರು.ಕೋಶಾಧಿಕಾರಿ ಸಿಎ ಹರಿದಾಸ ಧನ್ಯವಾದ ನೀಡಿದರು.

ಸಭೆಯಲ್ಲಿ ಬಿಎಸ್‌ಕೆಪಿ ಅಸೋಸಿಯೇಷನ್  ಜತೆ ಕೋಶಾಧಿಕಾರಿ ಗಣೇಶ್ ಭಟ್, ಟ್ರಸ್ಟ್‌ನ ಕಾರ್ಯದರ್ಶಿ ಎಸ್‌. ರಾಮವಿಟ್ಠಲ ಕಲ್ಲೂರಾಯ, ವಿಶ್ವಸ್ಥ ಸದಸ್ಯರಾದ ಕೃಷ್ಣ ಆಚಾರ್ಯ, ಶೈಲಿ ರಾ ವ್, ಕೃಷ್ಣರಾಜ್ ತಂತ್ರಿ, ಅನಿಲ್ ಗುಪ್ತಾ, ಮಧುಸೂದನ್ ಅಗರ್ವಾಲ್, ಕಿಶನ್ ಸಿಂಘಾಲ್, ಮಹಿಳಾ ವಿಭಾಗದ ಅಧ್ಯಕ್ಷೆ ಸಹನಾ ಎ, ಪೋತಿ, ಗೋಕುಲ ಭಜನ ಮಂಡಳಿ ಸಮಿತಿ ಕಾರಾಧ್ಯಕ್ಷ ಐ. ಕೆ. ಪ್ರೇಮಾ ಎಸ್. ರಾವ್, ಮಾಜಿ ಅಧ್ಯಕ್ಷ ಕೆ. ಸುಬ್ಬರಾವ್‌,ಪೇಜಾವರ ಮಠದ ಪ್ರಭಂಧಕರದ ಡಾ ರಾಮದಾಸ್ ಉಪಾಧ್ಯಾಯ, ಪ್ರಕಾಶ್ ಆಚಾರ್ಯ  , ಉದ್ಯಮಿಬಿ.ಆರ್. ಶೆಟ್ಟಿ, ಹಿರಿಯರ ವಿದ್ವಾಂಸರಾದ ಶ್ರೀ ನಾಗರಹಳ್ಳಿ ಪ್ರಹ್ಲಾದಾಚಾರ್ಯ .ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ  ಐಕಳ ಹರೀಶ್ ಶೆಟ್ಟಿ, ಉಪಾಧ್ಯಕ್ಷ  ಕರ್ನಿರೆ ವಿಶ್ವನಾಥ್ ಶೆಟ್ಟಿ, ಕೋಶಾಧಿಕಾರಿ  ಉಳ್ತುರು ಮೋಹನದಾಸ್ ಶೆಟ್ಟಿ, ಬಂಟ್ ಸಂಘ ಮುಂಬಯಿ ಕ್ರೀಡಾ ವಿಭಾಗದ ಕಾರ್ಯಾಧ್ಯಕ್ಷ ಗಿರೀಶ್ ಶೆಟ್ಟಿ ತೆಳ್ಳಾರ್,  ಶ್ರೀಮಠದ ದಿವಾನರಾದ ಶ್ರೀನಾಗರಾಜ ಆಚಾರ್ಯರು ಶ್ರೀಮಠದ ,  ಶ್ರೀ ಅದಮಾರು ಮಠದ   ರಾಜೇಶ ಭಟ್,   ಹಿರಿಯ ವಕೀಲರಾದ  ಎನ್ ಆರ್ ರಾವ್,  ಲೆಕ್ಕಪರಿಶೋಧಕರಾದ  ಸುಧೀರ್ ಶೆಟ್ಟಿ,    ಡಾ.ಬಿ.ಗೋಪಾಲಾಚಾರ್ಯರು . ಕೋಟಿಗೀತಾ ಲೇಖನ ಯಜ್ಞದ ಪ್ರಚಾರಕರಾದ  ರಮಣ ಆಚಾರ್ಯರು . ಚೆನ್ನೈನ  ಶ್ರೀಪುತ್ತಿಗೆ ಮಠದ ಅಧಿಕಾರಿಗಳಾದ ನಾರಾಯಣ ಆಚಾರ್ಯರು  . ಬಿ ಎಸ್ ಕೆ ಬಿ ಅಸೋಸಿಯೇಷನ ಡಾ. ಸಹನಾ ಪೋತಿ,  , ಹಾಗೂ ಚಂದ್ರಶೇಖರ್ ಕೆ. ಭಟ್     ,  ನೇರೊಳ್ ಬಾಲಾಜಿ ಮಂದಿರದ ಕಾರ್ಯ ಅಧ್ಯಕ್ಷ ಗೋಪಾಲ್ ವೈ ಶೆಟ್ಟಿ.  ಮತ್ತಿತರ ಭಕ್ತರು ಪಾಲ್ಗೊಂಡಿದ್ದರು. 

ಸಭಾ ಕಾರ್ಯಕ್ರಮದ ಬಳಿಕ ರಾತ್ರಿ ದೇವಸ್ಥಾನದ ದಲ್ಲಿ ವಿಶೇಷ ಪೂಜೆಗಳು ನಡೆದವು.

********************************************
ಮುಂಬಯಿ ಮಹಾನಗರದಲ್ಲಿ ನೆಲೆಸಿರುವ ಸಹೃದಯ ಜಿಜ್ಞಾಸುಗಳಿಗಾಗಿ ಬಿ.ಎಸ್.ಕೆ.ಬಿ.ಎಸೋಸಿಯೇಶನ್,  ಗೋಕುಲ, ಸಯನ್  ಪ್ರಧಾನ ಕೇಂದ್ರದಲ್ಲಿ "ಗೋಕುಲ ಸಾಂಸ್ಕೃತಿಕ ಶಿಕ್ಷಣ  ಕೇಂದ್ರ" ವನ್ನು ಪ್ರಾರಂಭಿಸಲಾಗುತ್ತಿದೆ. ಈ ಕೇಂದ್ರದಲ್ಲಿ ವಿವಿಧ ವಿಷಯಗಳ ಅಧ್ಯಯನಕ್ಕೆ ಅವಕಾಶವನ್ನು ಕಲ್ಪಿಸಲಾಗಿದೆ.
 ಭರತನಾಟ್ಯ - ತಬಲ - ಯಕ್ಷಗಾನ - ಭಜನೆ -ದಾಸ ಸಾಹಿತ್ಯ - ಭಗವದ್ಗೀತಾ - ವೇದ ಇವುಗಳ ಅಧ್ಯಯನಕ್ಕಾಗಿ ಈ ಕೇಂದ್ರವನ್ನು  ಭಾವಿ ಪರ್ಯಾಯ ಶ್ರೀ ಪುತ್ತಿಗೆ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರತೀರ್ಥಶ್ರೀಪಾದಂಗಳವರು ಉದ್ಘಾಟಿಸಿದರು. ಈ ಕೇಂದ್ರದ ಉಪಯೋಗವನ್ನು ಎಲ್ಲ ಜಿಜ್ಞಾಸುಗಳು ಪಡೆದುಕೊಳ್ಳದು   ಆಸಕ್ತರು ನೋಂದಣಿಗಾಗಿ --
 ಭರತನಾಟ್ಯ  ಶೈಲಿನಿ ರಾವ್   ಫೋನ್: 9322293777 
 ತಬಲಾ- ಡಾ. ಸಹನಾ ಪೋತಿ  ಫೋನ್:  8655086276  
ಯಕ್ಷಗಾನ - ಚಂದ್ರಶೇಖರ್ ಕೆ. ಭಟ್ - ಫೋನ್: 9082252890, 
 ಭಜನೆ- ದಾಸ ಸಾಹಿತ್ಯ -  ಪ್ರೇಮಾ ರಾವ್  ಫೋನ್: 9969549980 
 ಇವರನ್ನು ಸಂಪರ್ಕಿಸಬಹುದಾಗಿದೆ.

********************************************


No comments

Powered by Blogger.