ಕರ್ನಾಟಕಕ್ಕೆ ಮತ್ತೆ ಆಘಾತ! ತಮಿಳುನಾಡಿಗೆ ಪ್ರತಿದಿನ 3 ಸಾವಿರ ಕ್ಯೂಸೆಕ್​​ ನೀರು ಬಿಡುವಂತೆ CWRC ಆದೇಶ.

 ತಮಿಳುನಾಡಿಗೆ ಅಕ್ಟೋಬರ್ 16ರಿಂದ 31ರವರೆಗೆ ಪ್ರತಿ ದಿನ 3 ಸಾವಿರ ಕ್ಯೂಸೆಕ್​​ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಮಂಡಳಿ ಇಂದು ಆದೇಶ ಹೊರಡಿಸಿದೆ.

ಕೆಆರ್​ಎಸ್​ ಅಣೆಕಟ್ಟೆಯಿಂದತಮಿಳುನಾಡಿಗೆ ಅಕ್ಟೋಬರ್ 16ರಿಂದ ಅಕ್ಟೋಬರ್ 31 ರವರೆಗೆ ಪ್ರತಿ ದಿನ 3 ಸಾವಿರ ಕ್ಯೂಸೆಕ್​​ ನೀರು ಬಿಡುವಂತೆ ಕಾವೇರಿ ನೀರು ನಿರ್ವಹಣಾ ಮಂಡಳಿ (CWRC) ಆದೇಶಿಸಿದೆ.

ಪ್ರತಿದಿನ 16 ಸಾವಿರ ಕ್ಯೂಸೆಕ್​ ನೀರು ಬಿಡಲು ತಮಿಳುನಾಡು ಪಟ್ಟು ಹಿಡಿದಿತ್ತು. 15 ದಿನಗಳಲ್ಲಿ ಒಟ್ಟು 20.75 ಟಿಎಂಸಿ ನೀರು ಬಿಡಲು ತಮಿಳುನಾಡು ಆಗ್ರಹಿಸಿತ್ತು. ಆದರೆ, ಕಾವೇರಿ ಜಲಾಶಯದಿಂದ ಒಂದು ಹನಿ‌ ನೀರು ಬಿಡುವ ಸ್ಥಿತಿಯಲ್ಲಿ ಕರ್ನಾಟಕ ಇಲ್ಲ ಎಂದು ಸಿಡಬ್ಯೂಆರ್​ಸಿ ಎದುರು ಕರ್ನಾಟಕ ಬಲವಾದ ವಾದ ಮಂಡಿಸಿತ್ತು. ಬರಗಾಲ ಮತ್ತು ಮಳೆ ಕೊರತೆಯಿಂದ ಕಾವೇರಿ ಜಲಾಶಯಗಳಿಗೆ ಶೇಕಡಾ 50 ಕ್ಕೂ ಹೆಚ್ಚು ನೀರಿನ ಒಳಹರಿವಿನ ಕೊರತೆ ಉಂಟಾಗಿದೆ ಎಂದು ವಾದ ಮಂಡಿಸಲಾಗಿತ್ತು.

ಆದರೆ, ಎರಡೂ ರಾಜ್ಯಗಳ ವಾದ ಮಂಡನೆ ಆಲಿಸಿದ ಬಳಿಕ ತಮಿಳುನಾಡಿಗೆ ಅಕ್ಟೋಬರ್ ಅಂತ್ಯದ ತನಕ ಪ್ರತಿದಿನ 3 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಕರ್ನಾಟಕಕ್ಕೆ ಸಿಡಬ್ಯೂಆರ್​ಸಿ ಶಿಫಾರಸು ಮಾಡಿದೆ.

No comments

Powered by Blogger.