ಅಕ್ಟೋಬರ್ 15ರಿಂದ 24ರ ವರೆಗೆ ಶ್ರೀ ಜಗದಂಬ ಮಂದಿರ ಡೊಂಬಿವಲಿಯಲ್ಲಿ ಒಂಬತ್ತನೇ ವರ್ಷದ ಶರನ್ನವರಾತ್ರಿ ಮಹೋತ್ಸವ.

ಅಕ್ಟೋಬರ್ 15ರಿಂದ 24ರ ವರೆಗೆ ಶ್ರೀ ಜಗದಂಬ ಮಂದಿರ ಡೊಂಬಿವಲಿಯಲ್ಲಿ
 ಒಂಬತ್ತನೇ ವರ್ಷದ ಶರನ್ನವರಾತ್ರಿ ಮಹೋತ್ಸವ.

 ಡೊಂಬಿವಲಿ ಪಶ್ಚಿಮದ ಗೋಪಿನಾಥ್ ಚೌಕ್ ಬಲಿ ಇರುವ ಯಕ್ಷಕಲಾ ಸಂಸ್ಥೆ ಸಂಚಾಲಿತ ಶ್ರೀ ಜಗದಂಬ ಮಂದಿರದಲ್ಲಿ ದಿನಾಂಕ 15.10.2023 ರ ರವಿವಾರದಿಂದ ದಿನಾಂಕ 24.10.2023ರ ಮಂಗಳವಾರದವರೆಗೆ ನವರಾತ್ರಿ ಹಾಗೂ ವಿಜಯದಶಮಿ ಮಹೋತ್ಸವವು ಜರುಗಲಿರುವುದು. ಶ್ರೀ ಕ್ಷೇತ್ರದ ತಂತ್ರಿಯವರ ಶುಭ ಆಶೀರ್ವಾದದೊಂದಿಗೆ ಹಾಗೂ ಪ್ರಧಾನ ಅರ್ಚಕರಾದ ರಘುಪತಿ ಭಟ್ ರವರ ನೇತೃತ್ವದಲ್ಲಿ ಚಂಡಿಕಾ ಹೋಮ, ದುರ್ಗ ನಮಸ್ಕಾರ ಪೂಜೆ ಮತ್ತು ರಂಗ ಪೂಜೆ ಸಹಿತ ಶರನ್ನವರಾತ್ರಿ ಮಹೋತ್ಸವವೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನೆರವೇರಲಿರುವುದು. 

 ಈ ಸಂದರ್ಭದಲ್ಲಿ ಪ್ರತಿ ದಿನ ಮಧ್ಯಾಹ್ನ 12:30 ಕ್ಕೆ ಹಾಗೂ ರಾತ್ರಿ 8.00 ಗಂಟೆಗೆ ಮಹಾಮಂಗಳಾರತಿ ನಡೆದು ಅನ್ನಸಂತರ್ಪಣೆ ನಡೆಯಲಿರುವುದು. 

ಪ್ರತಿನಿತ್ಯ ಆಮಂತ್ರಿತ ಭಜನಾ ಮಂಡಳಿಗಳಿಂದ ಬೆಳಿಗ್ಗೆ 10.00 ಗಂಟೆಗೆ ಹಾಗೂ ಸಾಯಂಕಾಲ 1.00 ಗಂಟೆಗೆ ಭಜನಾಮೃತ ಸೇವೆ ನಡೆಯಲಿದೆ.

 ದಿನಾಂಕ 15.10.2023 ರವಿವಾರ ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ, ಪಂಚಾಮೃತ ಅಭಿಷೇಕ, ತೋರಣ ಮುಹೂರ್ತ 
 ಸಂಜೆ 6.00 ಗಂಟೆಗೆ ದುರ್ಗಾ ನಮಸ್ಕಾರ ಪೂಜೆ, ರಾತ್ರಿ 8.45 ಕ್ಕೆ ಶ್ರೀ ರಾಧಾಕೃಷ್ಣ ಶನೀಶ್ವರ ಮಂದಿರದ ಮಹಿಳಾ ವಿಭಾಗದ ವತಿಯಿಂದ ಕುಣಿತ ಭಜನೆ ನಡೆಯಲಿದೆ. 

 ದಿನಾಂಕ 16.10.2023 ಸೋಮವಾರ ಮುಂಜಾನೆ 9 ರಿಂದ ತುಲಾಭಾರ ಸೇವೆ, ಸಂಜೆ 6.00 ಕ್ಕೆ ದುರ್ಗಾ ನಮಸ್ಕಾರ ಪೂಜೆ. 

ದಿನಾಂಕ 17.10.2023 ಮಂಗಳವಾರ ಸಂಜೆ 6.00 ಕ್ಕೆ ರಂಗ ಪೂಜೆ.

ದಿನಾಂಕ 18.10.2023 ಬುಧವಾರ ಸಂಜೆ 6.00 ಕ್ಕೆ ದುರ್ಗಾ ನಮಸ್ಕಾರ ಪೂಜೆ, ರಾತ್ರಿ 8.00 ಕ್ಕೆ ಪಲ್ಲಕ್ಕಿ ಉತ್ಸವ.

ದಿನಾಂಕ 19.10.2023 ಗುರುವಾರ 10.00 ಕ್ಕೆ ಲಲಿತ ನಾಮ ಸಹಸ್ರನೆ. ರಾತ್ರಿ9 9.00 ರಿಂದ ಶ್ರೀ ಜಗದಂಬಾ ಮಂದಿರ, ಮಹಿಳಾ ವಿಭಾಗದ ಸಂಯೋಜನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ದಿನಾಂಕ 20.10.2023 ಶುಕ್ರವಾರ ಬೆಳಿಗ್ಗೆ 9.00 ರಿಂದ ಚಂಡಿಕಾ ಹೋಮ,  ಸಂಜೆ 5.00 ಗಂಟೆಯಿಂದ ಶ್ರೀ ಅಜಿತ ಶೆಟ್ಟಿ, ಮೀರಾ ರೋಡ್ ಅವರ ಸಹಾಯಕತ್ವ ದಲ್ಲಿ ಶ್ರೀ ದುರ್ಗಾ ಪರಮೇಶ್ವರಿ ಕೃಪಾಪೋಷಿತ ಯಕ್ಷಗಾನ ಮಿತ್ರ ಮಂಡಳಿ, ಮುಂಬಯಿ ಇವರಿಂದ "ಕುಂಜ ರoಗರ ದೈವ ಪ್ರತಾಪ" ಯಕ್ಷಗಾನ ಬಯಲಾಟ ಪ್ರದರ್ಶನ ಗೊಳ್ಳಲಿದೆ.

ದಿನಾಂಕ 21.10.2021 ಶನಿವಾರ ಸಾಯಂಕಾಲ 5.00 ರಿಂದ ಭ್ರಾಮರಿ ಕಲಾ ತಂಡ (ಸತೀಶ್ ಮನ್ಕೂರ್) ಮುಂಬಯಿ, ಮಂಗಳೂರು ಇವರಿಂದ ಭಕ್ತಿ ರಸಮಂಜರಿ ಕಾರ್ಯಕ್ರಮ,  ರಾತ್ರಿ 9.00 ಕ್ಕೆ  ಶ್ರೀ ಜಗದಂಬಾ ಮಂದಿರ ಯುವ ವಿಭಾಗದ ಆಯೋಜನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ದಿನಾಂಕ 22.10.2023 ರವಿವಾರ ಬೆಳಿಗ್ಗೆ 9.00 ಕ್ಕೆ ಚಂಡಿಕಾ ಹೋಮ, ಸಂಜೆ 6.00 ಕ್ಕೆ ರಂಗ ಪೂಜೆ

ದಿನಾಂಕ 23.10.2013 ಸೋಮವಾರ ಮುಂಜಾನೆ 9,00ಕ್ಕೆ ದುರ್ಗಾ ಹೋಮ (ಸಂಪೂರ್ಣ ಆಹುತಿ)  ರಾತ್ರಿ 9.30ಕ್ಕೆ ಶ್ರೀ ಸತೀಶ ಶೆಟ್ಟಿ ಅಜೆಕಾರು ಮತ್ತು ಕುಟುಂಬಸ್ಥರ ಸಹಕಾರದಲ್ಲಿ   ಶ್ರೀ ಗೀತಾಂಬಿಕ ಯಕ್ಷಗಾನ ಮಂಡಳಿ ಅಸಲ್ಫಾ, ಮುಂಬಯಿ ಹಾಗೂ ಊರಿನ ಅತಿಥಿ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ಬಯಲಾಟ "ಶ್ರೀ ದೇವಿ ಮಹಾತ್ಮೆ" ರಾತ್ರಿ 11.30ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ, ಲಕ್ಕಿ ಡಿಪ್‌ ಡ್ರಾ ಫಲಿತಾಂಶ ನಡೆಯಲಿದೆ.

ದಿನಾಂಕ 24.10.2023 ಮಂಗಳವಾರ ಮಧ್ಯಾಹ್ನ 12.30ಕ್ಕೆಮಹಾಮಂಗಳಾರತಿ, ಮಧ್ಯಾಹ್ನ 1.00 ಕ್ಕೆ ಪಲ್ಲ ಪೂಜಾ ಮತ್ತು ಅನ್ನಸಂತರ್ಪಣೆ ಜರುಗಲಿದೆ.

ಭಕ್ತಾಭಿಮಾನಿಗಳು ಶರನ್ನವರಾತ್ರಿಯ ಎಲ್ಲಾ ಶುಭದಿನಗಳಲ್ಲಿ ಎಲ್ಲಾ ತರಹದ ಸೇವೆಯಲ್ಲಿ ಪಾಲ್ಗೊಂಡು, ತನು ಮನ ಧನಗಳಿಂದ ಸಹಕರಿಸಿ, ಶ್ರೀ ಜಗದಂಬೆಯ ಸರನ್ನವರಾತ್ರಿಯ ಮಹೋತ್ಸವವನ್ನು ಚೆಂದಗಾಣಿಸಿ ಕೊಡಬೇಕಾಗಿ ಮಂದಿರದ ಗೌರವ ಅಧ್ಯಕ್ಷರು, ಅಧ್ಯಕ್ಷರು, ಕಾರ್ಯಕಾರಿ ಸಮಿತಿಯ ಸದಸ್ಯರು, ಪೂಜಾ ಸಮಿತಿ, ಶನಿಪೂಜಾ ಸಮಿತಿ, ಯುವ ವಿಭಾಗ, ಮಹಿಳಾ ವಿಭಾಗ ಹಾಗೂ ಸರ್ವ ಸದಸ್ಯರು ಪತ್ರಿಕಾ ಪ್ರಕಟಣೆಯಲ್ಲಿ  ವಿನಂತಿಸಿದ್ದಾರೆ. 

ಶನಿಪೂಜೆ ಮಾಡಲಿಚ್ಚಿಸುವ ಭಕ್ತರು ಶ್ರೀಜಗದಂಬಾ ಮಂದಿರ ಕಾರ್ಯಕಾರಿ ಸಮಿತಿಗೆ ತಿಳಿಸಬೇಕಾಗಿ ವಿನಂತಿ,

ನವರಾತ್ರಿಯ ಸಮಯ ನಡೆಯುವ ವಿಶೇಷ ಸೇವೆ: 

ನವರಾತ್ರಿಯ ಸಂದರ್ಭದಲ್ಲಿ ಶ್ರೀ ದೇವಿಯ ಸನ್ನಿಧಾನದಲ್ಲಿ ಪ್ರತಿ ದಿನ ಪಂಚಾಮೃತ ಅಭಿಷೇಕ, ಅಲಂಕಾರ ಸೇವೆ, ಮಲ್ಲಿಗೆ ಸೇವೆ, ಹೂವಿನ ಪೂಜೆ, ದೀಪಾರಾಧನೆ, ಕುಂಕಮಾರ್ಚನೆ, ಕರ್ಪೂರ ಆರತಿ, ಅನ್ನಸಂತರ್ಪಣೆ ಗಾಗಿ  ಹೊರೆ ಕಾಣಿಕೆಗಳನ್ನು ಹಾಗೂ ಎಲ್ಲಾ ತರಹದ ಹರಕೆ ಹಾಗೂ ಧನ ಸಹಾಯವನ್ನು ಭಕ್ತಿಪೂರ್ವಕವಾಗಿ ಸ್ವೀಕರಿಸಲಾಗುವುದು.


No comments

Powered by Blogger.