ರಕ್ತದ ಮೂಲಕ ಪ್ರಧಾನಿಗೆ ಪತ್ರ ಬರೆದು ಅಭಿಯಾನ ಆರಂಭಿಸಿದ ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ.


ರಕ್ತದ ಮೂಲಕ ಪ್ರಧಾನಿಗೆ ಪತ್ರ ಬರೆದು ಅಭಿಯಾನ ಆರಂಭಿಸಿದ ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ.

ರಕ್ತದ ಮೂಲಕ ಪತ್ರ ಬರೆದು ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ಅವರು ಅಭಿಯಾನ ಆರಂಭಿಸಿದ್ದಾರೆ. ಕಾವೇರಿ ನಮ್ಮದು. ಕಾವೇರಿ ವಿಚಾರವಾಗಿ ರಾಜ್ಯಕ್ಕೆ ನ್ಯಾಯ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ಅವರು ರಕ್ತದಲ್ಲಿ ಪತ್ರ ಬರೆದು ಮನವಿ ಮಾಡಿದ್ದಾರೆ.


ಕರವೇ ನಾರಾಯಣ ಗೌಡ ಅವರು ರಕ್ತದ ಮೂಲಕ ಸುಮಾರು 75 ಪದ ಬರೆದು ಮೋದಿ ಅವರಿಗೆ ಕಾವೇರಿ ನೀರಿಗಾಗಿ ಮನವಿ ಮಾಡಿದ್ದಾರೆ. ಕರವೇ ಕಾರ್ಯಕರ್ತರಿಂದಲೂ ರಕ್ತದ ಮೂಲಕ 5 ಪದ ಬರೆದು ಪತ್ರ ಫೋಸ್ಟ್ ಮಾಡಲಾಗಿದೆ. ಪ್ರಧಾನಿಗಳೇ ಕಾವೇರಿ ವಿಚಾರದಲ್ಲಿ ಮಧ್ಯ ಪ್ರವೇಶಿಸಿ ಅಂತ ಗಾಂಧೀನಗರದ ಕರವೇ ಕೇಂದ್ರ ಕಚೇರಿಯಲ್ಲಿ ರಕ್ತದಲ್ಲಿ ಪತ್ರ ಬರೆದು ಚಳುವಳಿ ಆರಂಭಿಸಲಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ರಕ್ತದಲ್ಲಿ ಪತ್ರ ಬರೆದು ಅಭಿಯಾನ ಮಾಡಲಾಗುತ್ತದೆ. ಒಂದು ಲಕ್ಷಕ್ಕೂ ಅಧಿಕ ರಕ್ತದ ಪತ್ರವನ್ನು ಬರೆದು ಕೂಡಲೇ ಪ್ರಧಾನಿ ಕಚೇರಿ ವಿಳಾಸಕ್ಕೆ ಪೋಸ್ಟ್‌ ಮಾಡಲು ಕರವೇ ಮುಂದಾಗಿದೆ.

No comments

Powered by Blogger.