Home
>
ಮುಂಬಯಿ
>
ಸುದ್ದಿ
>
ಭಾಯಂದರ್ಪೂರ್ವದ ಶ್ರೀ ಮೂಕಾಂಬಿಕಾ ಶಾಂತಾದುರ್ಗಾ ಸೇವಾ ಸಮಿತಿ ವತಿಯಿಂದ '' ಶಿವದೂತೆ ಗುಳಿಗೆ ತುಳು ನಾಟಕ ,
ಭಾಯಂದರ್ಪೂರ್ವದ ಶ್ರೀ ಮೂಕಾಂಬಿಕಾ ಶಾಂತಾದುರ್ಗಾ ಸೇವಾ ಸಮಿತಿ ವತಿಯಿಂದ '' ಶಿವದೂತೆ ಗುಳಿಗೆ ತುಳು ನಾಟಕ ,
ಭಾಯಂದರ್ಪೂರ್ವದ
ಶ್ರೀ ಮೂಕಾಂಬಿಕಾ ಶಾಂತಾದುರ್ಗಾ ಸೇವಾ ಸಮಿತಿ ವತಿಯಿಂದ '' ಶಿವದೂತೆ ಗುಳಿಗೆ" ತುಳು ನಾಟಕ ,
ಸಾಧಕರಿಗೆ ಸನ್ಮಾನ.
ನಾಟಕ ಭೂತಾರಾಧನೆಗೆ ಹೊಸ ಶಕ್ತಿ ತುಂಬಿದೆ ನಗರಸೇವಕ: ಅರವಿಂದ್ ಶೆಟ್ಟಿ
ಚಿತ್ರ ವರದಿ : ದಿನೇಶ್ ಕುಲಾಲ್
ಭಾಯಂದರ್, ಅ 10- ಭಾಯಂದರ್ ಪೂರ್ವದ ಶ್ರೀ ಮೂಕಾಂಬಿಕಾ ಶಾಂತಾದುರ್ಗಾ ಸೇವಾ ಸಮಿತಿಯ ವತಿಯಿಂದ ಅ 8ರಂದು ರವಿವಾರ
ಮೇವಾರ್ ವಾಟಿಕಹಾಲ್,ಮೆಕ್‌ಡೊನಾಲ್ಡ್‌ನ ಎದುರುಗಡೆ, ಕನಕಿಯಾ ರೋಡ್, ಮೀರಾಭಾಯಂದರ್, ಮೀರಾರೋಡ್) ಇಲ್ಲಿ ಮೂಕಾಂಬಿಕಾ ಶಾಂತಾದುರ್ಗಾ ಸೇವಾ ಸಮಿತಿಯ ಧರ್ಮಸೇವಕ ಶೇಖರ ಎಸ್. ಶೆಟ್ಟಿ, ವಿಶ್ವನಾಥ್ ಶೆಟ್ಟಿ, ಸುರೇಂದ್ರ ಹೆಗ್ಡೆ, ಸುಧಾಕರ್ ಶೆಟ್ಟಿ, ಇವರ ಸಂಯೋಜನೆಯಲ್ಲಿ, ವಿಜಯ್ ಕುಮಾರ್ ಕೊಡಿಯಾಲ್ ನಿರ್ದೇಶನ ಶಿವ ದೂತೆ ಗುಳಿಗೆ ತುಳು ನಾಟಕ ಪ್ರದರ್ಶನದ ಸಾವಿರಾರು ಪ್ರೇಕ್ಷಕರ ಸಮ್ಮುಖದಲ್ಲಿ ನಡೆಯಿತು.
ನಾಟಕದ ಪ್ರಾರಂಭದ ಮೊದಲು
ಸಮಿತಿಯ ಸದಸ್ಯರ ಮಕ್ಕಳಿಂದ, ಹಾಗೂ ಚಿಣ್ಣರ ಬಿಂಬ ಭಾಯಾಂದರ್ ಶಿಭಿರದ ಮಕ್ಕಳಿಂದ, ಹಾಗೂ ಸಮಿತಿಯ ಮಹಿಳೆಯರಿಂದ ನೃತ್ಯ ವೈಭವ ನೆರೆದಿದ್ದ ಪ್ರೇಕ್ಷಕರ ಮನಃ ಸೂರೆಗೊಂಡಿತು.ನಂತರ
ಸಭಾ ಕಾರ್ಯಕ್ರಮ ಶೇಖರ್ ಎಸ್. ಶೆಟ್ಟಿ (ಧರ್ಮ ಸೇವಕರು ಶ್ರೀ ಮುಕಾಂಬಿಕಾ ಶಾಂತಾದುರ್ಗ ಸೇವಾ ಸಮಿತಿ ) ಗೌರವ ಉಪಸ್ಥಿತಿಯಲ್ಲಿ ನಡೆಯಿತು
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ.ಮಿರಾ ಭಾಯಂಧರ್ ನ್ ಕಾರ್ಪೊರೇಟರ್ ಅರವಿಂದ ಎ. ಶೆಟ್ಟಿ ಮಾತನಾಡುತ್ತಾ, ಇಂದಿನ ದಿನಗಳಲ್ಲಿ ನಮ್ಮ ಊರ ಸಂಸ್ಕೃತಿ, ದೈವಾರಾಧನೆ, ನಾಗಾರಾಧನೆ, ಮುಂತಾದ ಕಾರ್ಯಗಳಿಂದ ಮಾತ್ರ ಸಾಧ್ಯ, ಅದನ್ನು ಮುಂಬೈಯಲ್ಲಿ ಮೂಕಾಂಬಿಕಾ ಶಾಂತ ದುರ್ಗಾ ಸೇವಾ ಸಮಿತಿಯು ನಿರಂತರವಾಗಿ ಮಾಡಿಕೊಂಡು ಬಂದಿರುತ್ತದೆ, ಈ ಸಂಸ್ಥೆಯ ಭಾಗವಾಗಿ ಎಂದೆಂದಿಗೂ ನಿಮ್ಮೊಂದಿಗೆ ಇದ್ದೇನೆ ಎಂದು ಹೇಳಲು ಹೆಮ್ಮೆ ಪಡುತ್ತಾನೆ . ತುಳು ರಂಗಭೂಮಿಗೆ ಹೊಸತನವನ್ನು ನೀಡಿದ ಶಿವದೂತೆ ಗುಳಿಗೆ ತುಳು ನಾಟಕ ಭೂತಾರಾಧನೆಗೆ ಹೊಸ ಶಕ್ತಿ ತುಂಬಿದೆ ಎಂದು ನುಡಿದರು
ಸನ್ಮಾನ ನುಡಿ
ಡಾಕ್ಟರ್ ಅಂಬರೀಷ್ ಹೆಗ್ಡೆಯವರು ಮಾತನಾಡುತ್ತಾ
ನನ್ನ ವೈದ್ಯಕೀಯ ಹಾಗೂ ಸಾಮಾಜಿಕ ರಂಗವನ್ನು ಗುರುತಿಸಿ ನನ್ನನ್ನು ಸನ್ಮಾನ ಮಾಡಿದ್ದೀರಿ, ನಿಮಗೆಲ್ಲರಿಗೂ ಚಿರ ಋಣಿಯಾಗಿದ್ದೇನೆ
ಧಾರ್ಮಿಕ ರಂಗದಿಂದ ಸನ್ಮಾನ ಪಡೆದಾಗ ಮನಸ್ಸಿಗೆ ಹಿತವಾಗುತ್ತದೆ,ಎಂದರು.
-------
ಯೋಗೇಂದ್ರ ಗಾಣಿಗರು ಮಾತನಾಡುತ್ತಾ, ಸನ್ಮಾನಕ್ಕೆ ನನ್ನ ಆಯ್ಕೆ ನನ್ನೂರಿನ ಮೂಕಾಂಬಿಕಾ ದೇವಿಯ ವರ ಪ್ರಸಾದವೆಂದು ಭಾವಿಸುವೇನು, ಈ ಸಂಸ್ಥೆಯೂ ಹಲವಾರು ವರುಷದಿಂದ ನಡೆಸುವ ಧಾರ್ಮಿಕ ಕಾರ್ಯದ ಬಗ್ಗೆ ತಿಳಿದಿರುವೆನು, ಈ ಸಂಸ್ಥೆಯಿಂದ ಇನ್ನಷ್ಟು ಯಶಸ್ವಿ ಕಾರ್ಯಗಳು ನಡೆಯಲಿ ಎಂದರು,
---------------
ವಿಶೇಷ, ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀ ನರೇಂದ್ರ ಎಲ್ ಮೆಹತಾ ಮಾತನಾಡುತ್ತಾ, ಶ್ರೀ ಮೂಕಾಂಬಿಕಾ ಶಾಂತ ದುರ್ಗಾ ಸೇವಾ ಸಮಿತಿಯ ವತಿಯಿಂದ ವರುಷಕ್ಕೆ ಏಳು, ಎಂಟು, ಕಾರ್ಯಕ್ರಮವನ್ನು ಬಹಳ ಉತ್ಸವ, ಉಲ್ಲಸದೊಂದಿಗೆ ಬಹಳ, ವಿಜೃಂಭಣೆಯಿಂದ ಆಚರಸಲಾಗುತ್ತಿದೆ, ಅದರಲ್ಲಿ ಹೆಚ್ಚಿನ ಕಾರ್ಯಕ್ರಮದಲ್ಲಿ ಭಾಗಿಯಾಗುವ ಭಾಗ್ಯ ನನ್ನ ಪಾಲಿಗಿದೆ, ದಕ್ಷಿಣ ಕನ್ನಡದ ಎಲ್ಲಾ ಜನರು ನನಗೆ, ನನ್ನ ಹೃದಯಕ್ಕೆ ಆತೀ ಹೆಚ್ಚು ಸಮೀಪ ವರ್ತಿಗಳಾಗಿದ್ದಾರೆ, ಇಂದಿನ ಈ ಕಾರ್ಯಕ್ರಮ, ನೆರೆದಿದ್ದ ಜನ ಸಮೂಹ ನೋಡಿ ನನಗೆ ಆಶ್ಚರ್ಯವಾಗುತ್ತದೆ, ಇಲ್ಲಿಯೇ ಇಷ್ಟೊಂದು ಜನ ಸೇರಿದ್ದಾರೆ, ನಿಮ್ಮ ತವರಿನಲ್ಲಿ ಈ ಕಾರ್ಯಕ್ರಮಕ್ಕೆ ಅದೆಷ್ಟು ಜನರು ಸೇರ ಬಹುದು, ನಿಮ್ಮ ಭವಿಷ್ಯ ಎಲ್ಲಾ ಕಾರ್ಯಕ್ರಮಕ್ಕೂ ನಾನು ಭಾಗಿಯಾಗಿ, ಮೂಕಾಂಬಿಕೆಯ ಅನುಗ್ರಹವನ್ನು ಪಡೆಯುತ್ತೇನೆ ಎಂದರು
ವೇದಿಕೆಯಲ್ಲಿ ಶೇಖರ್ ಶೆಟ್ಟಿ ಧರ್ಮ ಸೇವಕ, ಇಂದಿನ ಸನ್ಮಾನ ಮೂರ್ತಿಗಳಾದ
ಡಾಕ್ಟರ್ ಅಂಬರೀಷ್ ಹೆಗ್ಡೆ, ಡಾಕ್ಟರ್ ಅರುಣೋದಯ ರೈ ಸುಪುತ್ರಿ ಡಾಕ್ಟರ್ ಸ್ವರೂಪ್, ಯೋಗೇಂದ್ರ ಗಾಣಿಗ, ಪ್ರವೀಣ್ ಶೆಟ್ಟಿ, (ಅಧ್ಯಕ್ಷರು ಶ್ರೀ ಶ್ರೀ ಮೂಕಾಂಬಿಕಾ ಶಾಂತದುರ್ಗ ಸೇವಾ ಸಮಿತಿ, ಹೋಟೆಲ್ ಬ್ಲೂ ನೈಟ್ ಕ್ಲಬ್, ಐಕಳ ಆನಂದ ಶೆಟ್ಟಿ ಹೊಟೇಲ್ ಉದ್ಯಮಿ) ಸುರೇಂದ್ರ ಹೆಗ್ಡೆ (ಹೊಟೇಲ್ ಉದ್ಯಮಿ)ಅರುಣ್ ಪಕ್ಕಳ (ಅರುಣ್ ಕ್ಲಾಸ್) ಅಜಿತ್ ಶೆಟ್ಟಿ ಹೋಟೆಲ್ ಉದ್ಯಮಿ, ಸೂರ್ಯಕಾಂತ್ ಜೆ. ಸುವರ್ಣ
ಭಾರತ್ ಬ್ಯಾಂಕ್ ನಿರ್ದೇಶಕರು (ಉಪಾಧ್ಯಕ್ಷರು, ರಾಷ್ಟ್ರೀಯ ಬಿಲ್ಲವ ಮಹಾಮಂಡಲ) ಗಂಗಾಧರ್ ಜೆ ಪೂಜಾರಿ ನಿರ್ದೇಶಕರು ಭಾರತ್ ಬ್ಯಾಂಕ್,
ನರೇಶ್ ಬಿ. ಪೂಜಾರಿ (ನಿರ್ದೇಶಕರು ಭಾರತ್ ಬ್ಯಾಂಕ್, ಕಾರ್ಯಾಧ್ಯಕ್ಷರು ಬಿಲ್ಲವರ ಎರೋಸಿಯೇಶನ್ ಬಾಯಂದರ್, ಸಂಪತ್ ಶೆಟ್ಟಿ, ಪಂಜದ ಗುತ್ತು (ಹೊಟೇಲ್ ಉದ್ಯಮಿ), ಶೋಭಾ ಶೇಖರ್ ಶೆಟ್ಟಿ ಸೌಮ್ಮಲತಾ ಕಯ್ಯಾ, ಯಶೋದಾ ಕೋಟ್ಯಾನ್, ಪ್ರೇಮಾ ಪಿ, ಕುಲಾಲ್ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು, ಮುಖ್ಯ ಅತಿಥಿಗಳನ್ನು ಶ್ರೀ ಮೂಕಾಂಬಿಕಾ ಶಾಂತ ದುರ್ಗಾ ಸಮಿತಿಯವತಿಯಿಂದ ಗೌರವದಿಂದ ಸತ್ಕರಿಸಲಾಯಿತು,
ಈ ಸಂದರ್ಭದಲ್ಲಿ ಸಾಧಕರದ ಮಿರಾ ಭಾಯಂಧರ್ ನ್
ಡಾ. ಅಂಬರೀಶ್ ಹೆಗ್ಡೆ
(ಸಾಯಿ ಬಾಬಾ ಹಾಸ್ಪಿಟಲ್
ಬಾಯಾಂಧರ್.)
ಮಿರಾ ಭಾಯಂಧರ್ ನ್ ಸೈಂಟ್ ಅಗ್ನೆಸ್ ಆಡಳಿತ ನಿರ್ದೇಶಕ
ಡಾ. ಅರುಣೋದಯ ರೈ, ಬಿಳಿಯೂರುಗುತ್ತು ಅವರ ಪರವಾಗಿ ಅವರ ಸಪುತ್ರಿ ಡಾಕ್ಟರ್ ಸ್ವರೂಪ್,
ಯೋಗೇಂದ್ರ ಗಾಣಿಗ (ಅಧ್ಯಕ್ಷರು, ನವ ತರುಣ ಮಿತ್ರ ಮಂಡಳ) ಗಣ್ಯರ ಸಮ್ಮುಖದಲ್ಲಿ ಸನ್ಮಾನಿಲಾಯಿತು,
ನಂತರ ಖ್ಯಾತ ನಾಟಕ ಕರ್ತ, ಶಿವ ದೂತ ಗುಳಿಗದ ದಿಗ್ದರ್ಶಕ ವಿಜಯ್ ಕುಮಾರ್ ಕೊಡಿಯಲ್ . ಪ್ರಕಾಶ್ ಶೆಟ್ಟಿ ಸುರತ್ಕಲ್. ಕರುಣಾಕರ್ ಶೆಟ್ಟಿ ಕುಕ್ಕುಂದೂರು ಸತ್ಕರಿಸಲಾಯಿತು.
ಕಾರ್ಯಕ್ರಮಕ್ಕೆ ಆನಿಲ್ ಭಟ್ (ಭಟ್ ಕ್ಯಾಟರ ಆ್ಯಂಡ್ ಭಟ್ ಗ್ರಾಫಿಕ್ ) ಸತೀಶ್ ಜೆ. ಪೂಜಾರಿ, ಮತ್ತು ಆಶೋಕ್ ಪೂಜಾರಿ (ಹೋಟೇಲ್ ಸದಾನಂದ್)
ಉದಯ್ ಡಿ ಸುವರ್ಣ, ರವಿ ಶೆಟ್ಟಿ, ದೊರಾಯಿ ರೈ, ನಿಶು ಶೆಟ್ಟಿ (ಹೊಟೇಲ್ ಮೀರಾ), ರಮೇಶ್ ಸಫಲಿಗ (ಹೊಟೆಲ್ ಫ್ರೆಂಡ್ಸ್ ಕಾರ್ನರ್), ರಾಜೇಶ್ ಶೆಟ್ಟಿ ಮತ್ತು ಮಹೇಶ್ (ಹೊಟೇಲ್ ಉದ್ಯಮಿ) ವಿಜಯ್ ಶೆಟ್ಟಿ ಮೂಡುಬೆಳ್ಳೆ, ಹರೀಶ್ ಪೂಜಾರಿ, ಪ್ರವೀಣ್ ಪೂಜಾರಿ ಬೈಂದೂರು,ದಿನೇಶ್ ಅಂಚನ್, ರವಿ ಪುತ್ರನ್, ಭಾಸ್ಕರ್ ಪೂಜಾರಿ (ಹೊಟೇಲ್ ಆಚಾಲ್), ಆಜಿತ್ ಶೆಟ್ಟಿ (ಹೊಟೇಲ್ ಅಕ್ಷಯ್), ಜಯ ದಿನೇಶ್ (ಪಟೇಲ್ ಸಮುದ್ರ), ವಿಶ್ವನಾಥ್ ಶೆಟ್ಟಿ, ಮೋಹನ್ ಪಿ. ಬಂಗೇರ,
ಪುರುಷೋತ್ತಮ್ ಕುಲಾಲ್, ದಿವಾಕರ್ ಶೆಟ್ಟಿ, ರಮೇಶ್ ಶೆಟ್ಟಿ ಎರ್ಮಾಳ್, ಜಯರಾಮ್ ಎಂ.ಶೆಟ್ಟಿ ಹನುಮನ್ ನಗರ್, ಜಯಪ್ರಕಾಶ್ ಶೆಟ್ಟಿ, ಪ್ರವೀಣ್ - ಕಯ್ಯಾ ಸಂತೆಗುತ್ತು ಹರೀಶ್ ರೈ, ಭಾರತಿ ಪಾರಿಕ್, ಹರೀಶ್ ಶೆಟ್ಟಿ ಮೀರಾರೋಡ್, ದಿನೇಶ್ ಸುವರ್ಣ , ಕರಾವಳಿ ಸೌಂಡ್ ಗೋಪಾಲ್ ಶೆಟ್ಟಿ ಕುಕ್ಕುಂದೂರು, ಶೇಖರ್ ಪೂಜಾರಿ ಶಿವ ಸೇನಾ, ಶೇಖರ್ ಶೆಟ್ಟಿ ಫಿನಾಯಲ್, ಅರುಣ್ ಶೆಟ್ಟಿ, ಬಾಲಕೃಷ್ಣ ಸುವರ್ಣ, ವಂದನಾ ಶೆಟ್ಟಿ, ಶೋಭಾ ಆರ್. ಶೆಟ್ಟಿ, ಶ್ರೀಲತಾ ಶೆಟ್ಟಿ, ಚಂದ್ರಾವತಿ ಸಾಲ್ಯಾನ್, ವಿದ್ಯಾಬಂಗೇರ,ಶೈಲಜ ಶೆಟ್ಟಿ, ವಂದನಾ ಅರುಣ್, ಸುಮಲತಾ ಶೆಟ್ಟಿ, ಪ್ರೇಮಾ ಹೆಗ್ಡೆ, ರತ್ನಾವತಿ ಸಾಲ್ಯಾನ್, ರಮ ವಿ ಶೆಟ್ಟಿ, ಜಯ ಕೋಟ್ಯಾನ್, ಸುಜಾತ ಪೂಜಾರಿ, ಪ್ರೇಮ ಎಲ್ ಶೆಟ್ಟಿ, ದೇವಕಿ ನಾಯಕ್ ಕುಶಲ ಬಂಗೇರ, ಆನಿಲ್ ಸುವರ್ಣ, ಅನಿತಾ ಶೆಟ್ಟಿ, ರಮ ಮೂಲ್ಯ ಚಂದ್ರಾವತಿ ಮೊಗವೀರ, ಶಕುಂತ, ಶೀಲಾ, ಬೇಬಿ ಲಕ್ಕಿಸ್ಟಾರ್, ಶಾಲಿನಿ ಎಸ್. ಶೆಟ್ಟಿ ಚಂದ್ರಾವತಿ ಮೆಂಡನ್ ಸಹಕಾರ ನೀಡಿ ಸಹಕರಿಸಿದರು
ಕಾರ್ಯಕ್ರಮವನ್ನು ವಿಶ್ವನಾಥ್ ಶೆಟ್ಟಿ ಕರ್ನಿರೆ ಪಚ್ಚಂಗೇರಿ ನಿರೂಪಿಸಿದರು.
ಕಾರ್ಯಕ್ರಮದ ಕೊನೆಗೆ ಪ್ರೀತಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
--------
Post a Comment